ಸುಂಪ್ರೀಕೋರ್ಟ್ ನ ಹಿರಿಯ ವಕೀಲರಾದ ಬಾನು ಪ್ರತಾಪ್ ಸಿಂಗ್ರವರು ದೆಹಲಿ ರೈತರ ಸಭೆಯಲ್ಲಿ ಮಾಡಿದ ಭಾಷಣವನ್ನು ಕನ್ನಡಕ್ಕೆ ಪ್ರಜ್ವಲ್ ಪ್ರಕಾಶ್ ಅನುವಾದಿಸಿದ್ದಾರೆ.
ಯಾವುದೇ ಮುಜುರಗ ಇಲ್ಲದೇ ಹೇಳುತ್ತೇನೆ 26 ನೇ ತಾರಿಕು ನಡೆದ ಪ್ರತಿಭಟನೆ ಕೇಂದ್ರ ಸರ್ಕಾರಕ್ಕೆ ಸೀದಾ ಸಮಾಲು ಒಡ್ಡಿದೆ. ಘಟನೆಯನ್ನು ಮತ್ತು ಹೋರಾಟದ ಹಾದಿಯನ್ನು ತಪ್ಪಿಸಲು ಗೋದಿ ಮೀಡಿಯಾ ಹಾಗೂ ಸಂಘ ಪರಿವಾರದವರು ಹೇಳುತ್ತಿರುವ ಮಾತುಗಳಿಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಅವರು ಎಂದಿಗೂ ಸತ್ಯವನ್ನು ಹೇಳಿಲ್ಲ. ಹಾಗೂ ಸತ್ಯವನ್ನು ಹೇಳುವ ತಾಕತ್ತು ಸಹ ಅವರಿಗಿಲ್ಲ.
ನಾವು ರ್ಯಾಲಿ ಹೋಗುವ ಮಾರ್ಗ ಡಿವೈಡರ್ ಗಳನ್ನು ತೆಗೆಸುತ್ತೇವೆ ಎಂದು ಭರವಸೆ ಕೊಟ್ಟಿದ್ದ ಪೋಲಿಸರು ಯಾವುದೇ ಡಿವೈಡರ್ ಗಳನ್ನು ತೆಗೆದಿರಲಿಲ್ಲ. ಹಾಗಾಗಿ ನಾನು ಈ ವೇದಿಕೆಯ ಮೇಲಿಂದ ನೇರವಾಗಿ ನಮ್ಮ ಮಾರ್ಗವು ಬದಲಾಗಿದ್ದಕ್ಕೆ ಪೋಲಿಸರೇ ಹೊಣೆಯೆಂದು ಆರೋಪ ಮಾಡುತ್ತಿದ್ದೇನೆ. ಅವತ್ತಿನ ದಿನದಂದು ನಮ್ಮ ಮಾರ್ಗವನ್ನು ತಪ್ಪಿಸುವುದಕ್ಕಾಗಿ ಮತ್ತು ಟ್ರ್ಯಾಕ್ಟರ್ ಗಳು ದೆಹಲಿ ಒಳಗೆ ಹೋಗದೆ ತಡಿಯಬೇಕೆಂದು ಈ ಸಂಚನ್ನು ಕೇಂದ್ರ ಸರ್ಕಾರ ಮತ್ತು ದೆಹಲಿಯ ಪೋಲಿಸರು ಹೂಡಿದ್ದಾರೆ. ನಮಗೆ ಅನುಮತಿ ನೀಡಿದ ಮಾರ್ಗದಲ್ಲಿ ಕಂಟೇಯ್ನರ್ ಗಳನ್ನು ತಂದು ನಿಲ್ಲಸಲಾಗಿತ್ತು.
ನಾನು ಹಾಗು ವೇದಿಕೆಯ ಮೇಲೆ ಕುಳಿತಿರುವ ಸಂಚಾಲಕರು ಅಂದು ಘಾಜೀಪುರ್ ನಿಂದ ಹೋಗುವ ಮಾರ್ಗದಲ್ಲೇ ಇದ್ದೇವು. ಬೇರೆ ಮಾರ್ಗದಲ್ಲಿ ಹೋಗಿದ್ದ ಟ್ರ್ಯಾಕ್ಟರ್ ಗಳನ್ನು ನಾವು ಮುಂದೆ ಹೋಗಿ ಹಿಂದಕ್ಕೆ ತಿರುಗಿಸಿದ್ದೇವು. ಆದರೆ ಆದಾಗಲೇ ಒಂದಿಷ್ಟು ಟ್ರ್ಯಾಕ್ಟರ್ ಗಳು ಮುಂದಕ್ಕೆ ಹೋಗಿಬಿಟ್ಟಿದ್ದವು. ಇದಕ್ಕೆ ನಾವೇನು ಮಾಡುವುದು ಸ್ವಾಮಿ. ಜವಾಬ್ದಾರಿ ಇದದ್ದು ಪೋಲಿಸರದ್ದು ಮತ್ತು ಸರ್ಕಾರದ್ದು.
ಪ್ರತಿ ವರ್ಷ ಅಗಸ್ಟ್15 ಮತ್ತು ಜನವರಿ ೨೬ ರಂದು ರ‌್ಯಾಲಿಗಳು ದೆಹಲಿಯ ರಾಜಪಥದಲ್ಲಿ ನಡೆಯುತ್ತದೆ. ಇದರ ತಯಾರಿಗೆಂದು ೩ ದಿನ ಮುಂಚಿತವಾಗಿಯೇ ಆ ಮಾರ್ಗವನ್ನು ಪಬ್ಲಿಕ್‌ನಿಂದ ಮುಚ್ಚಲಾಗುತ್ತದೆ. ಮತ್ತು ಸೇನೆ ಮತ್ತು ಸರ್ಕಾರದ ಅಧಿಕಾರಗಳನ್ನು ಹೊರತುಪಡಿಸಿ ಯಾರಿಗೂ ಅಲ್ಲಿ ಪ್ರವೇಶವಿರುವುದಿಲ್ಲ ಆದರೆ ಈ ಬಾರಿ ನಡೆದ ರ‌್ಯಾಲಿಯಲ್ಲಿ ಅಲ್ಲಿ ಮುಂಚಿತವಾಗಿಯೇ ೧ ಸಾವಿರ ಜನರು ಅಲ್ಲಿ ಸೇರಿದ್ದರು ಅವರು ಯಾರು ಮತ್ತು ಅಲ್ಲಿ ಏನು ಮಾಡುತ್ತಿದ್ದರು ಎಂಬ ಪ್ರಶ್ನೆಗೆ ನಮಗೆ ಇಂದು ಉತ್ತರ ಸರ್ಕಾರ ನೀಡಬೇಕಾಗಿದೆ.
ನಮ್ಮ ಯಾವುದೇ ರೈತರು ತೊಂದರೆಯನ್ನು ಉಂಟು ಮಾಡಿಲ್ಲ, ತೊಂದರೆ ಕೊಟ್ಟವರು ಮತ್ತು ಗದ್ದಲವನ್ನು ಮಾಡಿದವರು ನಿಮ್ಮದೇ ಪುಂಡ ಪೋಕರಿಗಳು. ಆದರೆ ನಡೆದ ಗಲಾಟೆಯ ಪೊರ್ತಿ ನಿಂದನೆಯನ್ನು ನಮ್ಮ ರೈತರ ಮೇಲೆ ಹೊರಿಸಿದ್ದಾರೆ. ಇದಕ್ಕೆ ಜವಾಬ್ದಾರಿ ಯಾರು? ನೀವು!ಆದರೆ ನಿಮ್ಮಲ್ಲಿ ಸ್ವಲ್ಪವೂ ನೈತಿಕತೆ ಇಲ್ಲ ಯಾಕೆಂದರೆ ನೈತಿಕತೆಯೆಂಬುದು ನಿಮ್ಮ ಜೀವನದಲ್ಲಿ ಎಂದಿಗೂ ಇರಲಿಲ್ಲ. ಹಿಂಸೆ ಮತ್ತು ಷಡ್ಯಂತ್ರಗಳನ್ನು ಹೊರತುಪಡಿಸಿ ನಿಮಗೆ ಬೇರೆ ಯಾವ ಪರ್ಯಾಯ ಮಾರ್ಗವೇ ಗೊತ್ತಿಲ್ಲ.
ಈ ಆಂದೋಲನವನ್ನು ಹಾಳು ಮಾಡಲೆಂದು ನಿಮ್ಮ ತಲೆಯಲ್ಲಿ ಮೊದಲಿನಿಂದಲೆ ಕಸವನ್ನು ತುಂಬಿಕೊಂಡಿದ್ದಿರಿ. ನಮ್ಮನ್ನು ದೇಶದ್ರೋಹಿಗಳೆಂದು ಪಟ್ಟ ಕಟ್ಟುತ್ತಿದ್ದಿರಾ? ದೇಶದ್ರೋಹಿಗಳು ನಾವಲ್ಲ ಸ್ವಾಮಿ ನೀವು, ನಿಮ್ಮಂತ ದೇಶದ್ರೋಹಿಗಳನ್ನು ಈ ದೇಶ ಎಂದಿಗೂ ಕಂಡಿರಲಿಲ್ಲವೇನೊ. ಈಗ ಒಂದಷ್ಟು ಜನಗಳನ್ನು ಗುರುತಿಸಿ ಎಫ್‌ಐಆರ್ ಅನ್ನು ಹಾಕಿದ್ದೀರಿ ಇದೇನು ಮೊದಲಲ್ಲ ಮತ್ತೇನು ಕೊನೆಯೂ ಅಲ್ಲ. ಎಫ್‌ಐಆರ್‌ಗಳನ್ನು ಹಾಕಿದರೆ ನಾವೇನು ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ನಮ್ಮನ್ನು ನೀವು ಹೆಚ್ಚೆಂದರೆ ಜೈಲಿಗೆ ಹಾಕಬಹುದು ಅಷ್ಟೆ. ಆದರೆ ಇಲ್ಲಿ ಹೋರಾಟ ನಡೆಸುತ್ತಿರುವ ಲಕ್ಷಾಂತರ ರೈತರನ್ನು ನಿಮ್ಮಿಂದ ಮುಟ್ಟಲು ಕೂಡ ಸಾಧ್ಯವಿಲ್ಲ.
ನಮ್ಮನ್ನು ಜೈಲಿಗೆ ಹಾಕುಬಹುದು ಆದರೆ ನಮ್ಮ ವಿಚಾರಗಳನ್ನು ನೀವು ಮುಟ್ಟಲು ಸಾಧ್ಯವಿಲ್ಲ. ಹತ್ತು ಜನರನ್ನು ನೀವು ಜೈಲಿಗೆ ತಳ್ಳಬಹುದು ಆದರೆ ಅಷ್ಟೇ ಗಟ್ಟಿತನದಿಂದ ನಮ್ಮ ಸಂಗಾತಿಗಳು ಹತ್ತಲ್ಲ, ನೂರಲ್ಲ, ಸಾವಿರವಲ್ಲ, ಲಕ್ಷಾಂತರವಲ್ಲ, ಕೋಟ್ಯಾತರ ಸಂಖ್ಯೆಯಲ್ಲಿ ನಮ್ಮ ಹೋರಾಟವನ್ನು ಮುಂದ್ಯೂಯ್ಯುತ್ತಾರೆ.
ಬಂಧುಗಳೇ ನಮ್ಮದು ಸಾವು ಮತ್ತು ಬದಕಿನ ಹೋರಾಟ, ಇಲ್ಲಿ ನೆರೆದಿರುವ ಪ್ರತಿಯೊಬ್ಬರು ಈ ಆಂದೋಲಕ್ಕೆ ಪ್ರಾಣವನ್ನು ಕೊಡಲು ಸಿದ್ದರಿದ್ದೇವೆ. ಈ ಸಭೆಯ ಮೂಲಕ ಸರ್ಕಾರಕ್ಕೆ ಹೇಳುತ್ತಿದ್ದೇನೆ, ನಮ್ಮಲ್ಲಿ ಉಸಿರು ಇರುವವರೆಗೂ ನಮ್ಮ ಈ ಹೋರಾಟ ನಿಲ್ಲವುದಿಲ್ಲ. ಮುಂಬರುವ ದಿನಗಳಲ್ಲಿ ಇನ್ನು ತೀವ್ರವಾಗಲಿದೆ. ನೆನಪಿರಲಿ ಬಂಧುಗಳೇ ನಮಗೆ ಸ್ವಾತಂತ್ರ ಸಿಗಲು ಎಷ್ಟೋ ಜನ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ನಾವೇನಾದರೂ ಈ ಸರ್ಕಾರ ರಚಿಸಿರುವ ಕಾಯ್ದೆಗಳಿಗೆ ಬಗ್ಗಿದರೆ ಅವರೆಲ್ಲರ ತ್ಯಾಗ ವ್ಯರ್ಥವಾಗುತ್ತದೆ.
ಯಾವ ಆದೊಂಲನವು ಕೇವಲ ಪಂಜಾಬ್ ಮತ್ತು ಹರಿಯಾಣಕ್ಕೆ ಸೀಮಿತವಾಗಿತ್ತು. ಈಗ ಪೂರ ದೇಶದಲ್ಲಿ ವೇಗವಾಗಿ ಹರಡಿಕೊಂಡಿದೆ. ಸ್ನೆಹಿತರೆ ನಮ್ಮ ದೇಹಗಳಿಗೆ ಅವರು ಗುಂಡುಗಳನ್ನು ಹಾರಿಸಬಹುದು ಆದರೆ ಅದೇ ಗುಂಡು ಹೊಡಿಸಿಕೊಂಡು ದೇಹದಿಂದ ಹೋರಾಟದ ಘೋಷಣೆಗಳು ಇನ್ನು ಹೆಚ್ಚಾಗುತ್ತದೆಯೇ ಹೊರೆತು ನಾವು ಬಗ್ಗುವುದಿಲ್ಲ. ಇಂತಹ ಸರ್ಕಾರಗಳು ಬರುತ್ತದೆ ಹೋಗುತ್ತದೆ. ಯಾವ ಹಿಟ್ಲರ್ ಮತ್ತು ಮುಸೊಲೋನಿ ಯಂತಹ ಸರ್ವಾಧಿಕಾರಿಗಳನ್ನೇ ಬಡಿದೆಬ್ಬಿಸಿದರೂ ಇನ್ನು ಈ ಮೋದಿಜೀ ಯಾವ ಲೆಕ್ಕವೂ ಇಲ್ಲ.
ನಮಗೆ ಗೊತ್ತಿದೆ ಸುಪ್ರೀಂ ಕೋರ್ಟ್ ಕೂಡ ನಮ್ಮ ಪರ ಇಲ್ಲವೆಂದು. ಹಿಂಸೆಯ ಇತಿಹಾಸವೇ ಈ ಸರ್ಕಾರದ ಇತಿಹಾಸ ಪುಟಗಳಿರುವುದು. ಹಿಂಸೆ ನಿಲ್ಲತ್ತದೆ, ಇಂದಲ್ಲಾ ನಾಳೆ, ನಾಳೆ ಇಲ್ಲದಿದ್ದರೆ ನಾಡಿದ್ದು, ನಿಲ್ಲತ್ತದೆ ಒಂದು ದಿನ ನಿಂತೇ ನಿಲ್ಲುತ್ತದೆ. ಮಾನ್ಯ ಪ್ರಧಾನಿಗಳೇ ನಿಮ್ಮ ದಿನಗಳು ಇನ್ನು ಬೆರೆಳೆಣಿಕೆಯಷ್ಟು ಮಾತ್ರ. ನಿಮ್ಮ ಬಳಿ ಇರುವ ಅಸ್ತ್ರಗಳು ಎಲ್ಲಾ ಖಾಲಿಯಾಗಿವೆ. ಇನ್ನು ನಿಮ್ಮ ಪುಂಗಿ ಸರ್ಕಾರದ ಕಥೆ ಬಗೆಹರಿದಿದೆ. ನಿಮ್ಮ ಭವಿಷ್ಯ ಈ ದೇಶದಲ್ಲಿ ಇನ್ನು ಕಷ್ಟವೇ. ಇನ್ನೂ ಏನಾದರೂ ಅಸ್ತ್ರಗಳಿದ್ದರೆ ಪ್ರಯೋಗಿಸಿಬಿಡಿ ಸ್ವಾಮಿ ಮುಂದೆ ಪ್ರಯೋಗಿಸಲು ಅವಕಾಶ ಸಿಗುವುದೋ ಇಲ್ಲವೋ.