- ಕಾಂಗ್ರೆಸ್ ನಾಯಕ ಸಿಧು ಮೂಸೆವಾಲಾ ಹತ್ಯೆ
- ಎರೆಡು ಗ್ಯಾಂಗ್‌ಗಳ ವೈಷ್ಯಮ್ಯದಿಂದ ಗುಂಡಿಕ್ಕಿ ಹತ್ಯೆ
ಚಂಡೀಗಢ: ಎರಡು ಗ್ಯಾಂಗ್‌ಗಳ ವೈಷಮ್ಯದಿಂದ ಕಾಂಗ್ರೆಸ್ ನಾಯಕ ಹಾಗೂ ಗಾಯಕ ಸಿಧು ಮೂಸೆವಾಲಾ ಹತ್ಯೆ ನಡೆದಿದೆ ಎಂದು ಪೋಲಿಸ್ ಮಹಾನಿರ್ದೇಶಕ (ಡಿಜಿಪಿ) ವಿ.ಕೆ. ಭಾವರಾ ಹೇಳಿದ್ದಾರೆ.
ʼಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಮತ್ತು ಲಕ್ಕಿ ಪಟಿಯಾಲಾ ಗ್ಯಾಂಗ್ ನಡುವೆ ವೈಷಮ್ಯವಿತ್ತು. ಈ ಕಾರಣ ವಿಕ್ಕಿ ವಿಧುಖೇರಾ ಹತ್ಯೆಗೆ ಪ್ರತೀಕಾರವಾಗಿ ಸಿಧು ಮೂಸೆವಾಲಾ ಹತ್ಯೆ ಮಾಡಿರಬಹುದು ಎಂದು ಡಿಜಿಪಿ ವಿ.ಕೆ.ಭಾವರಾ ಮಾಹಿತಿ ನೀಡಿದ್ದಾರೆ.
ಮೂಸೆವಾಲಾ ಹತ್ಯೆ ಹೊಣೆಯನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೊತ್ತುಕೊಂಡಿದೆ. ಜೊತೆಗೆ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನ ಸಹಚರ, ಕೆನಡಾ ಮೂಲದ ಗ್ಯಾಂಗ್ ಸ್ಟರ್ ಗೋಲ್ಡಿ ಬ್ರಾರ್ ಮೂಸೆವಾಲಾ ಹತ್ಯೆಯ ಆರೋಪವನ್ನ ಹೊತ್ತುಕೊಂಡಿದ್ದಾನೆ ಎಂದು ಮಾಧ್ಯಮಗಳಿಗೆ ಭಾವರಾ ತಿಳಿಸಿದ್ದಾರೆ.
In Mansa outside civil hospital where singer Sidhu Moosewala was brought dead pic.twitter.com/w9FV2mwHFo
— Mohammad Ghazali (@ghazalimohammad) May 29, 2022
ಮೂಸೆವಾಲಾಗೆ ನೀಡಿಲಾಗಿದ್ದ ಭದ್ರತೆಯನ್ನು ಶನಿವಾರ ಪಂಜಾಬ್ ಸರ್ಕಾರ ಹಿಂಪಡೆದಿತ್ತು, ಇದಾದ 24 ಗಂಟೆಗಳಲ್ಲಿ ಅವರು ಹತ್ಯೆಯಾಗಿದ್ದು, ಈ ಹತ್ಯೆಗೆ ಸಿಎಂ ಭಗವಂತ್ ಮಾನ್ ಅವರು ಜವಬ್ದಾರರು ಎಂದು ಕಾಂಗ್ರೆಸ್ ಪಕ್ಷದ ನಾಯಕರು ಆಕ್ರೋಶವ್ಯಕ್ತಪಡಿಸಿದ್ದಾರೆ.
“ ಪ್ರಕರಣವನ್ನು ಮತ್ತಷ್ಟು ತನಿಖೆ ಮಾಡಲು ನಾವು ಬಟಿಂಡಾ ಐಜಿ ಅವರ ಮೇಲ್ವಿಚಾರಣರಯಲ್ಲಿ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದ್ದೇವೆ” ಮತ್ತು ಎಸ್‌ಐಟಿ ಸದಸ್ಯರಲ್ಲಿ ಮಾನಸಾ ಎಸ್‌ಪಿ (ತನಿಖೆ) ಧರಂವೀರ್ ಸಿಂಗ್, ಬಟಿಂಡಾ ಡಿಎಸ್ ಪಿ (ತನಿಖೆ ) ವಿಶ್ವಜೀತ್ ಸಿಂಗ್ ಮತ್ತು ಮಾನಸಾ ಸಿಐಎ ಉಸ್ತುವಾರಿ ಪೃಥಿಪಾಲ್ ಸಿಂಗ್ ಸೇರಿದ್ದಾರೆ ಎಂದು, ಡಿಜಿಪಿ ಭಾವರಾ ತಿಳಿಸಿದ್ದಾರೆ.
ಇದು ರಾಜಕೀಯ ಕೊಲೆ – ಸಿಪಿಐಎಂ ಆರೋಪ : ಪಂಜಾಬಿ ಜಾನಪದ ಗಾಯಕ ಸಿಧು ಮೂಸೆವಾಲಾ ಅವರ ಭೀಕರ ಹತ್ಯೆಯ ಕುರಿತು ಪ್ರತಿಕ್ರಿಯಿಸಿರುವ ಸಿಪಿಐ(ಎಂ), ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದು. ಇದು ರಾಜಕೀಯ ಕೊಲೆ ಎಂದು ಆರೋಪಿಸಿದೆ.
ಈ ಕುರಿತು ಪಂಜಾಬ್ ಸಿಪಿಐಎಂ ರಾಜ್ಯ ಕಾರ್ಯದರ್ಶಿ ಕಾಮ್ರೇಡ್ ಸುಖ್ವಿಂದರ್ ಸಿಂಗ್ ಸೆಖೋನ್ ಮಾತನಾಡಿ, ಈ ಹತ್ಯೆಯನ್ನು ನಾವು ಖಂಡಿಸುತ್ತೇವೆ ಮತ್ತು ದುಃಖತಪ್ತ ಕುಟುಂಬದ ಜೊತೆ ನಿಲ್ಲುತ್ತೇವೆ. ಇದೊಂದು ರಾಜಕೀಯ ಕೊಲೆ ಎಂದು ಅವರು ಆರೋಪಿಸಿದರು. ಈ ಹತ್ಯೆಗೆ ಪಂಜಾಬ್ ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ ಮತ್ತು ಬಿಜೆಪಿ ಹೊಣೆಗಾರರು ಎಂದು ಅವರು ಆರೋಪಿಸಿದ್ದಾರೆ. ಅವರಿಗೆ ನೀಡಿದ್ದ ಭದ್ರತೆಯನ್ನು ವಾಪಸ್ಸ ಪಡೆದ ಮರುದಿನ ಅವರನ್ನು ಕೊಲೆ ಮಾಡಲಾಗಿದೆ. ಇದು ಏನನ್ನು ಸೂಚಿಸುತ್ತದೆ?
424 ಮಂದಿಗೆ ಭದ್ರತೆಯನ್ನು ಹಿಂಪಡೆಯಲಾಗಿದೆ ಸರಕಾರದ ಈ ನಿರ್ಧಾರದಿಂದ ಯುವ ನಾಯಕ ಹತ್ಯೆಯಾಗುವಂತಾಯಿತು. ಅವರಿಗೆ ನೀಡಿದ್ದ ಭದ್ರತೆಯನ್ನು ಹಿಂತೆಗೆದುಕೊಳ್ಳುವ ಮಾನದಂಡವನ್ನೂ ಅವರು ಪ್ರಶ್ನಿಸಿದ್ದಾರೆ. ಇದು ಗುಪ್ತಚರ ಸಂಸ್ಥೆಗಳ ವೈಫಲ್ಯ ಎಂದೂ ಅವರು ಬಣ್ಣಿಸಿದ್ದಾರೆ.