ನಟ ಪುನೀತ್‌ ಅಭಿಮಾನಿ ಗುಜ್ಜಲ್‌ ಆದರ್ಶ ನಿಧನ

ಹೊಸಪೇಟೆ: ಹುಟ್ಟಿನಿಂದಲೇ ದೇಹದ ಅಂಗಾಂಗಗಳ ವೈಫಲ್ಯದ ಕಾರಣದಿಂದ ವಿಚಿತ್ರವಾದ ಕಾಯಿಲೆಗಳಿಂದ ಬಳಲುತ್ತಿದ್ದ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲ್ಲೂಕು ನಗರದ ತಳವಾರಕೇರಿಯ ನಿವಾಸಿ, ನಟ ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್ ಅಭಿಮಾನಿ ಗುಜ್ಜಲ್‌ ಆದರ್ಶ (17) ನಿಧನರಾಗಿದ್ದಾರೆ.

ಅಪ್ಪು ಸಿನಿಮಾ, ಹಾಡು ಡ್ಯಾನ್ಸ್ ನೋಡಿಯೇ ಬೆಳೆದ ಬಾಲಕ ಪುನೀತ್ ರ ಕಟ್ಟ ಅಭಿಮಾನಿಯಾಗಿದ್ದ. ಅನಾರೋಗ್ಯದಿಂದ ಬಳಲುತ್ತಿದ್ದ ಆದರ್ಶ, ಕಳೆದ ಕೆಲವು ದಿನಗಳಿಂದ ಹುಬ್ಬಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೇ ಮರಣ ಹೊಂದಿದರು. ಆದರ್ಶ ಅವರ ಅಭಿಮಾನಕ್ಕೆ ಮನಸೋತಿದ್ದ ಪುನೀತ್‌, ಹೋದ ವರ್ಷ ಅವರ ಮನೆಗೆ ಭೇಟಿ ನೀಡಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ನೆರವಾಗಿದ್ದರು.

Donate Janashakthi Media

Leave a Reply

Your email address will not be published. Required fields are marked *