ರಾಜ್ಯದಲ್ಲಿ 5-6 ಕೈಗಾರಿಕಾ ಟೌನ್ ಶಿಪ್ ಅಭಿವೃದ್ಧಿಗೆ ಚಾಲನೆ

ಕೈಗಾರಿಕಾ ನೀತಿ 2020-25 ಕೈಪಿಡಿ ಅನಾವರಣ

ರಾಜ್ಯಾದ್ಯಂತ 5-6 ಕೈಗಾರಿಕಾ ಟೌನ್ ಅಭಿವೃದ್ಧಿಯ ಗುರಿ

ಬೆಂಗಳೂರು; ಜ. 20 : ರಾಜ್ಯದಲ್ಲಿ ಮುಂದಿನ 5 ವರ್ಷದಲ್ಲಿ ನಗರ ಹಾಗೂ ಕೈಗಾರಿಕ ಪ್ರದೇಶದಲ್ಲಿ ವಾರ್ಷಿಕ ಶೇ. 10 ಕೈಗಾರಿಕಗಳ ದರವನ್ನು ಕಾಯ್ದುಕೊಂಡು, 5 ಲಕ್ಷ ಕೋಟಿ ರೂ ಬಂಡಾವಾಳ ಹೂಡಿಕೆ ಆಕರ್ಷಿಸಲು, 20 ಲಕ್ಷ ಜನರಿಗೆ ಉದ್ಯೋಗ ಅವಕಾಶ ಸೃಷ್ಟಿಸಲು ಸರ್ಕಾರ ಯೋಜನೆಯನ್ನು ಹಾಕಿಕೊಂಡಿದೆ. ರಾಜ್ಯಾದ್ಯಂತ 5-6 ಕೈಗಾರಿಕಾ ಟೌನ್ ಅಭಿವೃದ್ಧಿ ಪಡಿಸಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿದೆ.

ಮಂಗಳವಾರ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೈಗಾರಿಕಾ ನೀತಿ 2020-25 ಕೈಪಿಡಿಯನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಬಿಡುಗಡೆ ಮಾಡಿದರು.

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಕೈಗಾರಿಕಾ ಟೌನ್‌ಶಿಪ್‌ ಗಳನ್ನು ನಿರ್ಮಾಣ ಮಾಡಬೇಕು ಎನ್ನುವುದು ಹಲವಾರು ವರ್ಷಗಳ ಬೇಡಿಕೆಯಾಗಿದೆ. ಅವಕಾಶವನ್ನು ನೀಡಿದಲ್ಲಿ ರಾಜ್ಯದಲ್ಲಿ ಒಳ್ಳೆಯ ಮಾಡೆಲ್‌ ಟೌನ್‌ ಶಿಪ್‌ ಗಳೂ ಬರಲಿವೆ ಎಂದು ನಗರಾಭಿವೃದ್ದಿ ಸಚಿವರು ಹಾಗೂ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಈ ಹಿನ್ನಲೆಯಲಿ ಬೆಂಗಳೂರು ನಗರ ಹಾಗೂ ರಾಜ್ಯದ ಇತರೆ ಯಾವ ಭಾಗಗಳಲ್ಲಿ ಟೌನ್‌ ಶಿಪ್‌ ಗಳ ನಿರ್ಮಾಣ ಮಾಡಬೇಕು. ಅದರ ಭೌಗೋಳಿ ಮ್ಯಾಪ್ ಕುರಿತು ಪ್ರಸ್ತಾವನೆಯನ್ನು ಸಿದ್ದಪಡಿಸಲು ಸೂಚನೆ ನೀಡಿದ್ದೇನೆ. ಪ್ರಸ್ತಾವನೆ ಅಭಿವೃದ್ದಿಗೆ ನಗರಾಭಿವೃದ್ದಿ ಒಪ್ಪಿಗೆ ಪಡೆದು ಶೀಘ್ರದಲ್ಲಿ ಸಚಿವ ಸಂಪುಟದ ಮುಂದೆ ತರಲಾಗುವುದು.

ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿಯ ಅಡಿಯಲ್ಲಿ ಭೂಮಿಯ ಹಂಚಿಕೆ ದರದ ಬಗ್ಗೆ ಇರುವ ಗೊಂದಲಗಳನ್ನು ನಿವಾರಿಸಲು ಸಂಬಂಧಿಸಿ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದೇನೆ. ಅಲ್ಲದೆ, ನೂತನ ಕೈಗಾರಿಕಾ ನೀತಿ ಸಿದ್ದವಾಗಿದ್ದು, ಆರ್ಥಿಕ ಇಲಾಖೆಯ ಅನುಮತಿಗೆ ಕಾಯತ್ತಿದ್ದೇವೆ. ಈ ಕಾಯ್ದೆಯಲ್ಲಿ ರಾಜ್ಯದ ಎರಡನೇ ಹಾಗೂ ಮೂರನೇ ಹಂತದ ನಗರಗಳಲ್ಲಿ ಕೈಗಾರಿಕೆಗಳ ಅಭಿವೃದ್ದಿಗೆ ಒತ್ತು ನೀಡಲಾಗಿದೆ ಎಂದು ಶೆಟ್ಟರ್ ತಿಳಿಸಿದ್ದಾರೆ.

ಈ ಕೈಗಾರಿಕ ನೀತಿ ಕೈಪಿಡಿಯೂ ಹೂಡಿಕೆದಾರರಿಗೆ ಉತ್ತೇಜಿಸುವ ಮತ್ತು ಉದ್ಯೋಗ ಸೃಷ್ಟಿಸುವ ಗುರಿ ಸಾಧನೆ ಹೊಂದಿದೆ. ಕರ್ನಾಟವನ್ನು ಅಭಿವೃದ್ಧಿಗೊಳಿಸುವ ಆಶಯ ಈ ಹೊಸ ಕೈಗಾರಿಕಾ ನೀತಿ ಒಳಗೊಂಡಿದೆ. ಅಲ್ಲದೆ ಕೈಗಾರಿಕಾ ನೀತಿ ಕೈಪಿಡಿಯೂ ಕೈಗಾರಿಕೆಗಳ ಡಿ ಗ್ರುಪ್ ನಲ್ಲಿ ಶೇ. 100 ಮತ್ತು ಸಿ ಗ್ರುಪ್ ನಲ್ಲಿ ಶೇ. 70ರಷ್ಟು ಕನ್ನಡಿಗರನ್ನೇ ನೇಮಕ ಮಾಡಿಕೊಳ್ಳಬೇಕು. ನಿಯಮ ಉಲ್ಲಘನೆ ಮಾಡಿದರೆ ಕೈಗಾರಿಕೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಚ್ಚರಿಕೆ ನೀಡಿದೆ.

ಆದರೆ ಇಲ್ಲಿಯವರೆಗೂ ಕೈಗಾರಿಕೆಗಳಲ್ಲಿ ಡಿ ಮತ್ತಿ ಸಿ ಗ್ರುಪ್ ಗಳಲ್ಲಿ ಎಷ್ಟು ಜನ ಕನ್ನಡಿಗರಿಗೆ ಉದ್ಯೋಗ ಸಿಕ್ಕಿದೆ? ಪ್ರತಿ ಬಾರಿಯೂ ಹೇಳಿಕೆಯಾಗಿದೆ. ಆದರೆ ಕನ್ನಡಿಗರನ್ನು ಹಿಂದಕ್ಕೆ  ತಳ್ಳುವ ಕೆಲಸ ನಡೆಯುತ್ತಲ್ಲೆ ಬಂದಿದೆ. ಹೊರಗಿನವರು ಕೆಲಸಕ್ಕೆ ಬರುವುದಕ್ಕೆ ತಕರಾರು ಇಲ್ಲ. ಆದರೆ ಹೆಚ್ಚಿನ ಆಧ್ಯತೆ ಕರ್ನಾಟಕದವರಿಗೆ ಸಿಗಬೇಕು ಎಂದು ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ್ ಆಗ್ರಹಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *