ಪಿಯುಸಿ ನಂತರ ಮುಂದೇನು ವಿಷಯದ ಕುರಿತು ವಿದ್ಯಾರ್ಥಿಗಳಿಗೆ ಶಿಬಿರ

ಹಾವೇರಿ: ವಿದ್ಯಾರ್ಥಿಗಳಿಗಾಗಿ ಕಲಿಕಾ ಕೌಶಲ, ಕರಿಯರ್ ಗೈಡೆನ್ಸ್‍ನ ಮಹತ್ವ, ಪ್ಲಾನಿಂಗ್ ಮಾಡುವುದು ಯಾಕೆ? ಮತ್ತು ಹೇಗೆ?, ಅತ್ತ್ಯುತ್ತಮ ಕೋರ್ಸ್ ಆಯ್ಕೆ ಮಾಡುವುದು ಹೇಗೆ?, ಪಿಯುಸಿ ಬಳಿಕ ಲಭ್ಯವಿರುವ ಕೋರ್ಸುಗಳೇನು?, ಸರಕಾರದ ವಿವಿಧ ಇಲಾಖೆಗಳಲ್ಲಿ ವಿದ್ಯಾರ್ಥಿಗಳಿಗಿರುವ ಯೋಜನೆಗಳೇನು? ಹಾಗೂ ಸಿಇಟಿ ಮತ್ತು ನೀಟ್ ಪ್ರವೇಶ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ನಡೆಯಲಿರುವ ಆನ್‍ಲೈನ್ ಕೌನ್ಸಿಲಿಂಗ್‍ನ ವಿಧಾನ/ಹಂತಗಳು ಮತ್ತಿತರ ವಿಷಯಗಳ ಕುರಿತು ಶಿಬಿರ ನಡೆದಿದೆ.

ಮಂಗಳೂರಿನ ದಿ ಕ್ಯಾಂಪಸ್ ಕರಿಯರ್ ಅಕಾಡೆಮಿಯು ಸಾಗರದ ʻಇದಿನಬ್ಬ ಫೌಂಡೇಶನ್’ನ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ‘ಕರ್ನಾಟಕ ಕರಿಯರ್ ಯಾತ್ರಾ’ದ ಶಿಬಿರದಲ್ಲಿ ಹಾವೇರಿ ಜಿಲ್ಲೆಯ ಹಲವು ವಿದ್ಯಾರ್ಥಿಗಳು ಭಾಗವಹಿಸಿದ್ದರು. ‘ಪಿಯುಸಿ ನಂತರ ಮುಂದೇನು’ ಮಾರ್ಗದರ್ಶನ ಶಿಬಿರವನ್ನು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್.ಎಫ್.ಐ) ಸಮಿತಿ ಸಂಘಟಿಸಿತ್ತು.

ಇದನ್ನು ಓದಿ: ನಾಲ್ಕು ವರ್ಷದ ಪದವಿ ವ್ಯಾಸಂಗ ಬೇಡ : ವಿದ್ಯಾರ್ಥಿ ಸಂಘಟನೆಗಳ ಆಗ್ರಹ

ಸಂಪನ್ಮೂಲ ವ್ಯಕ್ತಿಯಾಗಿಗಳಾಗಿ ಮಂಗಳೂರಿನ ಕರಿಯರ್ ಗೈಡೆನ್ಸ್ ಆಂಡ್ ಇನ್‌ಫೋರ್ಮೇಶನ್‌ ಸೆಂಟರ್‍ನ ಸ್ಥಾಪಕ ಅಧ್ಯಕ್ಷರು ಮತ್ತು ಕಳೆದ 18 ವರ್ಷಗಳಿಂದ ಕರಿಯರ್ ಗೈಡ್/ಕರಿಯರ್ ಕೌನ್ಸಿಲರ್ ಆಗಿ ಸೇವೆ ಸಲ್ಲಿಸುತ್ತಿರುವ ಉಮರ್ ಯು.ಹೆಚ್. ಅವರು ಶಿಬಿರವನ್ನು ನಡೆಸಿಕೊಟ್ಟರು.

ಎಸ್ಎಫ್ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಭೋವಿ ಅವರು ಕಳೆದ ಎರಡು ವರ್ಷಗಳಿಂದ ಆಯೋಜಿಸಲಾದ ಶಿಬಿರದಿಂದ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಿದೆ ಶಿಬಿರದ ಮಾರ್ಗದರ್ಶನದಿಂದ ಸರಿಯಾದ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಂಡು ಉತ್ತಮ ಭವಿಷ್ಯ ಮತ್ತು ಗುರಿ ಸಾಧಿಸಲು ಶಿಬಿರ ಪರಿಣಾಮ ಬೀರಿದೆ ಎಂದರು.

ಮಾರ್ಗದರ್ಶನ ಶಿಬಿರದಲ್ಲಿ ವಕೀಲರಾದ ಅಣ್ಣಪ್ಪ ಚಿಕ್ಕಣ್ಣನವರ, ಶಿಕ್ಷಕರಾದ ಪವನ ಕೂಳೆನೂರ, ಎಸ್ಎಫ್ಐ ಮುಖಂಡರಾದ ಬಿರೇಶ ನೆಟಗಲ್ಲಣ್ಣನವರ, ಹೊನ್ನಪ್ಪ ಕುದುರಿಹಾಳ, ದಿನೇಶ್ ಕಳಸೂರ, ಅರುಣ್ ಆರೇರ್, ಚನ್ನಬಸವ ಎಚ್, ಚೈತ್ರ ಬಡ್ಡಿ, ವಿದ್ಯಾ ಪಿ ಎಚ್,ಅನಿತಾ ಬಿ ಆರ್, ಬಿಂದು ಕಿತ್ತೂರ, ಅಕ್ಷತಾ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಭಾಗವಹಿಸಿದರು.

Donate Janashakthi Media

Leave a Reply

Your email address will not be published. Required fields are marked *