ಜೈಪುರ: ಮತ್ತೊಂದು ಅವಧಿಗೆ ಗೆಲ್ಲಲು ಭರದಿಂದ ತಯಾರಿ ನಡೆಸುತ್ತಿರುವ ಕಾಂಗ್ರೆಸ್‌ಗೆ ಹಿನ್ನಡೆಯಾಗಿದ್ದು, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಆಪ್ತ, ಮಾಜಿ ಜೋಧ್‌ಪುರ ಮೇಯರ್ ರಾಮೇಶ್ವರ್ ದಾಧಿಚ್ ಅವರು ಗುರುವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ರಾಜಸ್ಥಾನದಲ್ಲಿ ನವೆಂಬರ್ 25 ರಂದು ಚುನಾವಣೆ ನಡೆಯಲಿದೆ.
ಭಾರತವನ್ನು ವಿಶ್ವದ ಅಗ್ರಸ್ಥಾನಕ್ಕೆ ಕೊಂಡೊಯ್ಯಬೇಕು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿಗೆ ಬಲ ನೀಡಲು ತಾನು ಪಕ್ಷಕ್ಕೆ ಸೇರಿದ್ದಾರೆ ಅವರು ಹೇಳಿದ್ದಾರೆ. ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ಸೂರಸಾಗರ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಅವರು ನಾಮಪತ್ರ ಸಲ್ಲಿಸಿದ್ದರು. ಇದೀಗ ತಮ್ಮ ನಾಮಪತ್ರಗಳನ್ನು ಹಿಂಪಡೆದು ಬಿಜೆಪಿ ಸೇರಿದ್ದಾರೆ.
ಇದನ್ನೂ ಓದಿ: ಪ್ಯಾಲೆಸ್ತೀನ್ ಕಾರ್ಮಿಕರ ಬದಲಿಗೆ ಇಸ್ರೇಲ್‌ಗೆ ಭಾರತೀಯ ಕಾರ್ಮಿಕರ ‘ರಫ್ತು’ | ಕಾರ್ಮಿಕ ಸಂಘಟನೆಗಳ ವಿರೋಧ
“ಭಾರತವನ್ನು ವಿಶ್ವದ ಅಗ್ರಸ್ಥಾನಕ್ಕೆ ಕೊಂಡೊಯ್ಯುವ ಮತ್ತು ರಾಜಸ್ಥಾನದಲ್ಲಿ ಪೇಪರ್ ಸೋರಿಕೆ ಹಗರಣದಂತಹ ಹಗರಣಗಳನ್ನು ತಡೆಯುವ ಪ್ರಧಾನಿ ಮೋದಿಯವರ ಬಯಕೆಯೆ ನಾನು ಬಿಜೆಪಿಗೆ ಸೇರಲು ಕಾರಣ. ರಾಜಸ್ಥಾನದಲ್ಲಿ ಉತ್ತಮ ವಾತಾವರಣ ನಿರ್ಮಿಸಲು ನಾನು ಬಿಜೆಪಿಗೆ ಸೇರಲು ನಿರ್ಧರಿಸಿದೆ” ಎಂದು ದಧಿಚ್ ಹೇಳಿದ್ದಾರೆ.
ಕೇಂದ್ರ ಸಚಿವ, ಪಕ್ಷದ ರಾಜಸ್ಥಾನ ಚುನಾವಣಾ ಉಸ್ತುವಾರಿ ಪ್ರಲ್ಹಾದ್ ಜೋಶಿ, ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಮತ್ತು ಸಂಸದ ರಾಜೇಂದ್ರ ಗೆಹ್ಲೋಟ್ ಅವರ ಸಮ್ಮುಖದಲ್ಲಿ ಅವರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಅವರೊಂದಿಗೆ ಕಾಂಗ್ರೆಸ್ ನಾಯಕ, ದೌಸಾ ಜಿಲ್ಲೆಯ ಮಾಜಿ ಜಿಲ್ಲಾ ಪ್ರಮುಖ್ ವಿನೋದ್ ಶರ್ಮಾ ಕೂಡ ಬಿಜೆಪಿಗೆ ಸೇರಿದ್ದಾರೆ.
ಈ ಹಿಂದೆ, ಕಾಂಗ್ರೆಸ್‌ನ ಮಾಜಿ ಶಾಸಕರಾದ ಚಂದ್ರಶೇಖರ್ ವೈದ್, ನಂದಲಾಲ್ ಪುನಿಯಾ ಮತ್ತು ಮಾಜಿ ಮೇಯರ್ ಜ್ಯೋತಿ ಖಂಡೇಲ್‌ವಾಲ್ ಸೇರಿದಂತೆ ಉನ್ನತ ಮಟ್ಟದ ನಾಯಕರು ಪಕ್ಷದಿಂದ ನಿರ್ಗಮಿಸಿದ್ದರು. ಚಂದ್ರಶೇಖರ್ ಅವರು ಮಾಜಿ ಹಣಕಾಸು ಸಚಿವ ಚಂದನ್‌ಮಾಲ್ ಬೈದ್ ಅವರ ಪುತ್ರರಾಗಿದ್ದರೆ. ಖಂಡೇಲ್‌ವಾಲ್ ಅವರು ಕಾಂಗ್ರೆಸ್‌ನ ಹಿರಿಯ ನಾಯಕ ಸಚಿನ್ ಪೈಲಟ್ ಅವರ ಆಪ್ತರಾಗಿದ್ದರು.
ವಿಡಿಯೊ ನೋಡಿ: ಇಸ್ರೇಲ್‌ನಲ್ಲಿ ಕೆಲಸ ಮಾಡುತ್ತಿರುವ ಪ್ಯಾಲಿಸ್ಟೈನ್ ಕಾರ್ಮಿಕರನ್ನು ಹೊರದಬ್ಬಲಾಗುತ್ತಿದೆ. Janashakthi Media