ಹಿಂಸಾಚಾರ ಪೀಡಿತ ಸಂಭಾಲ್‌ ಗೆ ಭೇಟಿ ನೀಡಲಿರುವ ರಾಹುಲ್ ಗಾಂಧಿ

ಲಖನೌ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಉತ್ತರ ಪ್ರದೇಶದ ಹಿಂಸಾಚಾರ ಪೀಡಿತ ಸಂಭಾಲ್‌ಗೆ ಬುಧವಾರದಂದು ಭೇಟಿ ನೀಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಈ ಸಂದರ್ಭದಲ್ಲಿ ಅವರೊಂದಿಗೆ ಉತ್ತರ ಪ್ರದೇಶದ ಕಾಂಗ್ರೆಸ್‌ನ ಸಂಸದರೂ ಇರಲಿದ್ದಾರೆ.

“ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾರೂ ಸಹ ಸಂಭಾಲ್‌ಗೆ ಭೇಟಿ ನೀಡಲಿದ್ದಾರೆ” ಎಂದು ಉತ್ತರ ಪ್ರದೇಶದ ಕಾಂಗ್ರೆಸ್ ಅಧ್ಯಕ್ಷ ಅಜಯ್ ರಾಯ್ ಮಾಹಿತಿ ನೀಡಿದ್ದಾರೆ.

“ನವೆಂಬರ್ 24ರಂದು ಈ ಪ್ರದೇಶದಲ್ಲಿ ನಾಲ್ವರು ಮೃತಪಟ್ಟಿದ್ದರು” ಎಂದಿದ್ದಾರೆ. ಹರಿಹರ ದೇಗುಲದ ಮೇಲೆ ಮೊಗಲ್ ದೊರೆಗಳು ಮಸೀದಿ ನಿರ್ಮಿಸಿದ್ದಾರೆ ಎಂಬ ಅರ್ಜಿಗೆ ಸಂಬಂಧಿಸಿದಂತೆ ಸಮೀಕ್ಷೆಗೆ ಆದೇಶಿಸಿದ ನ್ಯಾಯಾಲಯದ ಆದೇಶ ವಿರೋಧಿಸಿ ನ. 19ರಂದು ಸಂಭಾಲ್‌ನಲ್ಲಿ ಪ್ರತಿಭಟನೆ ನಡೆಯಿತು.

ಇದನ್ನೂ ಓದಿ: ಫೆಂಗಲ್ ಚಂಡಮಾರುತ ಅನಾಹುತ :‌ ಪ್ರವಾಹದಿಂದ ಕೊಚ್ಚಿ ಹೋದ ಕಾರು – ಬಸ್

ನ. 24ರಂದು ಎರಡನೇ ಸಮೀಕ್ಷೆ ನಡೆಸಲು ಮುಂದಾದ ಸಂದರ್ಭದಲ್ಲಿ ಪ್ರತಿಭಟನೆ ಹಿಂಸಾಚಾರ ಸ್ವರೂಪ ಪಡೆದುಕೊಂಡಿತು. ಶಾಹಿ ಜಮಾ ಮಸೀದಿ ಎದರು ಜಮಾಯಿಸಿದ ಪ್ರತಿಭಟನಕಾರರು ಹಾಗೂ ಭದ್ರತಾ ಸಿಬ್ಬಂದಿ ನಡುವೆ ಘರ್ಷಣೆ ಸಂಭವಿಸಿತು. ಈ ಸಂದರ್ಭದಲ್ಲಿ ನಾಲ್ವರು ಮೃತಪಟ್ಟಿದ್ದರು.

ಸಂಭಾಲ್ ಹಿಂಸಾಚಾರ ಕುರಿತು ಚರ್ಚೆಗೆ ಸಮಾಜವಾದಿ ಪಕ್ಷ ಸೇರಿದಂತೆ ವಿರೋಧ ಪಕ್ಷಗಳು ಅವಕಾಶ ಕೋರಿವೆ.

ಇದನ್ನೂ ನೋಡಿ: ವಾಯುಭಾರ ಕುಸಿತ: ಕರ್ನಾಟಕದಲ್ಲಿ ಡಿಸೆಂಬರ್‌ನಲ್ಲಿ ಭರ್ಜರಿ ಮಳೆ ನಿರೀಕ್ಷೆ – IMD ಮುನ್ಸೂಚನೆ Janashakthi Media

Donate Janashakthi Media

Leave a Reply

Your email address will not be published. Required fields are marked *