ಸಿಂದಗಿ| ಖಾಸಗಿ ಶಿಕ್ಷಣ ಸಂಸ್ಥೆಗಳ ಕಳ್ಳಾಟ : ಪ್ರಕರಣ ದಾಖಲಿಸಿದ ಆರ್‌ಟಿಓ

ಸಿಂದಗಿ: ಪಟ್ಟಣ ಸೇರಿದಂತೆ ತಾಲೂಕಿನಲ್ಲಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ಕಳ್ಳಾಟ ಜೋರಾಗಿದ್ದೂ, ಖಾಸಗಿ ಶಿಕ್ಷಣ ಸಂಸ್ಥೆಗಳು ಹೊಂದಿರುವ ಶಾಲಾ ವಾಹನಗಳಿಗೆ ಇನ್ಸೂರೆನ್ಸ್ ಪಾವತಿಸದೆ ಹಾಗೇ ವಾಹನ ನಡೆಸುತ್ತಿರುವುದೂ  ಬೆಳಕಿಗೆ ಬಂದಿದೆ.

ಒಂದು ವರ್ಷ, ಆರು ತಿಂಗಳು ಹೀಗೆ ಒಂದೊಂದು ಶಾಲೆಯದ್ದು ಒಂದೊಂದು ಕಥೆಯಿದೆ. ಮಂಗಳವಾರ ಆರ್‌ಟಿಓ (RTO) ಅಧಿಕಾರಿಗಳು ಪಟ್ಟಣದಲ್ಲಿನ ಪ್ರತಿಷ್ಠಿತ ಸುಮಾರು ಮೂರ್ನಾಲ್ಕು ಶಿಕ್ಷಣ ಸಂಸ್ಥೆಗಳ ವಾಹನಗಳನ್ನು ಹಿಡಿದು ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಕಿರುಕುಳ: ನಾವು ಸುಗ್ರೀವಾಜ್ಞೆ ತರಲು ನಿರ್ಧರಿಸಿದ್ದೇವೆ – ಡಾ. ಜಿ ಪರಮೇಶ್ವರ್

ಇನ್ಸೂರೆನ್ಸ್, ಎಫ್ ಸಿ ಸೇರಿದಂತೆ ಹಲವು ಕಾರಣಗಳಿಗೆ ವಾಹನಗಳನ್ನು ಹಿಡಿದು ಪ್ರಕರಣ ದಾಖಲಿಸಿದ್ದು, ದಂಡ ಪಾವತಿಸಿದ ಬಳಿಕ ಮರಳಿ ಪಡೆಯಿರಿ ಎಂದು ಸಿಂದಗಿ ಪೊಲೀಸ್ ಠಾಣೆಯಲ್ಲಿ ವಾಹನಗಳನ್ನು ನಿಲ್ಲಿಸಲಾಗಿದೆ. ಒಂದೆರಡು ಶಾಲೆಯವರು ದಂಡ ಪಾವತಿಸಿ ವಾಹನಗಳನ್ನು ಪಡೆದಿರೆ, ಇನ್ನು ಎರಡು ವಾಹನಗಳು ಪೊಲೀಸ್ ಠಾಣೆ ಆವರಣದಲ್ಲಿಯೇ ನಿಂತಿವೆ.

ಸಿಂದಗಿಯಲ್ಲಿ ಮೊದಲೇ ಅತಿ ವೇಗವಾಗಿ ವಾಹನಗಳನ್ನು ಚಲಾಯಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಇದರಿಂದಾಗಿ ಸಣ್ಣಪುಟ್ಟ ಅಪಘಾತ ಪ್ರಕರಣಗಳು ಸಹ ನಡೆದಿವೆ. ಬಸ್ಸಿನಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳುವುದು, ಅಸುರಕ್ಷಿತ ವಾಹನ ಚಾಲನೆ, ರಾಂಗ್ ರೂಟ್ ನಲ್ಲಿ ವಾಹನ ಚಲಾಯಿಸುವುದು ಸೇರಿದಂತೆ ಹಲವು ದೂರುಗಳು ಕೇಳಿ ಬರುತ್ತಲೇ ಇವೆ.

ಇದೀಗ ಇನ್ಸೂರೆನ್ಸ್ ಪಾವತಿಸದೆ ಗಾಡಿಗಳನ್ನು ಓಡಿಸುತ್ತಿರುವುದು ಬೆಳಕಿಗೆ ಬಂದಿದೆ. ಮಕ್ಕಳ ಸುರಕ್ಷತೆ ವಹಿಸಬೇಕಾದ ಶಿಕ್ಷಣ ಸಂಸ್ಥೆಗಳು ನಿಯಮಗಳನ್ನು ಮೀರಿ ನಡೆದುಕೊಳ್ಳುತ್ತಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಂಬಂಧಪಟ್ಟ ಇಲಾಖೆಯವರು ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂಬ ಆಗ್ರಹ ಕೇಳಿ ಬಂದಿದೆ.

ಇದನ್ನೂ ನೋಡಿ: ಗೋಷ್ಠಿ -1 | ಗಣರಾಜ್ಯ ಭಾರತ @75 – ಅಸ್ಥಿರಗೊಳ್ಳುತ್ತಿರುವ ಪ್ರಜಾಪ್ರಭುತ್ವ – ಜನರ ಕರ್ತವ್ಯ | ಡಾ. ಚಂದ್ರ ಪೂಜಾರಿ

Donate Janashakthi Media

Leave a Reply

Your email address will not be published. Required fields are marked *