ವೈಫಲ್ಯವನ್ನು ಮರೆಮಾಚಲು ದೊಡ್ಡ ಸುಳ್ಳು ಹೇಳಲಾಗುತ್ತಿದೆ – ರಣದೀಪ್ ಸುರ್ಜೆವಾಲಾ

ನವದೆಹಲಿ : ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ರವರು ಸಂಸತ್ತಿನ ಕಲಾಪದಲ್ಲಿ ಮಾತನಾಡುತ್ತಾ, 2019ರಲ್ಲಿ ದೇಶದಲ್ಲಿ 5957 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. 2020ರಲ್ಲಿ ಈ ಪ್ರಮಾಣ 5579ಕ್ಕೆ ಇಳಿದಿದೆ ಎಂಬ ಮಾಹಿತಿ ನೀಡಿದ್ದರು. ಇದಕ್ಕೆ ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೆವಾಲಾ ಎಂತ ಸುಳ್ಳ ಹೇಳುತ್ತಿದ್ದೀರಿ ಎಂದು ಪ್ರತಿಕ್ರಿಯಿಸಿದ್ದಾರೆ.

ವೈಫಲ್ಯವನ್ನು ಮರೆಮಾಡಲು ಇಷ್ಟು ದೊಡ್ಡ ಸುಳ್ಳು ಹೇಳಬೇಡಿ’ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ವಿರುದ್ಧ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ಬುಧವಾರ ಟ್ವೀಟ್ ಮಾಡಿದ್ದಾರೆ.

”ತೋಮರ್ ಸರ್, ವೈಫಲ್ಯವನ್ನು ಮರೆಮಾಡಲು ಇಷ್ಟು ದೊಡ್ಡ ಸುಳ್ಳು! ಸತ್ಯ- 2020ರಲ್ಲಿ 10677 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 4090 ಸ್ವಂತ ಹೊಲ ಹೊಂದಿರುವ ರೈತರು,ಗುತ್ತಿಗೆ ಪಡೆದು ಕೃಷಿ ಮಾಡುತ್ತಿದ್ದ 639 ರೈತರು, 5097 ಇತರರ ಹೊಲಗಳಲ್ಲಿ ಕೆಲಸ ಮಾಡಿದ ರೈತರು. ಕಳೆದ 7 ವರ್ಷಗಳಲ್ಲಿ 78303 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.” ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ಟ್ವೀಟ್ ಮಾಡಿದ್ದಾರೆ.

ಹಿಂದಿನ ವರ್ಷಗಳಿಗೆ ಹೋಲಿಸಿದರೆ 2020 ರಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ 5,579 ಕ್ಕೆ ಇಳಿದಿದೆ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಇತ್ತೀಚಿನ ಎನ್‌ಸಿಆರ್‌ಬಿ ವರದಿಯನ್ನು ಉಲ್ಲೇಖಿಸಿ ಮಂಗಳವಾರ ಸಂಸತ್ತಿನಲ್ಲಿ ಮಾಹಿತಿ ನೀಡಿದ್ದರು.

ವ್ಯಕ್ತಿಗಳ (ರೈತರನ್ನು ಒಳಗೊಂಡಂತೆ) ಆತ್ಮಹತ್ಯೆಗೆ ಕೌಟುಂಬಿಕ ಸಮಸ್ಯೆಗಳು, ಅನಾರೋಗ್ಯ, ಮಾದಕ ವ್ಯಸನ, ವಿವಾಹ ಸಂಬಂಧಿತ ಸಮಸ್ಯೆಗಳು, ಪ್ರೇಮ ವ್ಯವಹಾರಗಳು, ದಿವಾಳಿತನ ಅಥವಾ ಋಣಭಾರ, ಪರೀಕ್ಷೆಯಲ್ಲಿ ವಿಫಲತೆ, ನಿರುದ್ಯೋಗ,ವೃತ್ತಿ ಸಮಸ್ಯೆ ಮತ್ತು ಆಸ್ತಿ ವಿವಾದಗಳೂ ಪ್ರಮುಖ ಕಾರಣಗಳು ಎಂದು ತೋಮರ್ ಹೇಳಿದ್ದರು.

Donate Janashakthi Media

Leave a Reply

Your email address will not be published. Required fields are marked *