ವಿಧಾನಸಭಾ ಅಧಿವೇಶನದಲ್ಲಿ ಜನರ ಸಮಸ್ಯೆಗಳ ಬಗ್ಗೆ ಚರ್ಚಿಸಿ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುಪತಿ ಭಟ್ ಆಗ್ರಹ

ಬೆಂಗಳೂರು : ವಿಧಾನಸಭಾ ಅಧಿವೇಶನದಲ್ಲಿ ಜನರ ಸಮಸ್ಯೆಗಳ ಬಗ್ಗೆ ಚರ್ಚಿಸಿ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ( ಕೆಆರ್‌ಎಸ್) ರಾಜ್ಯ ಪ್ರಧಾನ ಕಾರ್ಯದರ್ಶಿ ರಘುಪತಿ ಭಟ್ ಆಗ್ರಹಿಸಿದರು.
ಬೆಂಗಳೂರು

ರಾಜ್ಯದಲ್ಲಿ ತುರ್ತಾಗಿ ಗಮನ ನೀಡಬೇಕಾದ ಹತ್ತು ಹಲವು ಸಮಸ್ಯೆಗಳಿದ್ದು, ಈ ವಿಚಾರಗಳ ಬಗ್ಗೆ ಚರ್ಚೆ ನಡೆಸದೆ, ಕೆಲವೊಂದು ವ್ಯಯಕ್ತಿಕ ವಿಚಾರಗಳನ್ನು ಮುನ್ನೆಲೆಗೆ ತಂದು, ಗಂಭೀರ ಚರ್ಚೆ ನಡೆಸದೆ, ಕಾಟಾಚಾರಕ್ಕೆ ಮಾತನಾಡಿ, ಯಾವುದೇ ಪರಿಹಾರವನ್ನು ಕಂಡುಕೊಳ್ಳುವುದು ಇತ್ತೀಚಿನ ವರ್ಷಗಳಲ್ಲಿನ ವಿಧಾನ ಮಂಡಲದ ಅಧಿವೇಶನದಲ್ಲಿ ಕಂಡು ಬರುತ್ತಿದೆ. ವಿರೋಧ ಪಕ್ಷದವರು ಕೇವಲ ಗದ್ದಲ ಮಾಡುವುದು ಅಥವಾ ಆಡಳಿತ ಪಕ್ಷವು ಗಂಭೀರ ವಿಚಾರಗಳು ಚರ್ಚೆಗೆ ಬರದಂತೆ ಗಮನ ಬೇರೆಡೆ ಸೆಳೆಯುವ ತಂತ್ರಗಳು ನಡೆದು, ಯಾವುದೇ ಪ್ರಯೋಜನವಿಲ್ಲದೆ ವಿಧಾನ ಮಂಡಲದ ಅಧಿವೇಶನ ಮುಕ್ತಾಯವಾಗುತ್ತಿದೆ. ಮೊನ್ನೆಯಿಂದ ರಾಜ್ಯ ವಿಧಾನ ಮಂಡಲದ ಮುಂಗಾರು ಅಧಿವೇಶನ ಆರಂಭವಾಗಿದ್ದು, ಎರಡು ದಿನಗಳ ಕಲಾಪಗಳನ್ನು ಗಮನಿಸಿದರೆ, ಈ ಅಧಿವೇಶನದಲ್ಲೂ ಗಂಭೀರ ವಿಷಯಗಳ ಬಗ್ಗೆ ಚರ್ಚೆ ನಡೆಯುವ ಬಗ್ಗೆ ಅನುಮಾನವಿದೆ, ಈ ನಿಟ್ಟಿನಲ್ಲಿ ಈ ತೆರಿಗೆ ಏರಿಕೆ ಮಾಡದೆ ಭ್ರಷ್ಟಾಚಾರ ಮತ್ತು ದುಂದುವೆಚ್ಚಕ್ಕೆ ಕಡಿವಾಣ ಹಾಕಿ ಆಡಳಿತ ನಡೆಸುವ, ಕಾಲಕಾಲಕ್ಕೆ ಸರ್ಕಾರಿ ನೌಕರರಿಗೆ ಸಂಬಳ ನೀಡುವ ಬಗ್ಗೆ ಮತ್ತು ರಾಜ್ಯದ ಆರ್ಥಿಕ ಸ್ಥಿತಿಗತಿಯ ಕುರಿತು. ಎಲ್ಲಾ ಅಗತ್ಯ ಸೇವೆಗಳ ಶುಲ್ಕವನ್ನು ಹೆಚ್ಚಿಸಲಾಗಿದ್ದು, ಜನರು ದಿನನಿತ್ಯದ ಖರ್ಚುವೆಚ್ಚಗಳನ್ನು ನಿಭಾಯಿಸಲು ದುಸ್ಥರವಾಗಿದೆ ಎಂದು ಪ್ರಶ್ನಿಸಿದರು.

ಬೆಂಗಳೂರು

ಲೋಕಾಯುಕ್ತ ಸಂಸ್ಥೆಯಲ್ಲಿನ ಭ್ರಷ್ಟಾಚಾರ ಪ್ರಕರಣವನ್ನು ನ್ಯಾಯಾಂಗದ ಉಸ್ತುವಾರಿಯಲ್ಲಿ ತನಿಖೆ ನಡೆಸುವ ಬಗ್ಗೆ ಮತು ಈಗಾಗಲೇ ವರದಿಯಾಗಿರುವಂತೆ ಅಬಕಾರಿ ಸಚಿವ ಆರ್. ಬಿ. ತಿಮ್ಮಾಪುರ್ ಅವರು ಇದರಲ್ಲಿ ಭಾಗಿಯಾಗಿರುವುದು ಕಂಡುಬಂದಿರುವುದರಿಂದ ಅವರು ರಾಜಿನಾಮೆ ನೀಡಬೇಕು ಮತ್ತು ಇದರಲ್ಲಿ ಭಾಗಿಯಾದವರನ್ನು ಪತ್ತೆಹಚ್ಚುವ ಕೆಲಸ ಮಾಡಬೇಕು ಮತ್ತು ಲೋಕಾಯುಕ್ತ ಸಂಸ್ಥೆಯು ಪಾರದರ್ಶಕವಾಗಿ ಭ್ರಷ್ಟಾಚಾರ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುವ ಬಗ್ಗೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ರಾಜ್ಯದ ಗೃಹ ಸಚಿವರು ತಮ್ಮ ಖಾತೆಯ ನಿರ್ವಹಣೆಯಲ್ಲಿ ಹಾಗೂ ಪೊಲೀಸ್ ಇಲಾಖೆಯ ಮೇಲೆ ನಿಯಂತ್ರಣವೇ ಇಲ್ಲದಂತಾಗಿದೆ.ರಸಗೊಬ್ಬರ ಸರಬರಾಜು ತೀರ ಸಮಸ್ಯೆಯಾಗಿದ್ದು, ಇದು ಪ್ರತಿ ವರ್ಷ ಮರುಕಳಿಸುತ್ತಿದ್ದು, ಶಾಶ್ವತ ಪರಿಹಾರ ಕಂಡುಕೊಳ್ಳಬೆಕಾಗಿದೆ ಎಂದರು.

ಬೆಂಗಳೂರು

ಮುಂಗಾರು ಮಳೆಯ ಅತಿವೃಷ್ಠಿಯಿಂದ ಸಾವಿರಾರು ಎಕರೆ ಬೆಳೆ ಹಾನಿಯಾಗಿದ್ದು, ಬೆಳೆ ಪರಿಹಾರ ವಿಮೆಯು ನಿರುಪಯುಕ್ತವಾಗಿದೆ ಮತ್ತು ರೈತರನ್ನು ಎಪಿಎಂಸಿಗಳಲ್ಲಿ ನಿರಂತರವಾಗಿ ಶೋಷಣೆಯನ್ನು ನಿಲ್ಲಿಸುವ ಮತ್ತು ರೈತರು ಹಲವು ಸಮಸ್ಯೆಗಳ ಎದುರಿಸುತ್ತಿದ್ದಾರೆ.ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಕಾಂಗ್ರೆಸ್ ಪಕ್ಷವು 2023ರ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಭರವಸೆ ನೀಡಿತ್ತು, ಆದರೆ ಈ ಬಗ್ಗೆ ಚಕಾರ ಎತ್ತದಿರುವ ಬಗ್ಗೆ ರಾಜ್ಯದ ಸಣ್ಣ ಹಳ್ಳಿಗಳಲ್ಲೂ ಕೂಡ ಅಕ್ರಮವಾಗಿ ಮಧ್ಯ ಮಾರಾಟ ಮಾಡಲಾಗುತ್ತಿದೆ, ಇದನ್ನು ನಿಯಂತ್ರಿಸುವಲ್ಲಿ ಅಬಕಾರಿ ಇಲಾಖೆಯು ಸಂಪೂರ್ಣವಾಗಿ ಸೋತಿದೆ. ಇದರಿಂದ ಹಳ್ಳಿಗಳಲ್ಲಿ ಯುವಕರು ಕೂಡ ಮದ್ಯದ ದಾಸರಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಎಚ್ಚರಿಸಿದರು.

ರಾಜ್ಯದಲ್ಲಿ ಲಕ್ಷಾಂತರ ಬಡವರು ವಸತಿ ಹೀನರಾಗಿದ್ದು, ಈ ಹಿಂದಿನ ನೆರೆ ಹಾವಳಿಯಿಂದ ಮನೆ ಕಳೆದುಕೊಂಡವರಿಗೆ ಇದುವರೆಗೂ ಕೂಡ ಮನೆ ಒದಗಿಸಲು ಸಾಧ್ಯವಾಗಿಲ್ಲ, ಆದರೆ ಮನೆ ಇರುವವರೆ ಮತ್ತೆ ಮನೆಗಳನ್ನು ಪಡೆದುಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಅರಣ್ಯ ನಾಶ ಯಾವುದೇ ಅಡೆತಡೆಯಿಲ್ಲದೆ ನಡೆಯುತ್ತಿದೆ. ಶರವಾತಿ ಪಂಪ್ಡ್ ಸ್ಟೋರೇಜ್ ಯೋಜನೆಯು ಸಂಪೂರ್ಣವಾಗಿ ಅವೈಜ್ಞಾನಿಕವಾಗಿದ್ದು, ಇದರಿಂದ ಪರಿಸರದ ಮೇಲೆ ದೊಡ್ಡ ಮಟ್ಟದಲ್ಲಿ ದುಷ್ಪರಿಣಾಮ ಬೀರಲಿದೆ. ಅರಣ್ಯ ನಾಶದಿಂದ ಆನೆ ಮತ್ತು ಕಾಡು ಪ್ರಾಣಿಗಳ ಹಾವಳಿ ತೀವ್ರವಾಗಿದೆ. ಈ ಬಗ್ಗೆ ಗಂಭೀರವಾಗಿ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕಾಗಿದೆ.

ಕಪ್ಪುತಲೆ ಹುಳ ಬಾಧೆಯಿಂದ ತೆಂಗು ಬೆಳೆಗೆ ವ್ಯಾಪಕ ಹಾನಿಯಾಗಿದ್ದು, ಮರಗಳು ಸಂಪೂರ್ಣವಾಗಿ ಹಾಳಾಗುವ ಮತ್ತು ಇಳುವರಿ ಸಂಪೂರ್ಣವಾಗಿ ಕುಸಿದಿದೆ. ಇದಕ್ಕೆ ಸಮರೋಪಾದಿಯಲ್ಲಿ ಪರಿಹಾರ ಕೈಗೊಳ್ಳಬೇಕಾಗಿದೆ, ಆದರೆ ತೋಟಗಾರಿಕಾ ಇಲಾಖೆಯು ಕೈಕಟ್ಟಿ ಕುಳಿತಿದ್ದು, ತಮಗೂ ಇದಕ್ಕು ಸಂಬಂಧವೇ ಇಲ್ಲದಂತೆ ಇದೆ.  ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ವ್ಯಾಪಕವಾಗಿ ನಡೆಯುತ್ತಿದ್ದು, ಸಾವಿರಾರು ಕೋಟಿ ರಾಯಧನ ನಷ್ಟವಾಗುತ್ತಿದೆ. ಒಂದೆಡೆ ಸರ್ಕಾರವು ತನ್ನ ನೌಕರರಿಗೆ ಸಂಬಳ ನೀಡಲಾಗದೆ ಮತ್ತು ಅಭಿವೃದ್ಧಿ ಕೆಲಸಗಳಿಗೆ ಅನುದಾನ ಹಂಚಿಕೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಕೈಚಲ್ಲಿದೆ, ಆದರೆ ಮತ್ತೊಂದೆಡೆ, ವ್ಯಾಪಕವಾಗಿ ಅಕ್ರಮ ಮರಳು ಮತ್ತು ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಈ ಹಿಂದೆ ನಡೆದ ಅಕ್ರಮ ಗಣಿಗಾರಿಕೆಯಿಂದ ವಸೂಲಾಗಬೇಕಾದ ಸಾವಿರಾರು ಕೋಟಿ ರಾಯಧನ ಮತ್ತು ದಂಡವನ್ನು ವಸೂಲಿ ಮಾಡಲು ಯಾವುದೇ ಕ್ರಮ ವಹಿಸಲಾಗುತ್ತಿಲ್ಲ.

ಇದನ್ನೂ ಓದಿ: ಅಂಗನವಾಡಿ ಕಾರ್ಯಕರ್ತೆಯರಿಗೆ ಚುನಾವಣೆ ಕೆಲಸಗಳಿಂದ ವಿನಾಯಿತಿ

ಇಂದು ರಾಜ್ಯದಲ್ಲಿ ಸರ್ಕಾರಿ ಶಾಲೆಗಳು ಸಾವಿರಾರು ಸಂಖ್ಯೆಯಲ್ಲಿ ಮುಚ್ಚಲಾಗುತ್ತಿದೆ. ಸರ್ಕಾರವು ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಲು ವಿಫಲರಾಗಿರುವುದರಿಂದ, ಪೋಷಕರು, ಹತ್ತಾರು ಸಾವಿರ ನೀಡಿ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಪರಿಸ್ಥಿತಿಯನ್ನು ಸರಿಪಡಿಸದಿದ್ದರೆ, ಸರ್ಕಾರಿ ಶಾಲೆಗಳು ಬೆರಳೆಣಿಕೆಯಷ್ಟಾಗುವುದನ್ನು ತುಂಬಾ ಹತ್ತಿರದಲ್ಲೆ ಕಾಣಲಿದ್ದೇವೆ. ಸರ್ಕಾರಿ ಶಾಲೆಗಳನ್ನು ಉತ್ತಮಪಡಿಸುವ ಮತ್ತು ಮಕ್ಕಳನ್ನು ಆಕರ್ಷಿಸಲು ತುರ್ತು ಕ್ರಮ ಕೈಗೊಳ್ಳಬೇಕಾಗಿದೆ.

ರಾಜ್ಯದಲ್ಲಿ ಆರೋಗ್ಯ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದ್ದು, ಬಡವರು ತಮ್ಮ ಬಹುಪಾಲು ದುಡಿಮೆಯನ್ನು ಖಾಸಗಿ ಆಸ್ಪತ್ರೆಗಳಿಗೆ ವೆಚ್ಚ ಮಾಡಬೇಕಾಗಿದೆ ಮತ್ತು ಅವರ ದುಡಿಮೆ ಸಾಲದೆ ಸಾಲ ಮಾಡಬೇಕಾದ ಸ್ಥಿತಿಯಿದ್ದು, ಹಲವಾರು ಜಿಲ್ಲೆಗಳಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸುವ ಬಗ್ಗೆ ಇನ್ನು ಕ್ರಮ ವಹಿಸಲಾಗಿಲ್ಲ.

ಸರ್ಕಾರದಲ್ಲಿ ಅಂದಾಜು 3 ಲಕ್ಷ ಹುದ್ದೆಗಳು ಖಾಲಿಯಿದ್ದು, ಇವನ್ನು ಭರ್ತಿ ಮಾಡಲು ಸರ್ಕಾರವು ಯಾವುದೇ ಕ್ರಮ ವಹಿಸುತ್ತಿಲ. ಇದರಿಂದ ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ದೊಡ್ಡದಾಗಿದ್ದು, ಗುತ್ತಿಗೆ ಆಧಾರದ ಮೇಲೆ ನೇಮಕಾತಿಗಳನ್ನು ಮಾಡಿಕೊಂಡು ಅವರನ್ನು ಜೀತದಾಳುಗಳಂತೆ ನಡೆಸಿಕೊಳ್ಳಲಾಗುತ್ತಿದೆ. ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವ ಅಗತ್ಯವಿದೆ ಹಾಗೆಯೆ KPSC ಸೇರಿದಂತೆ ಎಲ್ಲಾ ಸರ್ಕಾರಿ ನೇಮಕಾತಿ ಸಂಸ್ಥೆಗಳಲ್ಲಿ ಪಾರದರ್ಶಕತೆ ತರುವ ವಿಚಾರ ಮತ್ತು ನಿರುದ್ಯೋಗ ಭತ್ಯೆ ನೀಡುವ ಗ್ಯಾರಂಟಿ ಜಾರಿ ಮಾಡದೆ ವಿಳಂಬ ದೋರಣೆ ಅನುಸರಿಸಲಾಗುತ್ತಿದೆ.
ರಾಜ್ಯದ ನೀರಾವರಿ ಯೋಜನೆಗಳು ಕುಂಟುತ್ತಾ ಸಾಗಿದ್ದು, ಸಂಪನ್ಮೂಲಗಳ ಕೊರತೆ, ದುರಾಡಳಿತ, ಅಕ್ರಮಗಳಿಂದ ಯೋಜನೆಗಳು ಕುಂಟುತ್ತಾ ಸಾಗಿವೆ. ರಾಜ್ಯದ ಪಾಲಿನ ನೀರನ್ನು ಸದ್ಭಳಕೆ ಮಾಡಿಕೊಳ್ಳುವಲ್ಲಿ ನಿರಂತರವಾಗಿ ವಿಫಲವಾಗಿದ್ದು, ನೀರಾವರಿಗಾಗಿ ಕಾದಿರುವ ಲಕ್ಷಾಂತರ ರೈತರಿಗೆ ಈ ಯೋಜನೆಗಳು ಮರೀಚಿಕೆಯಾಗಿವೆ.

ಆಶಾ ಕಾರ್ಯಕರ್ತೆಯರ ಗೌರವಧನವನ್ನು 10 ಸಾವಿರ ಮಾಡಲಾಗುವುದು ಎಂದು ಸರ್ಕಾರ ಭರವಸೆ ನೀಡಿತ್ತು, ಆದರೆ ಈ ಬಗ್ಗೆ ಕ್ರಮ ವಹಿಸಿಲ್ಲ, ಇದರಿಂದ ಅವರು ತಮ್ಮ ಹಕ್ಕುಗಳಿಗಾಗಿ ಪದೇ ಪದೇ ಧರಣಿ ಕೂರುವ ಸ್ಥಿತಿ ನಿರ್ಮಾಣವಾಗುತ್ತಿದೆ, ಇದು ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಮೇಲೆ ದುಷ್ಪರಿಣಾಮ ಬೀರುತ್ತಿದೆ. ರಾಜ್ಯದ ದಲಿತ ವರ್ಗದ ಜನರಿಗೆ ಒಳ ಮೀಸಲಾತಿ ಕಲ್ಪಿಸಲು ಸರ್ಕಾರ ಹಿಂದೇಟು ಹಾಕುತ್ತಿರುವಂತೆ ಕಂಡು ಬಂದಿದ್ದು, ಈ ಬಗ್ಗೆ ತಕ್ಷಣವೇ ಕ್ರಮ ಕೈಗೊಂಡು, ಸಚಿವ ಸಂಪುಟದಲ್ಲಿ ತೀರ್ಮಾನಿಸಿ, ಒಳ ಮೀಸಲಾತಿಯನ್ನು ಜಾರಿ ಮಾಡಬೇಕಾಗಿದೆ.
ರಾಜ್ಯದಲ್ಲಿ ಹಿಂದಿ ಹೇರಿಕೆಯಿಂದ ಕನ್ನಡದ ಪರಿಸ್ಥಿತಿ ಶೋಚನೀಯವಾಗುತ್ತಿದೆ. ಬ್ಯಾಂಕ್ ಹಾಗು ಒಕ್ಕೂಟ ಸರ್ಕಾರದ ಸರ್ಕಾರಿ ಹುದ್ದೆಗಳಲ್ಲಿ ಹೊರ ರಾಜ್ಯದ ಜನರಿಗೆ ಆದ್ಯತೆ ನೀಡಲಾಗುತ್ತಿದ್ದು, ಸ್ಥಳೀಯ ಜನರು ಉದ್ಯೋಗ ವಂಚಿತರಾಗುತ್ತಿದ್ದಾರೆ.

ವಿಧಾನ ಮಂಡಲದ ಅಧಿವೇಶನದಲ್ಲಿ, ಶಾಸಕರ ಭಾಗವಹಿಸುವಿಕೆ ಬಹಳ ಕಡಿಮೆಯಾಗಿದ್ದು, ಜನಪ್ರತಿನಿಧಿಗಳ ಮೂಲ ಕರ್ತವ್ಯವಾದ ನೀತಿ ರೂಪಣೆಯಲ್ಲಿನ ನಿರಾಸಕ್ತಿ ಬಹಳ ಕಳವಳಕಾರಿ ವಿಚಾರವಾಗಿದೆ. ಮೇಲಿನ ಹಾಗೂ ಇತರೆ ಗಂಭೀರ ವಿಷಯಗಳ ಬಗ್ಗೆ ಚರ್ಚಿಸದೆ, ಕಾಲ ಹರಣ ಮಾಡಲಾಗುತ್ತಿದೆ. ಇವರಿಗೆ ಪ್ರತಿ ತಿಂಗಳು ಲಕ್ಷಾಂತರ ಹಣವನ್ನು ಸಂಬಳ, ಭತ್ಯೆ ಹಾಗೂ ಸವಲತ್ತುಗಳನ್ನು ನೀಡಲಾಗುತ್ತಿದೆ, ಆದರೆ ತಮ್ಮ ಕರ್ತವ್ಯದ ಬಗ್ಗೆ ಕಿಂಚಿತ್ತೂ ಅರಿವಿಲ್ಲದಂತೆ ನಡೆದುಕೊಳ್ಳುತ್ತಿದ್ದಾರೆ. ಕೇವಲ ರಾಜಕೀಯ ವಿಚಾರಗಳನ್ನು, ಒಬ್ಬರ ಮೇಲೆ ಮತ್ತೊಬ್ಬರು ಕೆಸರೆರಚಲು, ಅವರ ಹಕ್ಕಿಗೆ ಚ್ಯುತಿಯಾಗಿದೆ ಎಂದು ಚರ್ಚೆ ಮಾಡುವುದು, ಗಲಾಟೆ ಮಾಡುವುದು ಮಾಡಲಾಗುತ್ತಿದೆ. ಆದರೆ ಜನರ ತೆರಿಗೆಯಲ್ಲಿ ಇವರೆಲ್ಲರಿಗೂ ಸವಲತ್ತುಗಳನ್ನು ಒದಗಿಸಿ, ಜನರ ಹಕ್ಕುಗಳಿಗೆ ಆಗುತ್ತಿರುವ ಚ್ಯುತ್ತಿಯ ಬಗ್ಗೆ ಇವರ್ಯಾರಿಗೂ ಗಮನವೇ ಇಲ್ಲದಂತೆ ವರ್ತಿಸುತ್ತಿದ್ದಾರೆ, ಮತ್ತು ಜನರ ವಿಶ್ವಾಸಕ್ಕೆ ದ್ರೋಹ ಬಗೆಯುತ್ತಿದ್ದಾರೆ. ಆದ್ದರಿಂದ ಜನರೂ ಕೂಡ ತಮಗೆ ಮತ್ತು ನಾಡಿಗೆ ಅಗತ್ಯವಿರುವ ವಿಚಾರಗಳಿಗೆ ಪ್ರಾಮುಖ್ಯತೆ ನೀಡಿ ಚರ್ಚೆ ನಡೆಸಬೇಕೆಂದು ಮತ್ತು ಅಧಿವೇಶನದಲ್ಲಿ ಸಂಪೂರ್ಣವಾಗಿ ಭಾಗವಹಿಸಬೇಕೆಂದು ಅವರ ಕ್ಷೇತ್ರದ ಶಾಸಕರನ್ನು ಆಗ್ರಹಿಸಬೇಕು ಎಂದು ಈ ಮೂಲಕ ಮನವಿ ಮಾಡುತ್ತೇವೆ ಎಂದು ತಿಳಿಸಿದರು.

ಈ ಪತ್ರಿಕಾಗೋಷ್ಠಿಯಲ್ಲಿ ಪಕ್ಷದ  ರಾಜ್ಯ ಜಂಟಿ ಕಾರ್ಯದರ್ಶಿ ಎಲ್. ಜೀವನ್ ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿ ರಘುನಂದನ ಉಪಸ್ಥಿತರಿದ್ದರು.

ಇದನ್ನೂ ನೋಡಿ: ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ | ವಿಶ್ಲೇಷಣೆ – ಅಹಮದ್ ಹಗರೆ Janashakthi Media

Donate Janashakthi Media

Leave a Reply

Your email address will not be published. Required fields are marked *