ಬೆಂಗಳೂರು| ನಗರದಲ್ಲಿ ರಾತ್ರಿಯಿಡೀ ಸುರಿದ ಮಳೆ; ರಸ್ತೆಗಳಲ್ಲಿ ನೀರು

ಬೆಂಗಳೂರು: ಬೆಂಗಳೂರಲ್ಲಿ ಮಳೆಯು ಮೇ 18 ಭಾನುವಾರ ರಾತ್ರಿ ಇಡೀ ಆರ್ಭಟಿಸಿದೆ. ನಗರದ ಅಷ್ಟ ದಿಕ್ಕುಗಳಲ್ಲೂ ಮಳೆಯಾಗಿದ್ದು, ವಾರದ ಮೊದಲ ದಿನವೇ ಸಿಟಿ ಮಂದಿಗೆ ಕಿರಿಕಿರಿ ಉಂಟಾಗಿದೆ. ರಾತ್ರಿಯಿಂದ ಬೆಳಗ್ಗೆ 5:30ರವರೆಗೆ ನಗರ ವ್ಯಾಪ್ತಿಯಲ್ಲಿ 104 ಮಿ.ಮೀ ಮಳೆಯಾಗಿದೆ. ಬೆಂಗಳೂರು

ಕಳೆದ 10 ವರ್ಷದಲ್ಲಿ ಮೇ ತಿಂಗಳಲ್ಲಿ ದಾಖಲಾದ ಅತಿಹೆಚ್ಚು ಮಳೆ ಇದಾಗಿದೆ. ಭಾರೀ ಮಳೆಗೆ ರಸ್ತೆಗಳಲ್ಲಿ ನೀರು ನಿಂತಿದೆ. ಅಲ್ಲದೇ ನಗರದ ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ಇದನ್ನೂ ಓದಿ: ಸೋಫಿಯಾ ಖುರೇಷಿಯ ಡೀಪ್‌ಫೇಕ್ ವೀಡಿಯೊ ಪ್ರಕರಣ: ಸುಪ್ರೀಂ ಕೋರ್ಟ್ ಪಿಐಎಲ್ ವಜಾ

ಇನ್ನೂ ಈ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ.ಜಿ‌.ಪರಮೇಶ್ವರ್ ಪ್ರತಿಕ್ರಿಯೇ ನೀಡಿದ್ದಾರೆ. ಸದಾಶಿವನಗರದಲ್ಲಿ ಮಾತನಾಡಿದ ಅವರು, ಮಳೆಯಿಂದ ತುಂಬಾ ತೊಂದರೆಯಾಗಿದೆ. ಸಿಲ್ಕ್​​ ಬೋರ್ಡ್​ನಲ್ಲಿ ನೀರು ನುಗ್ಗಿದೆ. ಬೇರೆ ಕಡೆಗಳಲ್ಲೂ ನೀರು ನುಗ್ಗಿದೆ.

ಇದರಿಂದ ಟ್ರಾಫಿಕ್​ಗೆ ತೊಂದರೆ ಅಂತಿದ್ದಾರೆ. ಡಿಸಿಎಂ ಡಿಕೆಶಿ ಹೊಸಪೇಟೆಯಲ್ಲಿದ್ದಾರೆ. ಅವರು ಸೂಚನೆ ಕೊಟ್ಟಿದ್ದಾರೆ ಅಂತ ಕೇಳಿದ್ದೇನೆ. ವಲಯವಾರು ಜಂಟಿ ಆಯುಕ್ತರು ಇರುತ್ತಾರೆ. ಅವರು ಕ್ರಮ ವಹಿಸುತ್ತಾರೆ ಎಂದು ಹೇಳಿದರು.

ಇನ್ನೂ ಬಿಬಿಎಂಪಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಿತ್ತು. ವೈಟ್ ಟಾಪಿಂಗ್, ಕೇಬಲ್ ವೈರ್ ಕಾಮಗಾರಿ ನಡೆಯುತ್ತಿದೆ. ಮಳೆಗಾಲ ಹತ್ತಿರ ಬರುತ್ತಿದೆ. ಹೀಗಾಗಿ ಜಾಗ್ರತೆ ವಹಿಸಬೇಕಿತ್ತು ಎಂದು ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ನೋಡಿ: 25 ಕೋಟಿ ಜನಸಂಖ್ಯೆಯನ್ನು ಬಡತನದಿಂದ ಹೊರ ತಂದಿರುವುದಾಗಿ ಹೇಳುತ್ತಿರುವ ಮೋದಿ ಸರ್ಕಾರ ? ವಾಸ್ತವವೇನು?‌

Donate Janashakthi Media

Leave a Reply

Your email address will not be published. Required fields are marked *