ಶಿವಮೊಗ್ಗ : ಮಲೆನಾಡು ಶಿವಮೊಗ್ಗದ ಸಿಗಂಧೂರು ಕ್ಷೇತ್ರ ಒಂದು ಕಡೆ ದೇವರ ಸನ್ನಿಧಿ ಆಗಿದ್ದರೂ ಇಲ್ಲಿ ಖ್ಯಾತಿ ಪಡೆದಿದ್ದು ಮತ್ತು ಈ ದೇವಸ್ಥಾನ ಸೇರಿದಂತೆ ಸುತ್ತಮುತ್ತಲ ಪ್ರವಾಸಿ ತಾಣಗಳಿಗೆ ಆಧಾರವಾಗಿ ನಿಂತಿದ್ದು ಇಲ್ಲಿನ ಶರಾವತಿ. ಈ ಹಿನ್ನೀರಿನಲ್ಲಿ ಲಾಂಚ್ ಇರುವುದೇ ವಿಶೇಷ. ಇಲ್ಲಿನ ಬಹುತೇಕ ಜನರ ಒಡನಾಡಿ ಸಂಪರ್ಕದಂತೆ ಕೆಲಸ ಮಾಡುತ್ತಿದ್ದ ಲಾಂಚ್ ಇದೀಗ ಸುಮಾರು 17 ದಿನಗಳ ಕಾಲ ಸಂಪೂರ್ಣ ಬಂದ್ ಆಗಲಿದೆ ಎಂದು ವರದಿಯಾಗಿದ್ದು, ಇದಕ್ಕೆ ಕಾರಣ ಮಳೆಯ ಕೊರತೆ.
ಹೌದು, ಮಳೆಯ ಕೊರತೆಯಿಂದ ಶರಾವತಿ ಹಿನ್ನೀರಿನಲ್ಲಿ ನೀರಿನ ಹರಿವು ಕಡಿಮೆಯಾಗಿದ್ದು, ಸಿಗಂದೂರು ಲಾಂಚ್‌ನಲ್ಲಿ ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಮಟ್ಟ ಕುಸಿತ ಹಿನ್ನೆಲೆ – 17 ದಿನ ಲಾಂಚ್ ಸೇವೆ ಸಂಪೂರ್ಣ ಬಂದ್ ಆಗಲಿದೆ.
ಇದನ್ನು ಓದಿ : ಅಗ್ನಿವೀರ್ ಪರಾಮರ್ಶೆಗೆ ಬಿಜೆಪಿಯನ್ನು ಆಗ್ರಹಿಸಿದ ಜೆಡಿಯು
ಶರಾವತಿ ಕಣಿವೆ ಭಾಗದ 4 ಗ್ರಾಮ ಪಂಚಾಯಿತಿಗಳ ಸಂಪರ್ಕ ಕೊಂಡಿಯಾಗಿರುವ ಲಾಂಚ್ ಸೇವೆಯನ್ನು ಈ ಭಾಗದ ರೈತರು ಹಾಗೂ ವಿದ್ಯಾರ್ಥಿಗಳು ಹೆಚ್ಚಾಗಿ ಅವಲಂಬಿಸಿದ್ದಾರೆ. ಜಿಲ್ಲಾ, ತಾಲ್ಲೂಕು ಕೇಂದ್ರವನ್ನು ಸಂಪರ್ಕಿಸಲೂ ಈ ಭಾಗದ ಜನರಿಗೆ ಇದೇ ಮಾರ್ಗ ಆಸರೆ. ಲಾಂಚ್ ಸ್ಥಗಿತಗೊಂಡರೆ ರೈತರು ಕೃಷಿ ಉತ್ಪನ್ನಗಳನ್ನು ಸಾಗಿಸಲು ಹೊಸನಗರ ತಾಲ್ಲೂಕಿನ ನಿಟ್ಟೂರು ಮೂಲಕ 90 ಕಿ.ಮೀ. ಸುತ್ತಿ ಸಾಗಬೇಕಾದ ಅನಿವಾರ್ಯತೆ ಇದೆ ಎಂದು ವರದಿಯಾಗಿದೆ.
ಶರಾವತಿ ಹಿನ್ನೀರಿನ ಮುಪ್ಪಾನೆ, ಹಸಿರುಮಕ್ಕಿ ಲಾಂಚ್ ಸೇವೆಗಳು ಈಗಾಗಲೇ ಸ್ಥಗಿತಗೊಂಡಿದ್ದು, ಈಗ ಸಿಗಂದೂರು ಲಾಂಚ್ ಕೂಡ ಸ್ಥಗಿತಗೊಂಡಿರುವುದರಿಂದ ಈ ಭಾಗದ ಜನರು ತೊಂದರೆ ಎದುರಿಸುವಂತಾಗಿದೆ.
ಇದನ್ನು ನೋಡಿ : ಚುನಾವಣಾ ಆಯೋಗ ಕಟ್ಟುನಿಟ್ಟಾಗಿ ನಡೆದುಕೊಂಡಿದ್ದರೆ ಬಿಜೆಪಿ ಹೀನಾಯವಾಗಿ ಸೋಲುತ್ತಿತ್ತು -ಡಾ.ಕೆ.ಪ್ರಕಾಶ್ ಜೊತೆ ಮಾತುಕತೆ