ಜಲಿಯನ್ ವಾಲಾಭಾಗ್‍ ಹತ್ಯಾಕಾಂಡಕ್ಕೆ ಪ್ರತಿಕಾರ: ರಾಣಿ ಎಲಿಜಬೆತ್ ಹತ್ಯೆಗೆ ಯತ್ನ

ಲಂಡನ್: 1919ರಲ್ಲಿ 400ಕ್ಕೂ ಹೆಚ್ಚು ಭಾರತದ ಸ್ವಾತಂತ್ರ್ಯ ಹೋರಾಟಗಾರರ ನರಮೇಧಕ್ಕೆ ಕಾರಣವಾದ ಪಂಜಾಬ್‍ನ ಅಮೃತ್‍ಸರದ  ಜಲಿಯನ್‌ ವಾಲಾಬಾಘ್‌ ಹತ್ಯಾಕಾಂಡದ ಪ್ರತೀಕಾರವಾಗಿ ಬ್ರಿಟನ್‌ ರಾಣಿ ಎಲಿಜಬೆತ್‌ (95) ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ರಾಣಿ ಎಲಿಜಬೆತ್ ಅವರನ್ನು ಹತ್ಯೆ ಮಾಡಲು ಯತ್ನಿಸಿದ ಯುವಕನನ್ನು ಸ್ಕಾಟ್‍ಲ್ಯಾಂಡ್ ಯಾರ್ಡ್ ಪೊಲೀಸರು ಬಂಧಿಸಿದ್ದಾರೆ. ಈ ಯುವಕ ತಾನು ಭಾರತೀಯ. ಸಿಖ್ ಮತ್ತು ತನ್ನ ಹೆಸರು ಜಸ್ವಂತ್‍ಸಿಂಗ್ ಬೋಯಲ್ ಎಂದು ಹೇಳಿಕೊಂಡಿದ್ದಾನೆ.

ಪೂರ್ತಿ ಮುಖ ಮರೆಮಾಚಿ ವಿಡಿಯೋ ಪ್ರಸಾರ ಮಾಡಿದ್ದ ವ್ಯಕ್ತಿ ಬ್ರಿಟನ್‌ ರಾಣಿಯನ್ನು ಸಂಹಾರ ಮಾಡಿ ಜಲಿಯನ್‌ ವಾಲಾಬಾಗ್‌ನ ಸೇಡು ತೀರಿಸಿಕೊಳ್ಳುವುದಾಗಿ ಘೋಷಿಸಿದ್ದ. ಜತೆಗೆ ತಾನು ಬ್ರಿಟನ್‌ ರಾಜಮನೆತನದ ರಾಣಿ ಹತ್ಯೆ ಯತ್ನ ಮಾಡಿದೆ. ಇದಕ್ಕಾಗಿ ಕ್ಷಮೆಯಿರಲಿ. ಭಾರತದ ಸ್ವಾತಂತ್ರ್ಯ ಹೋರಾಟಗಾರರನ್ನು ಹತ್ಯೆಗೈದ, ತೇಜೋವಧೆ ಮತ್ತು ತಾರತಮ್ಯ ಮಾಡಿದ ಪ್ರತೀಕಾರವಾಗಿ ಈ ಕೆಲಸಕ್ಕೆ ಕೈಹಾಕಿದ್ದೇನೆ. ಅಲ್ಲದೆ ಈ ಸಂದೇಶವನ್ನು ನೀವು ಸ್ವೀಕರಿಸಿದ್ದರೆ, ನನ್ನ ಸಾವು ಸಮೀಪಿಸಿದೆ ಎಂದೇ ಅರ್ಥ ಎಂದಿದ್ದ.

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೀ ವೈರಲ್ ಆಗಿದ್ದು, ಈತನ ಮಾನಸಿಕ ಪರಿಸ್ಥಿತಿ ಮೇಲೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಮನೋವೈದ್ಯರು ತೀವ್ರ ನಿಗಾ ವಹಿಸಿದ್ದಾರೆ.

ಕ್ರಿಸ್‍ಮಸ್ ಆಚರಿಸಲು ರಾಣಿ ಎಲಿಜಬೆತ್ ವಿಂಡ್ಸರ್ ಕ್ಯಾಸೆಲ್‍ಗೆ ಆಗಮಿಸಿದ್ದರು. ಆಗ ಸ್ಥಳಕ್ಕೆ ಹೋಗಿದ್ದ ಆರೋಪಿ ತನ್ನ ಕೈಯಲ್ಲಿ ಬಿಲ್ಲಿನಂತಹ ಆಯುಧವನ್ನು ಹಿಡಿದುಕೊಂಡಿದ್ದ. ರಾಣಿಯು ನಿವಾಸಕ್ಕೆ ತೆರಳಲು ಯತ್ನಿಸುತ್ತಿದ್ದಾಗ ಪೊಲೀಸರು ಈತನನ್ನು ಬಂಧಿಸಿ ಅವನ ಬಳಿ ಇದ್ದ ಆಯುಧವನ್ನು ವಶಪಡಿಸಿಕೊಂಡಿದ್ದಾರೆ.

ಬಂಧನಕ್ಕೆ ಒಳಪಟ್ಟಿರುವ 19 ವರ್ಷದ ವ್ಯಕ್ತಿಯೇ ಕೊಲೆ ಬೆದರಿಕೆ ಹಾಕಿದ್ದಾನೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಬಂಧಿತನ ಹೆಸರನ್ನು ಈವರೆಗೆ ಬಹಿರಂಗಪಡಿಸಿಲ್ಲ. ಜತೆಗೆ ಆರೋಪಿಗೆ ವೈದ್ಯಕೀಯ ಸಿಬ್ಬಂದಿಯಿಂದ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಲ್ಲದೆ ಶಂಕಿತನ ಕುಟುಂಬ ವಾಸವಿರುವ ಮನೆ ಮೇಲೂ ದಾಳಿ ನಡೆಸಿದ ಪೊಲೀಸರು, ಪರಿಶೀಲನೆ ನಡೆಸಿದರು.

Donate Janashakthi Media

Leave a Reply

Your email address will not be published. Required fields are marked *