ನವದೆಹಲಿ: ಭಾರತೀಯ ಚಿತ್ರರಂಗದ ‘ಸೂಪರ್ ಸ್ಟಾರ್’ ರಜನಿಕಾಂತ್ ಪ್ರತಿಷ್ಠಿತ ‘ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ’ಯನ್ನು ಸ್ವೀಕರಿಸಿದರು. ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಸಮಾರಂಭದಲ್ಲಿ ಸಿನಿಮಾರಂಗದಲ್ಲಿ ಮಾಡಿದ ಸಾಧನೆಗಾಗಿ ರಜನಿಕಾಂತ್ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ.
67ನೇ ರಾಷ್ಟ್ರ ಪ್ರಶಸ್ತಿ ಸಮಾರಂಭ ಇದಾಗಿದ್ದು, 2019ರಲ್ಲಿ ತೆರೆಕಂಡ ಸಿನಿಮಾಗಳಿಗೆ ಪ್ರಶಸ್ತಿ ನೀಡಲಾಗಿದೆ. ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಈ ಪ್ರಶಸ್ತಿಗಳನ್ನು ಪ್ರದಾನ ಮಾಡಿದ್ದಾರೆ.
ಮಲಯಾಳಂ ಸಿನಿಮಾ ‘ಮರಕ್ಕರ್: ಲಯನ್ ಆಫ್ ದಿ ಅರೇಬಿಯನ್ ಸೀ’ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿದೆ. ‘ಭೋಂಸ್ಲೆ’ ಚಿತ್ರಕ್ಕಾಗಿ ಮನೋಜ್ ಬಾಜಪೇಯಿ ಹಾಗೂ ‘ಅಸುರನ್’ ಚಿತ್ರಕ್ಕಾಗಿ ಧನುಶ್ ಅತ್ಯುತ್ತಮ ನಟ ಪ್ರಶಸ್ತಿ ಸ್ವೀಕರಿಸಿದ್ದಾರೆ. ‘ಪಂಗಾ’ ಮತ್ತು ‘ಮಣಿಕರ್ಣಿಕಾ’ ಚಿತ್ರಗಳಿಗಾಗಿ ಕಂಗನಾ ರಣಾವತ್ ‘ಅತ್ಯುತ್ತಮ ನಟಿ’ ಪ್ರಶಸ್ತಿ ಲಭಿಸಿದೆ.
ಕನ್ನಡದ ಅತ್ಯುತ್ತಮ ಸಿನಿಮಾದ ಪಟ್ಟಿಯಲ್ಲಿ ‘ಅಕ್ಷಿ’ ಚಲನಚಿತ್ರವಾಗಿದೆ. ಈ ಚಿತ್ರವನ್ನು ಹೊಸಬರಾದ ಮನೋಜ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಹಲವಾರು ವರ್ಷಗಳಿಂದ ಚಿತ್ರರಂಗದಲ್ಲಿ ತೊಡಗಿಕೊಂಡಿರುವ ಅವರಿಗೆ ನಿರ್ದೇಶಕನಾಗಿ ‘ಅಕ್ಷಿ’ ಮೊದಲ ಸಿನಿಮಾ. ಚೊಚ್ಚಲ ಪ್ರಯತ್ನದಲ್ಲೇ ರಾಷ್ಟ್ರ ಪ್ರಶಸ್ತಿ ಸಿಕ್ಕಿರುವುದು ಸಂತಸ ತಂದಿದೆ.
ಪ್ರಶಸ್ತಿ ವಿಜೇತರ ಪಟ್ಟಿ
ಅತ್ಯುತ್ತಮ ಸಿನಿಮಾ: ಮರಕ್ಕರ್: ಲೈನ್ ಆಫ್ ದಿ ಅರೇಬಿಯನ್ ಸೀ
ಅತ್ಯುತ್ತಮ ನಟ: ಧನುಷ್ (ಅಸುರನ್) ಮನೋಜ್ ಬಾಜಪಯ್ (ಭೋನ್ಸ್ಲೆ)
ಅತ್ಯುತ್ತಮ ನಟಿ: ಕಂಗನಾ ರಣಾವತ್ (ಮಣಿಕರ್ಣಿಕಾ, ಪಂಗಾ)
ಅತ್ಯುತ್ತಮ ಚಿತ್ರ ಕನ್ನಡ ವಿಭಾಗ: ಅಕ್ಷಿ
ಅತ್ಯುತ್ತಮ ನಿರ್ದೇಶನ: ಬಹತಾರ್ ಹುರೈನ್
ಅತ್ಯುತ್ತಮ ಚಿತ್ರ ಸಾಹಸ ನಿರ್ದೇಶನ: ವಿಕ್ರಂ ಮೋರ್ (ಅವನೇ ಶ್ರೀಮನ್ನಾರಾಯಣ)
ಅತ್ಯುತ್ತಮ ಪೋಷಕ ನಟ: ವಿಜಯ್ ಸೇತುಪತಿ (ಸೂಪರ್ ಡಿಲಕ್ಸ್)
ಅತ್ಯುತ್ತಮ ಪೋಷಕ ನಟಿ: ಪಲ್ಲವಿ ಜೋಶಿ (ದಿ ತಾಷ್ಕೆಂಟ್ ಫೈಲ್ಸ್)
ಅತ್ಯುತ್ತಮ ನೃತ್ಯ ನಿರ್ದೇಶನ: ಮಹರ್ಷಿ (ತೆಲುಗು)
ಅತ್ಯುತ್ತಮ ಜನಪ್ರಿಯ ಮನರಂಜನೆ ಸಿನಿಮಾ: ಮಹರ್ಷಿ (ತೆಲುಗು)
ಅತ್ಯುತ್ತಮ ಗೀತ ಸಾಹಿತ್ಯ: ಪ್ರಭಾವರ್ಮಾ-ಕೊಲಾಂಬಿ (ಮಲಯಾಳಂ)
ಅತ್ಯುತ್ತಮ ಸಂಗೀತ ನಿರ್ದೇಶಕ: ಡಿ. ಇಮ್ಮಾನ್-ವಿಶ್ವಾಸಮ್ (ತಮಿಳು)
ಅತ್ಯುತ್ತಮ ಸಂಕಲನ: ಜೆರ್ಸಿ (ತೆಲುಗು)
ಅತ್ಯುತ್ತಮ ಪ್ರಸಾದನ ಕಲಾವಿದ: ರಂಜಿತ್-ಹೆಲನ್ (ಮಲಯಾಳಂ)
ಚೊಚ್ಚಲ ಅತ್ಯುತ್ತಮ ನಿರ್ದೇಶನ: ಮತ್ತುಕುಟ್ಟಿ (ಹೆಲನ್ -ಮಲಯಾಳಂ)
ಅತ್ಯುತ್ತಮ ಮಕ್ಕಳ ಚಿತ್ರ: ಕಸ್ತೂರಿ (ಹಿಂದಿ)
ಸಾಮಾಜಿಕ ಸಮಸ್ಯೆಗಳ ಕುರಿತ ಅತ್ಯುತ್ತಮ ಚಿತ್ರ: ಆನಂದಿ ಗೋಪಾಲ್ (ಮರಾಠಿ)