ಬೆಂಗಳೂರು: ರಾಮೇಶ್ವರಂ ಕೆಫೆಯ ಬಾಂಬ್ ಬ್ಲಾಸ್ಟ್ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಸಿರುವುದಾಗಿ ಎನ್ಐಎ ಸ್ಪಷ್ಟಪಡಿಸಿದೆ.
ಈ ಬಗ್ಗೆ ಎನ್ಐಎ ಟ್ವಿಟ್ ಮಾಡಿದ್ದು, ಪ್ರಮುಖ ಆರೋಪಿಯಾದ ಮುಜಾಮುಲ್ ಶರೀಫ್ ಆಗಿದ್ದು,ಈತನ ಬಂಧನದ ಬಗ್ಗೆ ಖಚಿತಪಡಿಸಿದೆ.
ಪ್ರಕರಣದಲ್ಲಿ ಗುರುತಿಸಲಾದ ಇತರ ಇಬ್ಬರು ಆರೋಪಿಗಳಿಗೆ ಮುಜಾಮಿಲ್ ಶರೀಫ್ ಸಹಕಾರ ನೀಡಿದ್ದ’ ಎಂದು ತನಿಖೆಯಿಂದ ತಿಳಿದುಬಂದಿದೆ. ಬಂಧನದ ವೇಳೆ ಈತನ ಬಳಿ ಇದ್ದ ವಿವಿಧ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದೆ.
ಈತ ರಾಮೇಶ್ವರಂ ಕೆಫ್ ಬ್ಲಾಸ್ಟ್ ಆದ ಬಾಂಬ್ ತಯಾರಿಕೆಯ ಪ್ರಮುಖನಾಗಿದ್ದ. ರಾಷ್ಟ್ರೀಯ ತನಿಖಾ ಸಂಸ್ಥೆ 3 ರಾಜ್ಯಗಳ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದ ನಂತರ ಪ್ರಮುಖ ಆರೋಪಿಯನ್ನು ಬಂಧಿಸಿದೆ.
ಕರ್ನಾಟಕದ 12, ತಮಿಳುನಾಡಿನ 5 ಮತ್ತು ಉತ್ತರ ಪ್ರದೇಶದ 1 ಸೇರಿದಂತೆ 18 ಸ್ಥಳಗಳಲ್ಲಿ ಎನ್ಐಎ ತಂಡಗಳು ದಾಳಿ ಮಾಡಿತ್ತು. ಇದಾದ ನಂತರ ಮುಜಾಮಿಲ್ ಶರೀಫ್ನನ್ನು ಬಂಧಿಸಲಾಗಿದೆ ಎಂದು ಟ್ವಿಟ್ನಲ್ಲಿ ತಿಳಿಸಿದೆ.