ಹಾವೇರಿ: ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ.ಬಿ. ಕೋಳಿವಾಡ ಅವರು ಆತ್ಮಹತ್ಯೆ ಮಾಡಿಕೊಂಡ ರೈತನ ಬಗ್ಗೆ ಹಗುರವಾಗಿ ಮಾತನಾಡಿರುವ ವಿಡಿಯೋ ಹಂಚಿಕೆಯಾಗಿದ್ದು, ಮೃತ ರೈತನಿಗೆ ಮಾಲೆ ಹಾಕಲು ಬರುವಂತೆ ಕಾಂಗ್ರೆಸ್ ಕಾರ್ಯಕರ್ತ ಕರೆ ಮಾಡಿದ್ದ ಕರೆದಿದ್ದಕ್ಕೆ ರೈತನ ಆತ್ಮಹತ್ಯೆ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ ಎನ್ನಲಾಗಿದೆ.
ಮೊಬೈಲ್ನಲ್ಲಿ ಮಾತನಾಡೋದು ಮುಗಿದ ಮೇಲೆ ಅವಾಚ್ಯ ಪದಗಳನ್ನು ಬಳಕೆ ಮಾಡಿ ಆತ್ಮಹತ್ಯೆ ಮಾಡಿಕೊಂಡ ರೈತನ ಬಗ್ಗೆ ಕೋಳಿವಾಡ ಮಾತನಾಡಿದ್ದಾರೆನ್ನಲಾಗುತ್ತಿದೆ. ಸದ್ಯ ಈ ಆಡಿಯೋ ಸಾಮಾಜಿಕ ಜಾಲತಾಣ ಹಲವು ಮಂದಿ ಹಂಚಿಕೊಂಡಿದ್ದಾರೆ.
ಕೆ.ಬಿ.ಕೋಳಿವಾಡ ಜಿಲ್ಲೆಯ ರಾಣೆಬೆನ್ನೂರು ವಿಧಾನಸಭೆ ಕ್ಷೇತ್ರದ ಮಾಜಿ ಶಾಸಕರಾಗಿದ್ದಾರೆ. ಐದು ಬಾರಿ ಶಾಸಕರಾಗಿ, ಒಮ್ಮೆ ಸಚಿವರಾಗಿ, ಒಮ್ಮೆ ವಿಧಾನಸಭಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದ ಸಂಘಟನೆ ಮಾಡಲು ಮುಖಂಡರೊಬ್ಬರ ಮನೆಯಲ್ಲಿ ಮಾತನಾಡುತ್ತಿದ್ದಾಗ ಫೋನ್ ಕರೆ ಬಂದಿದೆ. ಫೋನ್ನಲ್ಲಿ ಮಾತನಾಡಿದ ಮೇಲೆ ಇತರೆ ಕಾರ್ಯಕರ್ತರ ಮುಂದೆ ಕೋಳಿವಾಡ ಮಾತನಾಡಿದ್ದಾರೆ ಎನ್ನಲಾಗುತ್ತಿದೆ.
ಫೋನ್ ಕರೆ ಬಳಿಕ ಕಾರ್ಯಕರ್ತರೊಂದಿಗೆ ಹೀಗೆ ಹೇಳಿದರು…
ಸತ್ತಾನ, ಉರ್ಲು ಹಾಕ್ಕೊಂಡಾನ, ಬರ್ರಿ ಮಾಲಿ ಹಾಕ್ರಿ. ಮಾಲಿ ಹಾಕಿದ್ಮ್ಯಾಲ ಏ ಹಂಗ ಹೊಂಟೀರಲ್ರಿ, ಹಂಗ ಹೊಂಟೀರಲ್ರಿ
ಇದ ಉದ್ಯೋಗ ಹೌದಿಲ್ಲ. ಹಿಂಗ ಮಾಡಿ ಮಾಡಿ ನಮ್ ದೇಶ ಹಾಳಾಗಿ ಹೊಕ್ಕೈತಿ. ಹಂಗ ಹೊಕ್ಕೀರಲ್ರಿ, ಯಾವಾಗ ಉದ್ಧಾರ ಆಕ್ಕಿರೋ ಯಾವಾಗ ಶಾಣ್ಯಾರಾಕ್ಕಿರೋ,, ಶಾಣ್ಯಾರಾಗ್ರೋಪಾ. ಸತ್ತಾನಂತ, ಉರ್ಲು ಹಾಕ್ಕೊಂಡಾನಂತ, ನಾ ಹೋಗಬೇಕಂತ. ಹೋಗಿ ಅವನಿಗೆ ಉರ್ಲು ಹಾಕ್ಕೊಂಡವನಿಗೆ ಮಾಲೆ ಹಾಕಬೇಕಂತೆ. ಆ ಮಗನಿಗೆ ಯಾಕ ಮಾಲೆ ಹಾಕ್ಬೇಕು ನಾನು. ಅವಂಗೇನ್ ಉರ್ಲು ಹಾಕ್ಕೋ ಅಂತಾ ಹೇಳಿದ್ವಾ ನಾವು.? ಏನು ಮಾಡಿಕೊಂಡಾನೋ, ಎದಕ್ ಮಾಡಿಕೊಂಡಾನೋ, ಉರ್ಲು ಹಾಕ್ಕೊಂಡಾನಂತ. ಯಾರಿಗೆ ಏನ್ ಅನ್ಯಾಯ ಮಾಡಿದ್ನೋ, ಏನಾಗಿತ್ತೋ ಯಾವನಿಗೊತ್ತು. ಆಮ್ಯಾಲ ಮಾಲಿ ಹಾಕಿದವರೆ ಹೊಂಟೆವಾ… ಹಂಗ ಹೊಕ್ಕೀರಲ್ರಿ.