ರಾಕೇಶ್ ಟಿಕಾಯಿತ್ ಮೇಲೆ ಹಲ್ಲೆ ಖಂಡಿಸಿ ಮೇ 31ರಂದು ರಾಜ್ಯಾದ್ಯಂತ ಪ್ರತಿಭಟನೆಗೆ ಸಂಯುಕ್ತ ಕರ್ನಾಟಕ ಹೋರಾಟ ಕರೆ

ಬೆಂಗಳೂರು :ಬೆಂಗಳೂರಿನ ಗಾಂಧಿಭವನದಲ್ಲಿ ರೈತ ಮುಖಂಡ ರಾಕೇಶ್‌ ಟಿಕಾಯತ್‌ ಮತ್ತು ಯದುವೀರ್‌ ಸಿಂಗ್‌ ಅವರ ಮೇಲಾದ ಹಲ್ಲೆಯನ್ನು ಖಂಡಿಸಿ ಮೇ 31ರಾಜ್ಯಾದ್ಯಂತ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ಸಂಯುಕ್ತ ಹೋರಾಟಕ್ಕೆ ಕರೆ ನೀಡಲಾಗಿದೆ.

ರಾಜಧಾನಿಯ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೆಳಗ್ಗೆ ನಾಳೆ 11 ಗಂಟೆಗೆ ಪ್ರತಿಭಟನೆಯು ನಡೆಯಲಿದೆ. ಸಂಯುಕ್ತ ಹೋರಾಟ ಕರ್ನಾಟಕದ ಎಲ್ಲಾ ರೈತ, ಕಾರ್ಮಿಕ, ದಲಿತ, ಮಹಿಳೆ, ವಿದ್ಯಾರ್ಥಿ ಯುವಜನ ಸಮಘಟನೆಗಳು ಸೇರಿದಂತೆ ಎಲ್ಲಾ ಸಹಭಾಗಿ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸುವರು.

ಇದು ಕೇವಲ ರಾಕೇಶ್ ಟಿಕಾಯತ್ ಅವರ ಮೇಲೆ ಮಸಿ ಬಳೆದಿರುವುದಲ್ಲ ದೇಶದ ರೈತ ಹೋರಾಟದ ಮೇಲೆಯೇ ಮಸಿ ಬಳೆಯುವ ಷಡ್ಯಂತರವನ್ನು ಬಿಜೆಪಿ ಹೆಣೆಯುತ್ತಿರುವುದು ನಿಚ್ಚಳವಾಗಿ ಗೋಚರಿಸುತ್ತಿದೆ. ಈ ಷಡ್ಯಂತರವನ್ನು ಸಂಯುಕ್ತ ಹೋರಾಟ-ಕರ್ನಾಟಕ ಖಂಡಿಸುತ್ತದೆ. ಈ ಕೃತ್ಯಕ್ಕೆ ಸಂಬಂಧಿಸಿದಂತೆ ಬಿಜೆಪಿ ಕ್ಷಮಾಪಣೆ ಕೇಳಿ ಇಂತಹ ಷಡ್ಯಂತರವನ್ನು ನಿಲ್ಲಿಸಬೇಕೆಂದು ಒತ್ತಾಯಿಸಿ ನಾಳೆಯಿಂದ ರಾಜ್ಯವ್ಯಾಪಿ ಹೋರಾಟಕ್ಕೆ ಕರೆ ನೀಡುತ್ತದೆ.

 

ಕೋಡಿಹಳ್ಳಿ ವಿರುದ್ಧದ ಆರೋಪ ವಿಚಾರಣೆಗೆ ಸಮಿತಿ ರಚನೆ

ಇದೇ ದಿನ, ಕೋಡಿಹಳ್ಳಿ ಚಂದ್ರಶೇಖರ್ ಅವರ ಮೇಲೆ ಬಂದಿರುವ ಆರೋಪದ ಕುರಿತು ಸಂಯುಕ್ತ ಹೋರಾಟ-ಕರ್ನಾಟಕದ ಕೋರ್ ಕಮಿಟಿ ಸಭೆ ನಡೆಯುತ್ತಿತ್ತು. ಆರೋಪವು ಬಹಳ ಗಂಭೀರವಾಗಿದ್ದು ಇದನ್ನು ಸ್ವತಂತ್ರ ಮತ್ತು ಸಮಗ್ರವಾಗಿ ತನಿಖೆ ನಡೆಸಿ ಒಂದು ತೀರ್ಮಾನಕ್ಕೆ ಬರುವುದಾಗಿ ಸಮಿತಿ ನಿರ್ಣಯಿಸಿದೆ. ಅದರ ಭಾಗವಾಗಿ ತ್ರಿಸದಸ್ಯ ಪೀಠವನ್ನು ಸಮಿತಿ ರಚಿಸಿದೆ. ದೆಹಲಿಯ ಸಂಯುಕ್ತ ಕಿಸಾನ್ ಮೋರ್ಚಾದ ನಾಯಕತ್ವದೊಂದಿಗೆ ಚರ್ಚಿಸಲಾಗುವುದು.

ಈ ಬಗ್ಗೆ ಸಮಗ್ರವಾದ ತೀರ್ಮಾನಗಳನ್ನು ತಿಳಿಸಲಾಗುವುದೆಂದು ಸಂಯುಕ್ತ ಹೋರಾಟ ಕರ್ನಾಟಕ ರಾಜ್ಯ ಸಂಯೋಜಕರಾದ ಎಂದು ಬಡಗಲಪುರ ನಾಗೇಂದ್ರ ಹಾಗೂ ಜಿ.ಸಿ. ಬಯ್ಯಾರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ : ರೈತ ನಾಯಕ ರಾಕೇಶ ಟಿಕಾಯತ್ ಮೇಲೆ ಕಪ್ಪು ಮಸಿ ಬಳೆದು ಹಲ್ಲೆ

Donate Janashakthi Media

Leave a Reply

Your email address will not be published. Required fields are marked *