ಟಿಕೆಟ್ ದರ ಏರಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ ವೇಳೆ ಏಕವಚನದಲ್ಲಿ ಕೆಟ್ಟ ಪದಗಳಿಂದ ಪೊಲೀಸ್‌ ಅಧಿಕಾರಿಯನ್ನು ನಿಂಧಿಸಿದ ಆರ್‌ ಆಶೋಕ್

ಬೆಂಗಳೂರು: ಈಗಾಗಲೇ ಬೆಲೆ ಏರಿಕೆ ಇಂದ ಜನ ತತ್ತರಿಸುತ್ತಿರುವಾಗ ರಾಜ್ಯದಲ್ಲಿ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಸೇರಿ ಎಲ್ಲಾ ರೀತಿಯ ಸಾರಿಗೆ ಬಸ್‌ಗಳ ಟಿಕೆಟ್ ದರವನ್ನು ಶೇ 15 ರಷ್ಟು ಹೆಚ್ಚಳ ಮಾಡಿದೆ. ಇದರ ಬೆನ್ನಲ್ಲೆ ಜನ ಸಾಮಾನ್ಯರು ಸರ್ಕಾರದ ನಡೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬಿಜೆಪಿ 

ವಿಪಕ್ಷ ಬಿಜೆಪಿ ಕೂಡ ಸರ್ಕಾರದ ಬೆಲೆ ಹೆಚ್ಚಳದ ಕ್ರಮವನ್ನು ತೀವ್ರವಾಗಿ ಖಂಡಿಸುತ್ತಿದ್ದು, ಮೆಜಿಸ್ಟಿಕ್ ಬಸ್ ನಿಲ್ದಾಣದ ಬಳಿ ಬಿಜೆಪಿ ನಾಯಕರು ಪ್ರತಿಭಟನೆಗೆ ಮುಂದಾಗಿದ್ದರು. ಈ ಸಂದರ್ಭದಲ್ಲಿ ಸರ್ಕಾರದ ಬೆಲೆ ಏರಿಕೆ ವಿರುದ್ಧ ವಿರೋಧ ಪಕ್ಷದ ನಾಯಕರು ಕಿಡಿ ಕಾರಿದ್ದಾರೆ.

ಈ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ್‌ ಅವರು, ಪೊಲೀಸ್ ಅಧಿಕಾರಿಗಳ ಮೇಲೆ ಗರಂ ಆಗಿರುವ ಘಟನೆ ನಡೆದಿದೆ. ಮಾತ್ರವಲ್ಲ ಏಕವಚನದಲ್ಲಿ ಕೆಟ್ಟ ಪದಗಳ ಮೂಲಕ ನಿಂದಿಸುವ ಮೂಲಕ ವಿವಾದ ಹುಟ್ಟು ಹಾಕಿದ್ದಾರೆ.

ಮೆಜಿಸ್ಟಿಕ್‌ನಲ್ಲಿ ಬಸ್‌ ಬೆಲೆ ಏರಿಕೆ ಖಂಡಿಸಿ ನಡೆಯುತ್ತಿದ್ದ ಪ್ರತಿಭಟನೆ ಸಂದರ್ಭದಲ್ಲಿ ಪ್ರತಿಪಕ್ಷ ನಾಯಕ ಆರ್ ಅಶೋಕ್ ತಾಳ್ಮೆ ಕಳೆದುಕೊಂಡವರಂತೆ ವರ್ತಿಸಿ ಯಡವಟ್ಟು ಮಾಡಿಕೊಂಡಿದ್ದಾರೆ. ಪ್ರತಿಭಟನೆ ತಡೆಯಲು ಬಂದ ಅಧಿಕಾರಿಗಳಿಗೆ ಬೈದು ಇಲ್ಲದ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

ಇದನ್ನೂ ಓದಿ : ಪ್ರಿಯಾಂಕ ಖರ್ಗೆ ರಾಜೀನಾಮೆ: ಛಲವಾದಿ ನಾರಾಯಣಸ್ವಾಮಿ ವಿರುದ್ಧ ರಮೇಶ್ ಬಾಬು ತಿರುಗೇಟು

ಪ್ರತಿಭಟನೆ ಸಂದರ್ಭದಲ್ಲಿ ತಡೆಯಲು ಬಂದ ಪೊಲೀಸ್‌ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಆರ್.ಅಶೋಕ್, ನನ್ನ ತಳ್ಳೋದು ಮಾಡಿದೆ ಹುಷಾರ್, ಏಯ್ ಬರ್ಕೊಡೋ, ಏಯ್ ಹೂಡಿತಿಯಾ ಹೂಡಿ, ಏಯ್ ನಾಟಕ ಆಡ್ಯಾ ಇದ್ಯಾ, ಏಯ್ ನಿನ್…. ಚಪ್ಪಲಿಲಿ ಹೊಡೀತಿನಿ. ಅದನ್ನೇ ಬೊಗಳು ಎನ್ನುವ ಮೂಲಕ ಪೊಲೀಸ್ ಅಧಿಕಾರಿಯನ್ನು ಆರ್ ಅಶೋಕ್ ಅವರು ತಳ್ಳಿದ ಘಟನೆಯೂ ಮಡೆಯಿತು. ಆ ಮೂಲಕ ಇಲ್ಲದ ವಿವಾದವನ್ನು ಅಶೋಕ್ ಅವರು ಮೈಮೇಲೆ ಎಳೆದುಕೊಂಡಿದ್ದಾರೆ.

ಇದಕ್ಕೂ ಮೊದಲು ಇತ್ತೀಚೆಗೆ ಸುವರ್ಣ ಸೌಧದಲ್ಲಿ ಪ್ರತಿಭಟನೆ ಸಂದರ್ಭದಲ್ಲಿ ಸಿಟಿ ರವಿ ಬಂಧನದ ವೇಳೆ ಕೂಡ ಬೆಳಗಾವಿಯ ಪೊಲೀಸರಿಗೆ ಅವಾಜ್ ಹಾಕಿ ಆಡಳಿತ ಪಕ್ಷದವರ ಟೀಕೆಗೆ ಆರ್ ಅಶೋಕ್ ಅವರು ಗುರಿಯಾಗಿದ್ದರು.

ಇದೀಗ ಸರ್ಕಾರದ ವಿರುದ್ಧ ಮತ್ತೊಂದು ಹೋರಾಟದಲ್ಲೂ ಅಶೋಕ್ ಕಿರಿಕ್ ಮಾಡಿಕೊಂಡು ಯಡವಟ್ಟು ಮಾಡಿಕೊಂಡಿದ್ದಾರೆ. ಸರ್ಕಾರದ ಮೇಲಿನ ಸಿಟ್ಟನ್ನು ಪೊಲೀಸರ ಮೇಲೆ ತೀರಿಸಿಕೊಂಡು ಇಲ್ಲದ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

ಇನ್ನೂ ಪ್ರತಿಭಟನೆ ಸಂದರ್ಭದಲ್ಲಿ ಯುವತಿಯೊಬ್ಬಳಿಗೆ ಹೂ ಕೊಡಲು ಹೋಗಿ, ಕೊನೆಗೆ ಆ ಹುಡುಗಿ ಹೂ ನಿರಾಕರಿಸಿದಾಗ ತಾವೇ ಮುಜಗರ ಅನುಭವಿಸಿದ ಘಟನೆ ಕೂಡ ನಡೆದಿದೆ. ಸದ್ಯ ವಿಪಕ್ಷ ನಾಯಕ ಆರ್ ಅಶೋಕ್ ಅವರ ಈ ರೀತಿಯ ವರ್ತನೆಯ ವಿರುದ್ಧ ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿದ್ದು, ಕಾಂಗ್ರೆಸ್ ಅಶೋಕ್ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದೆ.

ಇದನ್ನೂ ನೋಡಿ : ಎಡ-ಪ್ರಜಾಸತ್ತಾತ್ಮಕ ಪರ್ಯಾಯ ರಾಜಕೀಯ ರಂಗವನ್ನು ರೂಪಿಸಲು ಸಿಪಿಐ(ಎಂ) ರಾಜ್ಯ ಸಮ್ಮೇಳನ ನಿರ್ಧಾರ Janashakthi Media

Donate Janashakthi Media

Leave a Reply

Your email address will not be published. Required fields are marked *