ರಹೀಮ್, ಜೆಬಿ ಮಾಥರ್, ಸಂತೋಷ್ ಕುಮಾರ್ ಸಹಿತ ನೂತನ ರಾಜ್ಯಸಭಾ ಸಂಸದರ ಪ್ರಮಾಣ ವಚನ ಸ್ವೀಕಾರ

ನವದೆಹಲಿ: ಹೊಸದಾಗಿ ಆಯ್ಕೆಯಾದ 6 ರಾಜ್ಯಸಭಾ ಸದಸ್ಯರು ಇಂದು(ಏ.04) ಸದನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಬಿಜೆಪಿ ಮತ್ತು ಕಾಂಗ್ರೆಸ್‌ ಸೇರಿದಂತೆ ಒಟ್ಟು ಆರು ಮಂದಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಪಬಿತ್ರಾ ಮಾರ್ಗರಿಟಾ (ಭಾರತೀಯ ಜನತಾ ಪಕ್ಷ-ಬಿಜೆಪಿ, ಅಸ್ಸಾಂ), ರುಂಗ್ವ್ರಾ ನರ್ಜಾರಿ (ಯುಪಿಪಿಲ್‌, ಅಸ್ಸಾಂ), ಜೆಬಿ ಮಾಥರ್‌ ಹಿಶಾಮ್‌ (ಕಾಂಗ್ರೆಸ್‌ ಕೇರಳ), ಸಂತೋಷ್‌ ಕುಮಾರ್‌ (ಭಾರತ ಕಮ್ಯೂನಿಸ್ಟ್‌ ಪಕ್ಷ-ಸಿಪಿಐ, ಕೇರಳ), ಎ ಎ ರಹೀಮ್‌ (ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ), ಕೇರಳ) ಮತ್ತು ಎಸ್‌ ಫನ್ನಾನ್‌ ಕೋನಿಯಾಕ್‌ (ಭಾರತೀಯ ಜನತಾ ಪಕ್ಷ-ಬಿಜೆಪಿ, ನಾಗಾಲ್ಯಾಂಡ್‌)  ಇವರುಗಳು ಸಂಸತ್ತಿನ ಮೇಲ್ಮನೆಯಲ್ಲಿ ನೂತನ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಇದನ್ನು ಓದಿ: ಸಿಪಿಐಎಂ ಅಭ್ಯರ್ಥಿ ಸೈರಾಗೆ ಬೆಂಬಲ ಸೂಚಿಸಿದ ನಟ ನಾಸಿರುದ್ದೀನ್ ಶಾ

ಎಸ್‌ ಫನ್ನಾನ್‌ ಕೋನಿಯಾಕ್‌ – ಬಿಜೆಪಿಯ ನಾಗಾಲ್ಯಾಂಡ್ ಘಟಕದ ಮಹಿಳಾ ಮೋರ್ಚಾ ಅಧ್ಯಕ್ಷೆ. ಇವರು ಬಿಜೆಪಿಯಿಂದ ನಾಗಾಲ್ಯಾಂಡ್‌ನಿಂದ ಆಯ್ಕೆ ಮೊದಲ ಮಹಿಳಾ ಸಂಸದೆ ಮತ್ತು ಮೊದಲ ರಾಜ್ಯಸಭಾ ಸಂಸದರಾಗಿದ್ದಾರೆ.

ಪಬಿತ್ರಾ ಮಾರ್ಗರಿಟಾ – ಅಸ್ಸಾಂ ಸರ್ಕಾರದ ವಿದ್ಯಾರ್ಥಿ ಮತ್ತು ಯುವಜನ ಕಲ್ಯಾಣಕ್ಕಾಗಿ ರಾಜ್ಯ ಮಟ್ಟದ ಸಲಹಾ ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ.

ರುಂಗ್ವ್ರಾ ನರ್ಜಾರಿ – ಕಾಜಲಗಾಂವ್ ಪುರಸಭೆಯ ಅಧ್ಯಕ್ಷರೂ ಆಗಿದ್ದವರು. ಆಲ್ ಬೋಡೋಲ್ಯಾಂಡ್ ಸ್ಟೂಡೆಂಟ್ಸ್ ಯೂನಿಯನ್ ಮಾಜಿ ಅಧ್ಯಕ್ಷರು ಮತ್ತು ‘ಮೂರನೇ ಬೋಡೋ ಶಾಂತಿ ಒಪ್ಪಂದ’ಕ್ಕೆ ಸಹಿ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ತಿಳಿದುಬಂದಿದೆ.

ಜೆಬಿ ಮಾಥರ್ ಹಿಶಾಮ್ – ಆಲುವಾ ಪುರಸಭೆಯ ಉಪಾಧ್ಯಕ್ಷೆ ಮತ್ತು ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ.

ಇದನ್ನು ಓದಿ: ರಾಜಕೀಯ ಹಂಬಲ: ಬಿಜೆಪಿ ಸೇರುವ ಕಾಲ ಬಂದಿದೆ-ಬಸವರಾಜ ಹೊರಟ್ಟಿ

ಎ ಎ ರಹೀಮ್‌ – ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್‌(ಡಿವೈಎಫ್‌ಐ) ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ.

ಪಿ. ಸಂತೋಷ್ ಕುಮಾರ್ – ಆಲ್‌ ಇಂಡಿಯಾ ಯೂತ್‌ ಫೆಡರೇಷನ್‌(ಎಐವೈಎಫ್‌) ಸಂಘಟನೆಯ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಪ್ರಸ್ತುತ ಸಿಪಿಐ ಕಣ್ಣೂರು ಜಿಲ್ಲಾ ಕಾರ್ಯದರ್ಶಿ ಮತ್ತು ಸಿಪಿಐ ರಾಜ್ಯ ಕೌನ್ಸಿಲ್ ಸದಸ್ಯರು.

ಸದನದಲ್ಲಿ ಆಸೀನರಾಗುವ ಮೊದಲು, ರಾಜ್ಯಸಭೆಯ ಪ್ರತಿಯೊಬ್ಬ ಸದಸ್ಯರು ರಾಜ್ಯಸಭಾಧ್ಯಕ್ಷರು ಅಥವಾ ಅವರ ಪರವಾಗಿ ನೇಮಕಗೊಂಡ ಕೆಲವು ವ್ಯಕ್ತಿಗಳ ಮುಂದೆ ಪ್ರಮಾಣ ವಚನ ಸ್ವೀಕರಿಸಬೇಕಾಗುತ್ತದೆ.

ರಾಜ್ಯಸಭೆಯ 13 ಸ್ಥಾನಗಳಿಗೆ ಚುನಾವಣೆ ನಡೆದು ಏಪ್ರಿಲ್‌ 1ರಂದು ಫಲಿತಾಂಶ ಪ್ರಕಟವಾಗಿತ್ತು.

Donate Janashakthi Media

Leave a Reply

Your email address will not be published. Required fields are marked *