ರೈತರನ್ನು ಕೊಂದ ಪ್ರಮುಖ ಆರೋಪಿಗಳನ್ನು ಕೂಡಲೇ ಬಂಧಿಸಿ: ಸಂಯುಕ್ತ ಕಿಸಾನ್‌ ಮೋರ್ಚಾ

ಲಖಿಂಪುರ ಖೇರಿಯಲ್ಲಿ ರೈತರ ಶಾಂತಿಯುತವಾಗಿ ನಡೆಸುತ್ತಿದ್ದ ಮೆರವಣಿಗೆಯ ಸಂದರ್ಭದಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ತೇನಿ ಅವರಿಗೆ ಸೇರಿದ ವಾಹನಗಳ ಮೂಲಕ ರೈತರನ್ನು ಹತ್ಯೆ ಮಾಡಲಾಗಿದ್ದು, ಪ್ರಕರಣದಲ್ಲಿ ಆರೋಪಿಯಾಗಿರುವ ಸಚಿವರ ಮಗ ಆಶಿಶ್ ಮಿಶ್ರಾನನ್ನು ಬಂಧಿಸದಿರುವ ಬಗ್ಗೆ ಸಂಯುಕ್ತ ಕಿಸಾನ್‌ ಮೋರ್ಚಾ ತೀವ್ರ ಆತಂಕವ್ಯಕ್ತಪಡಿಸಿದೆ.

ಇದನ್ನು ಓದಿ: ಪರಿಹಾರ ಹಣ ಕೊಟ್ಟರೆ ನನ್ನ ಮಗ ವಾಪಸ್ ಬರುವನೇ?: ಅಜಯ್ ಮಿಶ್ರಾ ರಾಜಿನಾಮೆ ನೀಡಲೇಬೇಕು

ಲಖೀಂಪುರದ ರೈತರ ಮಾರಣ ಹೋಮದಲ್ಲಿ ಭಾಗಿಯಾದ ಆಶಿಶ್ ಮಿಶ್ರಾ, ಸುಮಿತ್ ಜೈಸ್ವಾಲ್, ಅಂಕಿತ್ ದಾಸ್ ಇನ್ನಿತರೆ ಯಾರನ್ನೂ ಈವರೆಗೆ ಬಂಧಿಸಲಾಗಿಲ್ಲ. ಅಲ್ಲದೆ, ಆಶಿಶ್ ಮಿಶ್ರಾ ಅವರಿಗೆ ಸಮನ್ಸ್ ಜಾರಿ ಮಾಡಿರುವುದು ಪ್ರಶ್ನೆಸಲಷ್ಟೇ ಎಂಬುದು ತಿಳಿದುಬಂದಿದೆ. ಇದನ್ನು ಗಮನಿಸಿದರೆ ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ಮತ್ತು ಆರೋಪಿಯ ತಂದೆ ಕೇಂದ್ರ ಸಚಿವ ಅಜಯ್ ಮಿಶ್ರಾ ಆಶಿಶ್‌ನಲ್ಲಿ ಆರಾಮವಾಗಿ ತಿರುಗಾಡಲು ಬಿಟ್ಟಂತಿದೆ ಎಂದು ಸಂಯುಕ್ತ ಕಿಸಾನ್‌ ಮೋರ್ಚಾದ ಹೇಳಿಕೆಯಾಗಿದೆ.

ಇಂದು ಖೇರಿಯ ಅಪರಾಧ ವಿಭಾಗದ ಪೊಲೀಸ್‌ ಠಾಣೆಗೆ ಬೆಳಿಗ್ಗೆ 10 ಗಂಟೆಗೆ ಹಾಜರಾಗಬೇಕೆಂಬ ಆಶಿಶ್‌ ಮಿಶ್ರಾ  ಸಮನ್ಸ್ ಗೆ ಪ್ರತಿಕ್ರಿಯೆ ಇಲ್ಲ. ಮಾಧ್ಯಮದ ವರದಿಗಳ ಪ್ರಕಾರ ಆತ ಘಟನೆ ನಡೆದ ಕೂಡಲೇ ತಲೆ ಮರೆಸಿಕೊಂಡಿದ್ದು, ಸ್ಥಳ ಬದಲಾವಣೆ ಮಾಡುವ ಮೂಲಕ ತಪ್ಪಿಸಿಕೊಳ್ಳುತ್ತಿದ್ದಾನೆ ಎಂದಿರುವ ಪೊಲೀಸರು, ಆತನ ಹುಡುಕಾಟಕ್ಕಾಗಿ ಈಗಾಗಲೇ ಹಲವು ತಂಡಗಳು ಕಾರ್ಯಚರಣೆಯಲ್ಲಿ ತೊಡಗಿವೆ ಎನ್ನಲಾಗಿದೆ.

ಇದನ್ನು ಓದಿ: ರೈತರ ಮೇಲೆ ಕಾರು ಹರಿಸಿದ ಭಯಾನಕ ದೃಶ್ಯ ಮೊಬೈಲ್‌ ಸೆರೆ: ಧಾಳಿ ಮಾಡಲೆಂದೇ ಕಾರು ನುಗ್ಗಿಸಿದ್ದು

ಸುಮಿತ್ ಜಸ್ವಾಲ್ ‘ಥಾರ್’ ವಾಹನದಲ್ಲಿದ್ದದ್ದು ಅಲ್ಲದೆ, ಘಟನೆ ನಂತರ ಆತ ತಪ್ಪಿಸಿಕೊಂಡು ಮಾಧ್ಯಮಗಳಿಗೆ ಬೈಟ್ ಕೊಟ್ಟಿರುವುದೂ ಇದೆ. ಆದರೂ ಆತನನ್ನು ಈವರೆಗೆ ಬಂಧಿಸಿಲ್ಲ. ಈ ಘಟನೆ ನಂತರ ಸಿಕ್ಕಿಬಿದ್ದ ವ್ಯಕ್ತಿಯ ಬಳಿ ಪೊಲೀಸರು ಪ್ರಶ್ನಿಸಿದಾಗ ರೈತರ ಮಾರಣಹೋಮಕ್ಕೆ ಕಾರಣವಾದ ಮತ್ತೊಂದು ಎಸ್ ಯು ವಿ ಫಾರ್ಚುನರ್‌ನಲ್ಲಿ ಆಂಕಿತ್ ದಾಸ್ ಇದ್ದುದಾಗಿ ಹೇಳಿದ್ದಾನೆ. ಇಷ್ಟಾದರೂ ಅಂಕಿತ್ ದಾಸ್‌ನನ್ನು ಕೂಡ ಈವರೆಗೆ ಬಂಧಿಸಿಲ್ಲ.

Donate Janashakthi Media

Leave a Reply

Your email address will not be published. Required fields are marked *