ರಾಮೇಶ್ವರಂ ಕೆಫೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ; ಶಂಕಿತ ಆರೋಪಿಯ ಬಂಧನ

ಹೊಸದಿಲ್ಲಿ:ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯು ಕಂಡಿದ್ದು,  ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್‌ಐಎ) ಒಬ್ಬ ಶಂಕಿತ ಆರೋಪಿಯನ್ನು ಬುಧವಾರ ಬಂಧಿಸಲಾಗಿದೆ ಎಂದು ವರದಿಯಾಗಿದೆ. ರಾಮೇಶ್ವರಂ ಕೆಫೆ

ಶಂಕಿತ ಆರೋಪಿ ಶಬ್ಬೀರ್‌ನನ್ನು ಬಳ್ಳಾರಿಯಲ್ಲಿ ಬಂಧಿಸಲಾಗಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಮಾರ್ಚ್ 1ರಂದು ವೈಟ್‌ ಫೀಲ್ಡ್‌ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ್ದ ಐಇಡಿ ಸ್ಫೋಟದಲ್ಲಿ ಕನಿಷ್ಠ 9 ಮಂದಿ ಗಾಯಗೊಂಡಿದ್ದರು. ಕೇಂದ್ರ ಗೃಹ ಸಚಿವಾಲಯದ ಸೂಚನೆಯಂತೆ ಎನ್‌ಐಎ ಈ ಪ್ರಕರಣದ ತನಿಖೆಯನ್ನು ವಹಿಸಿಕೊಂಡಿತ್ತು.

ಬಂಧಿತ ಶಬ್ಬೀರ್, ಸ್ಫೋಟದ ದಿನದಂದು ಕೆಫೆ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಕಂಡುಬಂದಿದ್ದ ಮುಖ್ಯ ಶಂಕಿತನ ಜತೆಗಾರ ಎಂದು ನಂಬಲಾಗಿದೆ. ಬಳ್ಳಾರಿ ಕೌಲ್ ಬಜಾರ್ ಪ್ರದೇಶದ ಆತ ಬುಧವಾರ ಬೆಳಿಗ್ಗೆ ಎನ್‌ಐಎಗೆ ಬಲೆಗೆ ಬಿದ್ದಿದ್ದಾನೆ. ಸ್ಫೋಟದ ಬಗ್ಗೆ ಶಬ್ಬೀರ್‌ಗೆ ಮಾಹಿತಿ ಇದ್ದು, ಆತನ ಇತ್ತೀಚಿನ ಪ್ರಯಾಣ ಇತಿಹಾಸದ ಆಧಾರದಲ್ಲಿ ಬಂಧಿಸಲಾಗಿದೆ.

ಸ್ಫೋಟ ಪ್ರಕರಣದ ಜಂಟಿ ತನಿಖೆ ನಡೆಸುತ್ತಿರುವ ಎನ್‌ಐಎ ಮತ್ತು ಕೇಂದ್ರ ಅಪರಾಧ ದಳವು ಕಳೆದ ವಾರ ಬಳ್ಳಾರಿಯ ಕೌಲ್ ಬಜಾರ್‌ನಲ್ಲಿ ಒಬ್ಬ ಬಟ್ಟೆ ವ್ಯಾಪಾರಿ ಹಾಗೂ ನಿಷೇಧಿತ ಪಿಎಫ್‌ಐ ಸದಸ್ಯನನ್ನು ಬಂಧಿಸಿದ್ದವು. ಬಂಧಿತ ಇಬ್ಬರಲ್ಲಿ, ನಿಷೇಧಿತ ಪಿಎಫ್‌ಐ ಸದಸ್ಯ ಈ ಅಪರಾಧ ಸಂಚಿನಲ್ಲಿ ಭಾಗಿಯಾಗಿದ್ದಾನೆ. ಆತ ಕೆಲವು ಭಯೋತ್ಪಾದನಾ ಸಂಘಟನೆಗಳ ಜತೆ ಸಮೀಪದ ನಂಟು ಹೊಂದಿದ್ದಾನೆ. ಕೆಫೆಯಲ್ಲಿ ಬಾಂಬ್ ಇರಿಸಿದಾತ ಸೇರಿದಂತೆ ಅನೇಕ ವ್ಯಕ್ತಿಗಳನ್ನು ಪಿಎಫ್‌ಐ ಸದಸ್ಯರ ನಂಟು ಇರಬಹುದು ಎಂದು ತನಿಖಾ ತಂಡಗಳು ಶಂಕಿಸಿವೆ.

ಇದನ್ನು ಓದಿ : ಆನೇಕಲ್: ನಗ್ನ ಸ್ಥಿತಿಯಲ್ಲಿ ಅಪರಿಚಿತ ಯುವತಿ ಶವ ಪತ್ತೆ, ಕೊಲೆಗೈದಿರುವ ಶಂಕೆ

ಮಾರ್ಚ್ 3ರಂದು ತನಿಖೆ ವಹಿಸಿಕೊಂಡಿದ್ದ ಎನ್‌ಐಎ, ಮಾರ್ಚ್ 1ರಂದು ಕೆಫೆಯಲ್ಲಿ ಐಇಡಿ ಇರಿಸಿದ್ದ ಎಂದು ನಂಬಲಾಗಿರುವ ಶಂಕಿತನ ಸುಳಿವು ನೀಡುವಂತೆ ಸಾರ್ವಜನಿಕರ ಸಹಕಾರವನ್ನು ಕೋರಿತ್ತು. ಶಂಕಿತನ ಜಾಡು ಪತ್ತೆಗೆ ಸಿಸಿಟಿವಿ ಕ್ಯಾಮೆರಾಗಳನ್ನು ಜಾಲಾಡಲಾಗಿತ್ತು. ಅದೇ ದಿನ ರಾತ್ರಿ 9 ಗಂಟೆಗೆ ಆತ ಬಸ್ ನಿಲ್ದಾಣವೊಂದರಲ್ಲಿ ಅಡ್ಡಾಡಿರುವುದು ಕಂಡುಬಂದಿತ್ತು. ಶಂಕಿತ ಆರೋಪಿ ಘಟನೆ ಬಳಿಕ ತನ್ನ ಉಡುಪು ಬದಲಿಸಿಕೊಂಡು, ವಿಭಿನ್ನ ಸ್ಥಳಗಳಿಗೆ ಬಸ್‌ನಲ್ಲಿ ಪ್ರಯಾಣಿಸಿದ್ದ ಎಂದು ಊಹಿಸಲಾಗಿದೆ. ರಾಮೇಶ್ವರಂ ಕೆಫೆ

ಬಾಂಬ್‌ ಸ್ಪೋಟಿಸಿದ ನಂತರ ಆ ವ್ಯಕ್ತಿ, ತನ್ನ ಕೃತ್ಯ ಮುಗಿದ ಬಳಿಕ ಬಳ್ಳಾರಿಗೆ ಹೋಗಿದ್ದ. ಅಲ್ಲಿಂದ ಪುಣೆಗೆ ಪ್ರಯಾಣಿಸಿದ್ದ ಎಂದು ಎನ್‌ಐಎ ಅಧಿಕಾರಿಗಳು ತನಿಖೆ ವೇಳೆ ತಿಳಿದುಕೊಂಡಿದ್ದರು. ಆತ ಪುಣೆಗೆ ಹೇಗೆ ಹೋಗಿದ್ದ ಎನ್ನುವುದು ಸ್ಪಷ್ಟವಾಗಿಲ್ಲ. ಮಾರ್ಚ್ 1ರ ರಾತ್ರಿ ಗೋಕರ್ಣಕ್ಕೆ ಹೋಗುವ ಬಸ್ ಹತ್ತಿರುವ ಶಂಕೆ ಉಂಟಾಗಿದೆ.

ಮುಖ್ಯ ಶಂಕಿತನು ಬಸ್‌ನಲ್ಲಿ ಟೊಪ್ಪಿ ಹಾಗೂ ಮಾಸ್ಕ್ ಇಲ್ಲದೆ ಪ್ರಯಾಣಿಸಿದ್ದ. ಅದಕ್ಕೂ ಮುನ್ನ ಬೇಸ್‌ಬಾಲ್ ಟೊಪ್ಪಿ ಧರಿಸಿದ್ದ. ಮುಖ್ಯ ಆರೋಪಿ ಸುಮಾರು 30 ವರ್ಷದವನಿರಬಹುದು ಎಂದು ಊಹಿಸಲಾಗಿದೆ. ಈತನ ಹೊಸ ಚಿತ್ರಗಳನ್ನು ಎನ್‌ಐಎ ಇತ್ತೀಚೆಗೆ ಬಿಡುಗಡೆ ಮಾಡಿತ್ತು.

 

ಇದನ್ನು ನೋಡಿ : RSS ನವರು “ಬಾಂಬ್ ವಿದ್ಯಾ ಪ್ರವೀಣರು, ಅಪಪ್ರಚಾರದ ಪ್ರವೀಣರು..” – ಸುಧೀರ್ ಕುಮಾರ್ ಮರೋಳಿ Janashakthi Media

Donate Janashakthi Media

Leave a Reply

Your email address will not be published. Required fields are marked *