ಬೆಳಗಾವಿ | ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಅಧಿವೇಶನದಲ್ಲಿ ಚರ್ಚೆಗೆ ಅವಕಾಶ ಕಲ್ಪಿಸಿ

ಬೆಳಗಾವಿ : ಸರ್ಕಾರಿ ಹಾಗು ಸರ್ಕಾರಿ ಅನುದಾನಿತ ಶಾಲೆಗಳ ಸ್ಥಿತಿಗತಿಯನ್ನು ಸಮಗ್ರವಾಗಿ ಚರ್ಚಿಸಿ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಮುಂದಾಗಲು ಹಾಲಿ ನಡೆಯುತ್ತಿರುವ ಅಧಿವೇಶನದಲ್ಲಿ ಒಂದು ದಿನವನ್ನು ಸಂಪೂರ್ಣವಾಗಿ ಮೀಸಲಿಡಲು ಕೆಲವು ಗೌರವಾನ್ವಿತ ಸದಸ್ಯರು ಮಾನ್ಯ ಸಭಾಧ್ಯಕ್ಷರಲ್ಲಿ ಮನವಿ ಮಾಡಿರುವುದನ್ನು ಶಿಕ್ಷಣದ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯ (ಪಾಫ್ರೆ) ತುಂಬು ಹೃದಯದಿಂದ ಸ್ವಾಗತಿಸುತ್ತದೆ. ಇದು ಇಂದಿನ ತುರ್ತು ಅಗತ್ಯವೆಂದು ಪಾಫ್ರೆ ಭಾವಿಸುತ್ತದೆ ಎಂದು ಶಿಕ್ಷಣ ತಜ್ಙ  ನಿರಂಜನಾರಾಧ್ಯ ವಿ.ಪಿ ಹೇಳಿದರು. ಬೆಳಗಾವಿ

ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳ ಸಬಲೀಕರಣದ ಬಗ್ಗೆ ರಾಜ್ಯದಲ್ಲಿ ಕಳೆದ ಮೂರು ದಶಕಗಳಿಂದ ಮೇಲಿಂದ ಮೇಲೆ ಚರ್ಚೆಗಳು ನಡೆಯುತ್ತಲೇ ಇವೆ. ಇಲ್ಲಿಯವರೆಗೆ ನಡೆದ ಹಲವಾರು ಸಾಹಿತ್ಯ ಸಮ್ಮೆಳನಗಳಲ್ಲಿ ಗಂಭೀರವಾದ ಚರ್ಚೆಗಳು ನಡೆದು ಸರ್ಕಾರಿ ಶಾಲೆಗಳ, ಬಲವರ್ದನೆ ಮತ್ತು ಬೋಧನಾ ಗುಣಮಟ್ಟ ಹೆಚ್ಚಿಸುವ ಕ್ರಮಗಳು ಮತ್ತು ಭಾಷಮಾಧ್ಯಮದ ಬಗ್ಗೆ ಹಲವಾರು ನಿರ್ಣಾಯಗಳನ್ನು ತೆಗೆದುಕೊಂಡಿದೆ. ಅದರಲ್ಲೂ ಮುಖ್ಯವಾಗಿ ಕನ್ನಡ ಶಾಲೆಗಳ ಬಲವರ್ಧನೆ, ಶಿಕ್ಷಣದ ಗುಣಮಟ್ಟಕ್ಕೆ ಹೆಚ್ಚಿನ ಅನುದಾನ, ಸಮಾನ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೊಳಿಸಬೇಕೆಂದು ಹತ್ತು-ಹಲವು ನಿರ್ಣಯಗಳನ್ನು ಅಂಗೀಕರಿಸಲಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಸಹ ಈ ನಿಟ್ಟಿನಲ್ಲಿ ಹಲವು ಮಹತ್ವದ ಪ್ರಯತ್ನಗಳನ್ನು ಮಾಡಿದೆ ಎಂದು ತಿಳಿಸಿದರು. ಬೆಳಗಾವಿ

ಇದನ್ನೂ ಓದಿ : ಬೆಂಗಳೂರಿನಲ್ಲಿ ಸುರಂಗ ರಸ್ತೆ ಯೋಜನೆ ಸಾರಿಗೆ ದಟ್ಟಣೆಗೆ ಉತ್ತರವೇ?

ಈ ಅಂಶಗಳ ಹಿನ್ನೆಲೆಯಲ್ಲಿ, ಈ ಉದ್ದೇಶಿತ ಒಂದು ದಿನದ ಚರ್ಚೆಗೆ ಬುನಾದಿಯಾಗಿ ಮತ್ತು ಉತ್ತಮ ಭೂಮಿಕೆಯಾಗಿ , ಕನ್ನಡ ಅಭಿವೃದ್ಧಿ ಪ್ರಾಧಿಕಾರವು ದಿನಂಕ: 04.09.2017 ರಂದು ಅಂದಿನ ಮುಖ್ಯಮಂತ್ರಿಗಳಾಗಿದ್ದ ಹಾಗೂ ಇಂದಿನ ಮುಖ್ಯಂಮಂತ್ರಿಗಳೂ ಆಗಿರುವ ಸನ್ಮಾನ್ಯ ಸಿದ್ದರಾಮಯ್ಯನವರಿಗೆ ಸಲ್ಲಿಸಿದ್ದ ಸರಕಾರಿ ಶಾಲೆಗಳ ಸಬಲೀಕರಣ ಸಮಿತಿ ವರದಿ-2017ನ್ನು ಬುನಾದಿಯಾಗಿ ಪರಿಗಣಿಸಬೇಕೆಂದು ಪಾಫ್ರೆ ಒತ್ತಾಯಿಸುತ್ತದೆ ಎಂದರು. ಬೆಳಗಾವಿ

ಈ ಮಹತ್ವದ ವರದಿಯಲ್ಲಿ, 21 ಮಹತ್ವದ ಶಿಫಾರಸುಗಳಿದ್ದು ರಾಜ್ಯದಲ್ಲಿ ಶಾಲಾ ಶಿಕ್ಷಣದ ಎಲ್ಲಾ ಮಜಲುಗಳನ್ನು ಸಮಗ್ರವಾಗಿ ಅಧ್ಯಯನ ಮಾಡಿ , ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವ ಮೂಲಕ ಎಲ್ಲಾ ಮಕ್ಕಳಿಗೆ ಸಮಾನ ಗುಣಮಟ್ಟದ ಶಿಕ್ಷಣ ಒದಗಿಸಲು ಸಮಗ್ರವಾದ ಚಿತ್ರಣವನ್ನು ಒದಗಿಸುತ್ತವೆ ಎಂದು ಹೇಳಿದರು. ಬೆಳಗಾವಿ

ಈ ವರದಿಯ ಪ್ರತಿಗಳನ್ನು ಸನ್ಮಾನ್ಯ ಗೌರವಾನ್ವಿತ ಸದಸ್ಯರಿಗೆ ಪೂರ್ವಭಾವಿಯಾಗಿ ಒದಗಿಸಿದರೆ ಚರ್ಚೆಯು ಒಂದು ವಿಷಯದ ಸುತ್ತ ಸಮಗ್ರವಾಗಿ ಮತ್ತು ಅರ್ಥಪೂರ್ಣವಾಗಿ ನಡೆಯಲು ಸಾಧ್ಯವಾಗುತ್ತದೆ. ಈ ಮಹತ್ವದ ಚರ್ಚೆಯಲ್ಲಿ ಹೊರಒಮ್ಮುವ ನಿರ್ಣಾಯಕ ಅಂಶಗಳು ಪಕ್ಷಾತೀತವಾಗಿ ರಾಜ್ಯದಲ್ಲಿ ಬಲಿಷ್ಠ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಲು ನೀಲಿನಕಾಶೆಯನ್ನು ಒದಗಿಸುತ್ತದೆ.

ಇದರ ಜೊತೆಗೆ , ರಾಜ್ಯ ಶಿಕ್ಷಣ ಅಯೋಗವು ಸಲ್ಲಿಸಿರುವ ರಾಜ್ಯ ಶಿಕ್ಷಣ ನೀತಿಯ ಶಿಫಾರಸುಗಳನ್ನು ಈ ವಿಶೇಷ ಚರ್ಚೆಯ ಸಂದರ್ಭದಲ್ಲಿ ಕೈಗೆತ್ತಿಕೊಳ್ಳುವುದು ಸೂಕ್ತವೆಂದು ಪಾಫ್ರೆ ಅಭಿಪ್ರಾಯಪಡುತ್ತದೆ. ಈ ಮೂಲಕ, ಸರಕಾರಿ ಶಾಲೆಗಳ ಸಬಲೀಕರಣ ಸಮಿತಿ ವರದಿ-2017 ಮತ್ತು ರಾಜ್ಯ ಶಿಕ್ಷಣ ನೀತಿ -2025 ರ ಶಿಫಾರಸುಗಳು ರಾಜ್ಯಕ್ಕೆ ಒಂದು ಸಮಗ್ರ ಶಿಕ್ಷಣ ನೀತಿಯನ್ನು ಕೊಡಮಾಡುವ ಮೂಲಕ, ಸಂವಿಧಾನದ ಒಕ್ಕೂಟ ಧರ್ಮದ ಆಶಯದಂತೆ ಸಮವರ್ತಿಪಟ್ಟಿಯಲ್ಲಿರುವ ಶಿಕ್ಷಣದ ವಿಷಯವನ್ನು ರಾಜ್ಯದಲ್ಲಿ ಹೇಗೆ ಸಮರ್ಪಕ ಹಾಗು ಪರಿಣಾಮಕಾರಿಯಾಗಿ ಜಾರಿಗೊಳಿಸಲು ದಾರಿದೀಪವಾಗುತ್ತದೆ. ಇದು ದೇಶದ ಉಳಿದ ರಾಜ್ಯಗಳಿಗೆ ಮಾದರಿಯಾಗುತ್ತದೆ.

ಸಾರ್ವಜನಿಕ ಶಿಕ್ಷಣದ ಬಗ್ಗೆ ಅಪಾರ ಕಾಳಜಿ ಹಾಗು ಬದ್ಧತೆ ಹೊಂದಿರುವ ಮತ್ತು ಈ ಹಿಂದೆ ಅರೋಗ್ಯ ಸಚಿವರಾಗಿದ್ದಾಗ ಸಾರ್ವಜನಿಕ ಅರೋಗ್ಯ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳಿಗೆ ಕಾರಣರಾದ ಹಾಲಿ ಸನ್ಮಾನ್ಯ ಸಭಾಧ್ಯಕ್ಷರು ಇದಕ್ಕೆ ಅವಕಾಶ ಕಲ್ಪಿಸಿಕೊಡಬೇಕೆಂದು ಕರ್ನಾಟಕದ ಜನತೆಯ ಪರವಾಗಿ ಕಳಕಳಿಯಿಂದ ವಿನಂತಿಸುತ್ತೇವೆ.

1. ನಿರಂಜನಾರಾಧ್ಯ ವಿ.ಪಿ , ಸಂಚಾಲಕರು, ಪಾಫ್ರೆ

2. ಬಸವರಾಜ ಗುರಿಕಾರ, ರಾಷ್ಟ್ರೀಯ ಅಧ್ಯಕ್ಷರು , ಎಐಪಿಟಿಎಫ್‌

3. ಎಂ.ಜಯಮ್ಮ, ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರ ಒಕ್ಕೂಟ

4. ಉಮೇಶ್ ದೊಡ್ಡಗಂಗವಾಡಿ, ಅಧ್ಯಕ್ಷರು, ಎಸ್‌ಡಿಎಮ್‌ಸಿಸಿಎಫ

5. ಎಫ್ . ಸಿ .ಚೇಗಾ ರೆಡ್ಡಿ ಹಾಗೂ ಶುಭಂಕರ್‌ ಚಕ್ರವರ್ತಿ , ಬಿಜಿವಿಎಸ್‌

6. ಲೋಕೇಶ್ ತಾಳಿಕಟ್ಟೆ, ಕರ್ನಾಟಕ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಸ್ಥೆ

7. ಮಂಜುನಾಥ್, ಅಖಿಲ ಭಾರತ ವಿದ್ಯಾರ್ಥಿ ಒಕ್ಕೂಟ

8. ಲೇಖ, ಅಖಿಲ ಭಾರತ ವಿದ್ಯಾರ್ಥಿ ಸಂಘ
9. ಮೊಹಮ್ಮದ್‌ ಪೀರ್‌ ಲಟಗೇರಿ, ಎಸ್‌ ಐ ಒ

10. ಬಿ.ಎನ್. ಯೋಗಾನಂದ, ರಾಜ್ಯ ಪಾಲಕ -ಪೋಷಕರ ಸಂಘ

11. ಕುಮಾರ್‌ ಶೃಂಗೇರಿ, ಸಂಶೋಧಕರು, ಸಿಸಿಎಲ್- ಎನ್‌ ಎಲ್‌ ಎಸ್‌ ಐ ಯು

12. ಗುರುಮೂರ್ತಿ ಕಾಶಿನಾಥನ್, ಕ್ರಿಟಿಕಲ್ ಎಡ್‌ಟೆಕ್ ಇಂಡಿಯಾ

13. ಜಿ. ರವಿ, ನಾಲ್ಕನೇ ಅಲೆ ಪ್ರತಿಷ್ಠಾನ

ಇದನ್ನೂ ನೋಡಿ : ಸರಕಾರಿ ಶಾಲೆಗಳನ್ನು ಮುಚ್ಚುತ್ತಿರುವ ಸರಕಾರ | ತಳ ಸಮುದಾಯಕ್ಕೆ ಎಸಗುತ್ತಿರುವ ದ್ರೋಹ Janashakthi Media

 

Donate Janashakthi Media

Leave a Reply

Your email address will not be published. Required fields are marked *