ಅಳವಂಡಿ: ಕಳಪೆ ಮಟ್ಟದ ಜೋಳವನ್ನು ಗ್ರಾಮದ ಸಿದ್ದೇಶ್ವರ ಮಠದ ಹತ್ತಿರ ಇರುವ ನ್ಯಾಯಬೆಲೆ ಅಂಗಡಿಯಲ್ಲಿ ವಿತರಿಸಲಾಗುತ್ತಿದೆ. ಜೋಳದಲ್ಲಿ ಕಸ, ಕಡ್ಡಿ ಮತ್ತು ಹೊಟ್ಟು ಇದ್ದು, ಇದರಿಂದ ಆರೋಗ್ಯ ಸಮಸ್ಯೆ ಉಂಟಾಗುವ ಸಾಧ್ಯತೆ ಎದುರಾಗಿದೆ.
ಅಳವಂಡಿ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಜೋಳದ ಚೀಲದಲ್ಲಿ ಬರೀ ಕಸ, ಹುಳು ಮಿಶ್ರಿತ ದುರ್ವಾಸನೆಯಿಂದ ಜೋಳ ಕೂಡಿದೆ. ತಿನ್ನಲು ಯೋಗ್ಯ ಇಲ್ಲದ ಕಳಪೆ ಮಟ್ಟದ ಜೋಳ ವಿತರಣೆ ಮಾಡಲಾಗುತ್ತಿದೆ. ಕಳಪೆ ಜೋಳ ವಿತರಣೆ ವಿರುದ್ಧ ಇಲ್ಲಿನ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರ ನೀಡುವ ಪಡಿತರ ಜೋಳವು ಇಷ್ಟು ಕಳಪೆದಿಂದ ಕೂಡಿರುವುದು ಎಷ್ಟರ ಮಟ್ಟಿಗೆ ಸರಿಯಾಗಿದೆ. ಈ ಜೋಳವನ್ನು ಉಪಯೋಗಿಸಿದರೇ ಆರೋಗ್ಯದಲ್ಲಿ ಏರುಪೇರಾದರೆ ಯಾರು ಗತಿ? ಎಂದು ಸಾರ್ವಜನಿಕರು ಪ್ರಶ್ನಿಸಿದರು.
ಇದನ್ನೂ ಓದಿ: ನಂಜನಗೂಡು| ಬಸ್ ನಿಂದ ತಲೆ ಹೊರಹಾಕಿದ ಮಹಿಳೆ; ಟಿಪ್ಪರ್ ಓವರ್ ಟೇಕ್ ವೇಳೆ ರುಂಡ ಕಟ್!
ಹೊಟ್ಟು, ಹುಳು ಮಿಶ್ರಿತ ಜೋಳ ವಿತರಣೆ ಕೂಡಲೇ ನಿಲ್ಲಿಸಬೇಕು ಎಂದು ಜನ ಆಗ್ರಹಿಸಿದ್ದಾರೆ. ಸರ್ಕಾರದಿಂದ ಪೂರೈಕೆಯಾಗುವುದೇ ಇಂತಹ ಜೋಳ, ಇವುಗಳ ಕೊನೆಯ ಲಾಟ್ ಆಗಿದ್ದು ಇರುವುದೇ ಹೀಗೆ, ಇಂತಹ ಜೋಳಗಳನ್ನು ಜನರಿಗೆ ಕೊಡುವುದೇ ಅನಿವಾರ್ಯವಾಗಿದೆ ಎಂದು ಪಡಿತರ ಮಾರಾಟಗಾರ ಅಸಹಾಯಕ ಮಾತನ್ನು ವ್ಯಕ್ತಪಡಿಸಿದರು.
ಇನ್ನಾದರೂ ಆಹಾರ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಂಡು ಎಷ್ಟು ಪ್ರಮಾಣದಲ್ಲಿ ಕಳಪೆ ಜೋಳ ವಿತರಣೆ ಆಗಿದೆಯೇ ಅವೆಲ್ಲವನ್ನೂ ವಾಪಸ್ ಪಡೆದು ಗುಣಮಟ್ಟದ ಜೋಳ ವಿತರಣೆ ಮಾಡಬೇಕು ಎಂಬ ಆಗ್ರಹ ಸಾರ್ವಜನಿಕರಿಂದ ಕೇಳಿಬಂದಿದೆ.
ಇದನ್ನೂ ನೋಡಿ: ಗೋಷ್ಠಿ -2 | ಗಣರಾಜ್ಯ ಭಾರತ @75 : ದುಡಿಯುವ ಜನತೆಯ ಹಕ್ಕುಗಳು – ಸಂವಿಧಾನದ ಆಶಯ | ಕೆ.ಎನ್. ಉಮೇಶ್