ಬೆಂಗಳೂರು: ಬೆಂಗಳೂರಿನ ಸರ್ ಪುಟ್ಟಣ್ಣ ಚೆಟ್ಟಿ ಟೌನ್ ಹಾಲ್ ಎದುರು ಪ್ರತಿಭಟನೆ, ರ‍್ಯಾಲಿ ನಡೆಸಲು ಅನುಮತಿ ನೀಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದು, “ಈ ಬಗ್ಗೆ ನವೆಂಬರ್ 16 ರ ಗುರುವಾರದಂದು ಕರ್ನಾಟಕದ ಅಡ್ವೊಕೇಟ್ ಜನರಲ್ ಅವರೊಂದಿಗೆ ಚರ್ಚಿಸಲಾಗುವುದು” ಎಂದು ಹೇಳಿದ್ದಾರೆ. 2022 ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಮಾತ್ರ ಪ್ರತಿಭಟನೆಗೆ ಅನುಮತಿ ನೀಡಲಾಗುತ್ತಿದ್ದು, ನಗರದ ಉಳಿದ ಕಡೆ ನಿರ್ಬಂಧಿಸಲಾಗಿದೆ.
“ಅಭಿವ್ಯಕ್ತಿ ಸ್ವಾತಂತ್ರ್ಯ ಬಹಳ ಮುಖ್ಯ. ನಾಳೆ ನಾನು ಅಡ್ವೊಕೇಟ್ ಜನರಲ್ ಅವರನ್ನು ಕರೆಸುತ್ತೇನೆ. ಟೌನ್ ಹಾಲ್ ಮುಂದೆ ಪ್ರತಿಭಟನೆ ಮತ್ತು ರ‍್ಯಾಲಿಗಳಿಗೆ ಅನುಮತಿ ನೀಡಲು ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ಪರಿಶೀಲಿಸುತ್ತೇನೆ. ಪ್ರಗತಿಪರ ಚಳುವಳಿಗಳು ಬಹಳ ಮುಖ್ಯವಾಗಿದೆ” ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಇದನ್ನೂ ಓದಿ: ವಿದ್ಯುತ್ ಕಳವು| ಎಚ್.ಡಿ ಕುಮಾರಸ್ವಾಮಿಗೆ ಬೆಸ್ಕಾಂ ಶಾಕ್; 68 ಸಾವಿರ ರೂ. ದಂಡ ಪಾವತಿಸಲು ಸೂಚನೆ!
“ನಾವು ದಾರಿ ತಪ್ಪುತ್ತಿರುವಾಗ ಸರ್ಕಾರವನ್ನು ಎಚ್ಚರಿಸುವುದರಲ್ಲಿ ಈ ಚಳವಳಿಗಳ ಪಾತ್ರ ಮುಖ್ಯವಾಗಿದೆ. ತಪ್ಪು ದಾರಿಯಲ್ಲಿ ಸಾಗುತ್ತಿರುವಾಗ ಸರ್ಕಾರವನ್ನು ಸರಿ ದಾರಿಗೆ ಎಳೆದು ತರದಿದ್ದರೆ, ತಪ್ಪು ದಾರಿಯಲ್ಲಿ ನಡೆಯುವುದು ಮುಂದುವರೆಯುತ್ತದೆ” ಎಂದು ಅವರು ತಿಳಿಸಿದರು.
ಪ್ರಸ್ತುತ ಬೆಂಗಳೂರಿನಲ್ಲಿ ಪ್ರತಿಭಟನೆಗಳನ್ನು ಫ್ರೀಡಂ ಪಾರ್ಕ್‌ಗೆ ಮಾತ್ರ ಸೀಮಿತಗೊಳಿಸಲಾಗಿದೆ. 2022ರ ಜನವರಿ ತಿಂಗಳಲ್ಲಿ ಪೊಲೀಸರು ಈ ನಿಯಮ ಜಾರಿಗೊಳಿಸಲಾಗಿದ್ದಾರೆ. ಟೌನ್ ಹಾಲ್
“ಪ್ರತಿಭಟನೆಗಳು, ಪ್ರದರ್ಶನಗಳು ಮತ್ತು ಪ್ರತಿಭಟನಾ ಮೆರವಣಿಗೆಗಳ ಪರವಾನಗಿ ಮತ್ತು ನಿಯಂತ್ರಣ (ಬೆಂಗಳೂರು ನಗರ)” ಆದೇಶದ ಪ್ರಕಾರ, ಫ್ರೀಡಂ ಪಾರ್ಕ್‌ನ ಹೊರಭಾಗದಲ್ಲಿ ಯಾವುದೇ ಪ್ರತಿಭಟನೆ ಕಾನೂನುಬಾಹಿರವೆಂದು ಪರಿಗಣಿಸಲಾಗುತ್ತದೆ. ಆದರೆ ಈ ಆದೇಶವು ನಾಗರಿಕರ ಪ್ರತಿಭಟನೆಯ ಹಕ್ಕನ್ನು ಕಸಿದುಕೊಳ್ಳುತ್ತದೆ ಎಂದು ಹೋರಾಟಗಾರರು ಆರೋಪಿಸಿದ್ದಾರೆ.
ಇದನ್ನೂ ಓದಿ: ಉಡಾಫೆ ಬಿಡಿ ವಾರದೊಳಗೆ ಬೆಳೆ ಸಮೀಕ್ಷೆ ಮುಗಿಸಿ| ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ತಾಕೀತು
“ಹೋರಾಟದ ಹಕ್ಕಿಗಾಗಿ ಜನಾಂದೋಲನ” ಹೋರಾಟ ಸಮಿತಿಯ ಅಡಿಯಲ್ಲಿ ವಿವಿಧ ಸಂಘಟನೆಗಳು ಈ ಆದೇಶವನ್ನು ಹಿಂಪಡೆಯುವಂತೆ ನಿರಂತರ ಒತ್ತಾಯಿಸುತ್ತಿವೆ. ಕಳೆದ ಜುಲೈನಲ್ಲಿ ಹೋರಾಟ ಸಮಿತಿಯ ನಿಯೋಗವು “ಆದೇಶವು ಪ್ರತಿಭಟನೆಯ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ” ಎಂದು ಹೇಳಿ ತಮ್ಮ ಬೇಡಿಕೆಗಳನ್ನು ಮುಖ್ಯಮಂತ್ರಿಗೆ ಸಲ್ಲಿಸಿತ್ತು.
ಪ್ರತಿಭಟನೆಯು ಮೂಲಭೂತ ಹಕ್ಕಾಗಿದ್ದು, ಈ ಹಕ್ಕನ್ನು ಚಲಾಯಿಸಿದ ಕಾರ್ಮಿಕರು, ರೈತರು, ದಲಿತರು, ಮಹಿಳೆಯರು ಮತ್ತು ಇತರ ತಳಮಟ್ಟದಲ್ಲಿರುವ ಸಮುದಾಯಗಳು ಸೇರಿದಂತೆ ಹಲವಾರು ಜನರ ವಿರುದ್ಧ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನು ವಜಾಗೊಳಿಸಬೇಕೆಂದು “ಹೋರಾಟದ ಹಕ್ಕಿಗಾಗಿ ಜನಾಂದೋಲನ”ವು ಆಗ್ರಹಿಸಿತ್ತು,
ವಿಡಿಯೊ ನೋಡಿ: ಕಾರ್ನಾಡ್ ನೆನಪು : ಕಾರ್ನಾಡ್ ನಾಟಕಗಳಲ್ಲಿ ʻಪೌರಾಣಿಕ ವಸ್ತುʼ – ಡಾ.ಎಚ್, ಎಲ್, ಪುಷ್ಪಾರವರ ಮಾತುಗಳು