ರಾಷ್ಟ್ರವ್ಯಾಪಿ ರೈತರ ಸಾಮೂಹಿಕ ಉಪವಾಸ ಸತ್ಯಾಗ್ರಹ

ಅನ್ನದಾತನ  ಉಪವಾಸ ಸತ್ಯಾಗ್ರಹಕ್ಕೆ ಜನಪರ ಸಂಘಟನೆಗಳ ಬೆಂಬಲ

ಬೆಂಗಳೂರು; ಜ.29 : ಗಣರಾಜ್ಯೋತ್ಸವದಂದು ನವದೆಹಲಿಯಲ್ಲಿ ರೈತರು ನಡೆಸಿದ ಪರ್ಯಾಯ ಜನಪರ ಗಣರಾಜ್ಯೋತ್ಸವ ಪೆರೇಡನ್ನು ದಿಕ್ಕು ತಪ್ಪಿಸಲು ನಡೆಸಿದ ಪ್ರಯತ್ನ ಹಾಗು ಹಿಂಸಾಚಾರಕ್ಕೆ ಹೋರಾಟವನ್ನು ದಿಕ್ಕು ತಪ್ಪಿಸುವ ಪ್ರಯತ್ನಗಳನ್ನು ಹಿಮ್ಮೆಟ್ಟಿಸಿ ಹೋರಾಟವನ್ನು ನಿರ್ಣಾಯಕ ಹಂತಕ್ಕೆ ಕೊಂಡೊಯ್ಯಲು ನಾಳೆಯ ದಿನ ಮಹಾತ್ಮಾ ಗಾಂಧಿಯವರ ಹುತಾತ್ಮ ದಿನದ ಭಾಗವಾಗಿ ರಾಷ್ಟ್ರವ್ಯಾಪಿ ಉಪವಾಸ ಸತ್ಯಾಗ್ರಹವನ್ನು ನಡೆಸಲು ರೈತ ಸಂಘಟನೆಗಳು ಮತ್ತು ಜನರಪರ ಸಂಘಟನೆಗಳು ತೀರ್ಮಾನಿಸಿವೆ.

ರೈತ ಸಂಘಟನೆಗಳ ಅಖಿಲ ಭಾರತ ಸಮನ್ವಯ ಸಮಿತಿಯ ನೇತ್ರತ್ವದಲ್ಲಿ ದೆಹಲಿಯ ಗಡಿಭಗಗಳಲ್ಲಿ ನಡೆಯುವ ಶಾಂತಿಯುತ ಹೋರಾಟದಲ್ಲಿ ಮತ್ತಷ್ಟು ದೊಡ್ಡ ಸಂಖ್ಯೆಯ ಜನರು ಸೇರತೊಡಗಿದ್ದಾರೆ. ಈ ಹೋರಾಟ ನಿರ್ಣಯಾಕ ಹಂತ ತಲುಪುವುದನ್ನು ತಡೆಯಲು 28 ಜನವರಿ ರಾತ್ರಿಯಿಂದ ಪ್ಯಾರಾಮಿಲಿಟರಿ ಶಕ್ತಿಗಳನ್ನು ಬಳಸಿಕೊಂಡು ಒತ್ತಾಯ ಪೂರಕವಾಗಿ ಹೊರಾಟ ನಿರತ ರೈತರನ್ನು ಚದುರಿಸಲು ಸರ್ಕಾರಗಳು ಪ್ರಯತ್ನ ಮಾಡಲು ಪ್ರಾರಂಭಿಸಿದ್ದಾರೆ ಎಂದು ರೈತ ಸಂಘಟನೆಗಳು ಆರೋಪಿಸಿದೆ.

ಇದನ್ನೂ ಓದಿ : ರೈತರ ಒಗ್ಗಟ್ಟು ಮತ್ತು ಹೋರಾಟ ಇನ್ನಷ್ಟು ಗಟ್ಟಿಗೊಳ್ಳುತ್ತದೆ : AIKS

ಸಿಐಟಿಯು ಬೆಂಬಲ : ರಾಜ್ಯದಲ್ಲಿ ಹೋರಾಟ ನಿರತ ರೈತರಿಗೆ ವ್ಯಾಪಕ ಬೆಂಬಲವನ್ನು ವ್ಯಕ್ತಪಡಿಸಲು ಸಿಐಟಿಯ ಕರ್ನಾಟಕ ರಾಜ್ಯ ಸಮಿತಿ ಹಾಗು ಇತರೆ ಕೇಂದ್ರ ಕಾರ್ಮಿಕ ಸಂಘಟನೆಗಳು ಬೆಂಬಲವನ್ನು ವ್ಯಕ್ತಪಡಿಸಿವೆ.

ನಾಳೆ ಬೆಳಿಗ್ಗೆ 10.30 ರಿಂದ ಸಂಜೆಯವರೆಗೆ ಬೆಂಗಳೂರಿನ ಮೌರ್ಯವೃತ್ತದ ಬಳಿ ಸಂಯುಕ್ತ ಹೋರಾಟ-ಕರ್ನಾಟಕ ನೇತ್ರತ್ವದಲ್ಲಿ ನಡೆಯುವ ಸಾಮೂಹಿಕ ಉಪವಾಸ ಸತ್ಯಾಗ್ರಹದಲ್ಲಿ ಹಾಗು ರಾಜ್ಯದ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ನಡೆಯುವ ಉಪವಾಸ ಸತ್ಯಾಗ್ರಹ ಹೋರಾಟಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಸಿಐಟಿಯು ಕರೆ ನೀಡಿದೆ.

ಹೋರಾಟ ನಿರತ ರೈತರಿಗೆ ಬೆಂಬಲಿಸಿ ಎಲ್ಲಾ ಕಾರ್ಮಿಕರು ಮಧ್ಯಾಹ್ನ ಆಹಾರವನ್ನು ತೆಜಿಸುವುದು (Lunch Boycott). ಇದರ ಬಗ್ಗೆ ಆ ದಿನವೇ ಆಡಳಿತ ಮಂಡಳಿಗಳಿಗೆ ತಿಳಿಸುವುದು. ಎಲ್ಲ ಸದಸ್ಯರು ಮಧ್ಯಾಹ್ನದ Lunch Boycotting ಹೋರಾಟದಲ್ಲಿ ಭಾಗವಹಿಸಬೇಕೆಂದು ಸಿಐಟಿಯು ಕರ್ನಾಟಕ ರಾಜ್ಯ ಸಮಿತಿ ರಾಜ್ಯಾಧ್ಯಕ್ಷರಾದ ಎಸ್‌. ವರಲಕ್ಷ್ಮಿ, ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ತಿಳಿಸಿದ್ದಾರೆ.

ಇದನ್ನೂ ಓದಿ : ಸರಕಾರ ಮತ್ತು ಪೋಲೀಸ್‌ಗೆ ಎಐಕೆಎಸ್‌ನ ಏಳು ಪ್ರಶ್ನೆಗಳು

 

 

Donate Janashakthi Media

Leave a Reply

Your email address will not be published. Required fields are marked *