ವಿರೋಧ ಪಕ್ಷಗಳ ಪ್ರತಿಭಟನೆ:ಲೋಕಸಭೆ ಕಲಾಪ ಮಧ್ಯಾಹ್ನ 12ರ ವರೆಗೆ ಮುಂದೂಡಿಕೆ

ನವೆದೆಹಲಿ: ಲೋಕಸಭೆ ಕಲಾಪ ಪ್ರಾರಂಭವಾಗುತ್ತಿದ್ದಂತೆ ವಿರೋಧ ಪಕ್ಷಗಳ ಸಂಸದರು ಪ್ರತಿಭಟನೆ ನಡೆಸಿದ್ದು, ಕಲಾಪವನ್ನು ಮಧ್ಯಾಹ್ನ 12ರ ವರೆಗೆ ಮುಂದೂಡಲಾಗಿದೆ.

ಸೋಮವಾರ ಬಹಿಷ್ಕರಿಸಲಾದ ಕಲಾಪದ ಭಾಗವನ್ನು ಪುನಃ ದಾಖಲಿಸಬೇಕು ಎಂದು ಆಗ್ರಹಿಸಿ ಮಂಗಳವಾರ ಆಗಸ್ಟ್‌-08 ರಂದು ಪಟ್ಟು ಹಿಡಿದವು. ಹೀಗಾಗಿ ಸ್ಪೀಕರ್‌ ಓಂ ಬಿರ್ಲಾ ಅವರು ಕಲಾಪವನ್ನು ಮುಂದೂಡಿದರು.

ಇದನ್ನೂ ಓದಿ:5ನೇ ದಿನವೂ ನಡೆಯದ ಸಂಸತ್‌ ಕಲಾಪ; ಸೋಮವಾರಕ್ಕೆ ಮುಂದೂಡಿಕೆ

ವಿರೋಧ ಪಕ್ಷಗಳ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಗೆ ಇಂದು ಮಧ್ಯಾಹ್ನ 12ಕ್ಕೆ ಸಮಯ ನಿಗದಿಯಾಗಿದೆ. ಸಂಸತ್ತಿನ ಉಭಯ ಸದನಗಳಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಭಾರಿ ಜಟಾಪಟಿ ನಡೆಯಿತು. ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ಬಿಗಿಪಟ್ಟು ಹಿಡಿದಿರುವ ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿವೆ. ಇದರ ಮೇಲಿನ ಚರ್ಚೆ ಮಧ್ಯಾಹ್ನ ಆರಂಭವಾಗಲಿದೆ.

Donate Janashakthi Media

Leave a Reply

Your email address will not be published. Required fields are marked *