ರಕ್ತದಾನದ ಬಗ್ಗೆ ಜಾಗೃತಿ ಮೂಡಿಸಬೇಕಿದೆ : ಚಕ್ರಪತಿ

ಕೋಲಾರ ಜ 25 :  ರಕ್ತದಾನದಿಂದ ಆಗುವ ಪ್ರಯೋಜನಗಳ ಬಗ್ಗೆ ಪೋಷಕರು ಚಿಕ್ಕಂದಿನಿಂದಲೇ ಅರಿವು ಮೂಡಿಸಬೇಕಾಗಿದೆ ಎಂದು ರಾಜ್ಯ ರೋಟರಿ ಕ್ಲಬ್ ರಾಜ್ಯಪಾಲ ಶ್ರೀಕಾಂತ್ ಚಕ್ರಪತಿ ಅಭಿಪ್ರಾಯ ಪಟ್ಟರು

ನಗರದಲ್ಲಿ ಭಾನುವಾರ ಶ್ರೀ ಚನ್ನಮ್ಮ ವೆಂಕಟಪ್ಪ ಟ್ರಸ್ಟ್ ಮತ್ತು ರೋಟರಿ ಕೋಲಾರದ ವತಿಯಿಂದ ಲಯನ್ಸ್ ರಕ್ತನಿಧಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು ರಕ್ತದಾನದ ಬಗ್ಗೆ ಸಮಾಜದಲ್ಲಿ ತಪ್ಪು ಸಂದೇಶಗಳನ್ನು ಪ್ರಚಾರ ಮಾಡುತ್ತಾರೆ ಮನುಷ್ಯ ರಕ್ತದಾನ ಮಾಡುವುದರಿಂದ ಆಗುವ ಬದಲಾವಣೆಗಳನ್ನು ಪ್ರಯೋಜನಗಳನ್ನು ಮತ್ತು ಭಯಪಡಿಸುವ ಬಗ್ಗೆ ಮಾಹಿತಿ ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಬೇಕು ಜೊತೆಗೆ ಅವಕಾಶ ಸಿಕ್ಕಾಗೆಲ್ಲ ರಕ್ತದಾನ ಮಾಡುವುದು ನಮ್ಮ ಪ್ರವೃತ್ತಿಯಾಗಬೇಕು ಎಂದರು


ದೇಶದಲ್ಲಿ ರಕ್ತದಾನದಿಂದ 50% ಜನಕ್ಕೆ ರಕ್ತ ಸಿಗದೇ ಪರದಾಡುವಂತಾಗಿದೆ ಪ್ರತಿಯೊಬ್ಬರೂ ಮನಸ್ಸು ಮಾಡಿದರೇ ರಕ್ತದ ಕೊರತೆಯನ್ನು ನೀಗಿಸಲು ಸಾಧ್ಯವಾಗುತ್ತದೆ ರಕ್ತದಾನ ಸಂಸ್ಥೆಗಳನ್ನು ಹುಟ್ಟುಹಾಕುವುದು ಸುಲಭ ಆದರೆ ಅ ಸಂಸ್ಥೆಯನ್ನು ಮುಂದುವರೆಸಿಕೊಂಡು ಹೋಗುವ ಜೊತೆಗೆ ಸಾರ್ವಜನಿಕರಿಗೆ ರೋಗಿಗಳಿಗೆ ತಕ್ಷಣಕ್ಕೆ ರಕ್ತ ಸಿಗುವಂತೆ ಮಾಡಬೇಕು ರಕ್ತದಾನ ಮತ್ತು ಅರಿವು ‌ಬಹಮುಖ್ಯವಾಗಿದ್ದು ಈ ಸಂಸ್ಥೆ ಮಾಡಬೇಕಾಗಿದೆ ಎಂದರು

ಜಿಲ್ಲಾ ಸ್ಕೌಟ್ ಮತ್ತು ಗೈಡ್ಸ್ ಆಯುಕ್ತ ಕೆ.ವಿ ಶಂಕರಪ್ಪ ಮಾತನಾಡಿ ಮನುಷ್ಯನಿಗೆ ರಕ್ತವು ಪ್ರಕೃತಿ ದಂತವಾಗಿ ಕೊಟ್ಟಿರುವುದು ರಕ್ತಕ್ಕೆ ಬದಲಾಗಿ ಬೇರೊಂದು ವಸ್ತುವಿಲ್ಲ ಪ್ರಕೃತಿಗೆ ಸೇವೆಯ ಹೆಸರಿನಲ್ಲಿ ರಕ್ತದಾನ ಮಾಡುವ ಮೂಲಕ ಪ್ರಕೃತಿಗೆ ಋಣ ತೀರಿಸಬೇಕು ನಾವು ಬದುಕಬೇಕು ನಮ್ಮ ಜೊತೆಯಲ್ಲಿ ಮತ್ತೊಬ್ಬರನ್ನು ಬದುಕುವ ಪ್ರವೃತಿಯಾಗಬೇಕು ರಕ್ತದಾನಕ್ಕಿಂ ಶೇಷ್ಠವಾದುದ್ದು ಮತ್ತೊಂದು ದಾನವಿಲ್ಲ ಎಂದರು

ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು ಮಾತನಾಡಿ ಮನುಷ್ಯನ ಬೆಳವಣಿಗೆಗೆ ರಕ್ತ ಬಹುಮುಖ್ಯವಾಗಿದೆ ರಕ್ತದ ಬೇಡಿಕೆ ದಿನೇದಿನೇ ಹೆಚ್ಚಾಗುತ್ತಾ ಇದೆ ರಕ್ತದಾನ ನಿಧಿಕೇಂದ್ರವನ್ನು ಜಿಲ್ಲಾ ಕೇಂದ್ರದಲ್ಲಿ ಪ್ರಾರಂಭವಾಗಿದ್ದು ಇದರ ಪ್ರಯೋಜನಗಳನ್ನು ತಕ್ಷಣವೇ ಸಿಗುವಂತ ರೀತಿಯಲ್ಲಿ ಸಂಸ್ಥೆಯು ಪದಾಧಿಕಾರಿಗಳು ಕಾರ್ಯಪ್ರವೃತರಾಗಬೇಕು ಎಂದರು

ಜಿಲ್ಲಾ ಆಸ್ಪತ್ರೆ ಶಸ್ತ್ರಚಿಕಿತ್ಸಕ ಎಸ್.ಡಿ ನಾರಾಯಣಸ್ವಾಮಿ ಮಾತನಾಡಿ ಮನುಷ್ಯ 18 ವರ್ಷ ತುಂಬಿದ ಆರೋಗ್ಯವಂತ ಪ್ರತಿಯೊಬ್ಬರೂ ರಕ್ತದಾನ ಮಾಡಬಹುದು ಮನುಷ್ಯನ ಆರೋಗ್ಯವನ್ನು ಕಾಪಾಡಿಕೊಳ್ಳಲು ರಕ್ತದಾನ ಬಹುಮುಖ್ಯವಾಗಿದೆ ರಕ್ತದಾನ ವ್ಯಕ್ತಿಯ ಜೀವ ಉಳಿಸುವ ಜೊತೆಗೆ ತನ್ನ ಆರೋಗ್ಯಕರವಾಗಿ ನೋಡಿಕೊಳ್ಳಬಹುದು ಜೀವನದಲ್ಲಿ ರಕ್ತದಾನವು ನಮ್ಮ ಕರ್ತವ್ಯ ಎಂಬುದನ್ನು ಪ್ರತಿಯೊಬ್ಬರಿಗೂ ಮನವರಿಕೆ ಮಾಡಬೇಕು ಎಂದರು

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಸಹ ರಾಜ್ಯಪಾಲ ಎಲ್ .ಗೋಪಾಲಕೃಷ್ಣ, ಚನ್ನಮ್ಮ ವೆಂಕಟಪ್ಪ ಟ್ರಸ್ಟ್ ಅಧ್ಯಕ್ಷ ಬಿ.ವಿ ಮಂಜುನಾಥಗೌಡ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಜಗದೀಶ್, ಸಿಎಂಆರ್ ಶ್ರೀನಾಥ್ ಮಾತನಾಡಿದರು ಕಾರ್ಯಕ್ರಮದಲ್ಲಿ ಟ್ರಸ್ಟ್ ಖಜಾಂಚಿ ಟಿ.ಎಸ್ ಜನಾರ್ದನ್, ಟಿ.ಎಸ್ ರಾಮಚಂದ್ರಗೌಡ, ಶ್ರೀರಾಮ್, ಬಿಇಒ ಅಶೋಕ್, ಸಿ.ವಿ ನಾಗರಾಜ್ ಮುಂತಾದವರು ಇದ್ದರು.

Donate Janashakthi Media

Leave a Reply

Your email address will not be published. Required fields are marked *