- ಪವರ್ ಸ್ಟಾರ್’ ಪುನೀತ್ ರಾಜ್ಕುಮಾರ್ ನಾಯಕರಾಗಿ ನಟಿಸಿದ್ದ ಕೊನೆಯ ಸಿನಿಮಾ ‘ಜೇಮ್ಸ್’
- ‘ಜೇಮ್ಸ್’ ಸಿನಿಮಾ ನೋಡಲು ಥಿಯೇಟರ್ನಲ್ಲಿ ಜನಜಂಗುಳಿ
- ಪುನೀತ್ ನೆನದು ಕಣ್ಣೀರು ಹಾಕಿದ ಅಭಿಮಾನಿಗಳು
ಬೆಂಗಳೂರು : ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಚಿತ್ರ ಜೇಮ್ಸ್ ಬಿಡುಗಡೆಯಾಗಿದೆ. ಸಿನೆಮಾ ನೋಡಲು ಎಲ್ಲಾ ಕಡೆ ಅಭಿಮಾನಿಗಳು ಮುಗಿಬಿದ್ದಿದ್ದಾರೆ. 4 ಸಾವಿರಕ್ಕೂ ಹೆಚ್ಚು ಥಿಯೇಟರ್ಗಳಲ್ಲಿ ಜೇಮ್ಸ್ ಹವಾ ಎಬ್ಬಿಸಿದ್ದು, ಅಪ್ಪು ಹುಟ್ಟು ಹಬ್ಬದ ದಿನವೇ ಜೇಮ್ಸ್ ಸಿನಿಮಾ ರಿಲೀಸ್ ಆಗಿದೆ.
ನಾಡಿನೆಲ್ಲೆಡೆ ಅಭಿಮಾನಿಗಳ ಸಂಭ್ರಮ ಜೋರಾಗಿದ್ದು, ಥಿಯೇಟರ್ಗಳ ಮುಂದೆ ‘ಅಪ್ಪು’ ಕಟೌಟ್ಸ್ ರಾರಾಜಿಸುತ್ತಿವದೆ. ಕಮಲಾನಗರದ ವೀರಭದ್ರೇಶ್ವರ ಥಿಯೇಟರ್ನಲ್ಲಿ ಫ್ಯಾನ್ಸ್ ಸಂಭ್ರಮ ವ್ಯಕ್ತ ಪಡಿಸುತ್ತಿದ್ದು, ಬೆಳ್ಳಂಬೆಳಗ್ಗೆ ಸೇರಿರೋ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದಾರೆ. ಚಂಡೆ ವಾದ್ಯದೊಂದಿಗೆ ಅಭಿಮಾನಿಗಳ ಸಂಭ್ರಮಾಚರಣೆ ಮಾಡಲಾಗುತ್ತಿದೆ.
ವೀರೇಶ್ ಥಿಯೇಟರ್ನಲ್ಲಿ ಜೇಮ್ಸ್ ಸಿನಿಮಾ ಹವಾ ಜೋರಾಗಿದ್ದು, ಅಪ್ಪು ನಟನೆಯ 30 ಸಿನಿಮಾಗಳ ಕಟೌಟ್ ಹಾಕಿ ಸಂಭ್ರಮಿಸಲಾಗುತ್ತಿದೆ. ಅಭಿಮಾನಿಗಳು ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಿಲಾಗಿದೆ.
ಬೆಳಗಿನ ಜಾವ 4.40ಕ್ಕೆ ಹೊಸಪೇಟೆಯ ಬಾಲಾ ಚಿತ್ರಮಂದಿರದಲ್ಲಿ ಜೇಮ್ಸ್ ಚಿತ್ರ ಮೊದಲ ಬಾರಿಗೆ ಪ್ರದರ್ಶನ ಕಂಡ್ತು. ಅಪ್ಪುವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಜನ ಥಿಯೇಟರ್ ಗೆ ಹರಿದು ಬಂದಿದ್ದರು.
5 ಭಾಷೆ, 4 ಸಾವಿರ ಚಿತ್ರಮಂದಿರಗಳಲ್ಲಿ ಬಿಡುಗಡೆ
ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಸೇರಿ ಐದು ಭಾಷೆಗಳಲ್ಲಿ, 4 ಸಾವಿರ ಚಿತ್ರಮಂದಿರಗಳಲ್ಲಿ ‘ಜೇಮ್ಸ್’ ಚಿತ್ರ ಬಿಡುಗಡೆಯಾಗಲಿದೆ.
ಕೆನಡಾ, ಯೂರೋಪ್, ಯುಎಸ್ಎ, ಆಸ್ಪ್ರೇಲಿಯಾ ಸೇರಿ ಹೊರ ದೇಶಗಳ 72 ನಗರಗಳಲ್ಲಿ ‘ಜೇಮ್ಸ್’ ತೆರೆಗೆ ಬರುತ್ತಿದೆ. ಯುಎಸ್ನಲ್ಲಿ 270 ಸ್ಕ್ರೀನ್, ಆಸ್ಪ್ರೇಲಿಯಾದಲ್ಲಿ 150 ಸ್ಕ್ರೀನ್ ಸೇರಿ ಹೊರ ದೇಶಗಳಲ್ಲಿ ಒಟ್ಟು 1000 ಸಾವಿರಕ್ಕೂ ಹೆಚ್ಚು ಸ್ಕ್ರೀನ್ಗಳಲ್ಲಿ ಸಿನಿಮಾ ಪ್ರದರ್ಶನ ಕಾಣುವುದಕ್ಕೆ ಸಜ್ಜಾಗಿದೆ. ವಿಶೇಷ ಎಂದರೆ ಆಸ್ಪ್ರೇಲಿಯಾ ಸೆನ್ಸಾರ್ ಮಂಡಳಿಯಲ್ಲಿ ಸೆನ್ಸಾರ್ ಮಾಡಿಕೊಂಡ ಮೊದಲ ಕನ್ನಡ ಸಿನಿಮಾ ‘ಜೇಮ್ಸ್’.