ಚೆನ್ನೈ ಬಳಿ ಇರುವ ರೈಲು ಕೋಚ್‍ಗಳನ್ನು ತಯಾರಿಸುವ ಸಾರ್ವಜನಿಕ ವಲಯದ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ICF)ಯನ್ನು ಖಾಸಗಿಯವರಿಗೆ ಕೊಡುವ ಮತ್ತು ಮತ್ತು ವಂದೇ ಭಾರತ್ ರೈಲುಗಳ ತಯಾರಿಕೆ/ನಿರ್ವಹಣೆಯನ್ನು ಐಸಿಎಫ್ ಆವರಣದೊಳಗೇ ಖಾಸಗಿ ವಲಯಕ್ಕೆ ಹಸ್ತಾಂತರಿಸುವ ನಿರ್ಧಾರವನ್ನು ಸರಕಾರ ಕೈಗೊಂಡಿದೆ ಎಂದು ವರದಿಯಾಗಿದೆ. ಇದನ್ನು ಈ ಫ್ಯಾಕ್ಟರಿಯಲ್ಲಿರುವ ಕಾರ್ಮಿಕ ಸಂಘಗಳ ಜಂಟಿ ಕ್ರಿಯಾ ಮಂಡಳಿ ಬಲವಾಗಿ ವಿರೋಧಿಸಿದೆ. ಆ ನಿರ್ಧಾರವನ್ನು ಹಿಂದಕ್ಕೆ ಪಡೆಯಬೇಕೆಂದು ಅದು ಆಗ್ರಹಿಸಿದೆ. ಇದಕ್ಕೆ ನವೆಂಬರ್ 6, 2023 ರಂದು, ಹತ್ತು ಕೇಂದ್ರೀಯ ಕಾರ್ಮಿಕ ಸಂಘಗಳು ಮತ್ತು ಸ್ವತಂತ್ರ ರಾಷ್ಟ್ರೀಯ ಒಕ್ಕೂಟಗಳ ರಾಷ್ಟ್ರೀಯ ವೇದಿಕೆ ಬೆಂಬಲ ವ್ಯಕ್ತಪಡಿಸಿದೆ. ಕಾರ್ಮಿಕ ಸಂಘಟನೆ
ರೈಲ್ವೇ ಮಂಡಳಿ ಮತ್ತು ಖಾಸಗಿ ಉದ್ಯಮದ ನಡುವೆ ಸಹಿ ಹಾಕಲಿರುವ ಒಪ್ಪಂದದ ಕರಡಿನ ಪ್ರಕಾರ, ICF ಖಾಸಗಿಯವರಿಗೆ ಎಲ್ಲಾ ಸೌಲಭ್ಯಗಳನ್ನು- ಉತ್ಪಾದನಾ ಅಂಗಳಗಳಲ್ಲಿ, ಉಚಿತ ವಿದ್ಯುತ್, ಕಂಪ್ರೆಸ್ಡ್ ಏರ್, ಕುಡಿಯುವ ನೀರು, ವಿಶ್ರಾಂತಿ ಕೊಠಡಿ ಮತ್ತು ಕ್ಯಾಂಟೀನ್ ಸೌಲಭ್ಯಗಳು ಇತ್ಯಾದಿಗಳನ್ನು- ಒದಗಿಸಬೇಕು. ಜೊತೆಗೆ, ಖಾಸಗಿ ಕಂಪನಿಯು ICF ವಿನ್ಯಾಸಗಳು ಮತ್ತು ರೇಖಾಚಿತ್ರಗಳನ್ನು ಬಳಸಲು ಸ್ವಾತಂತ್ರ‍್ಯವನ್ನೂ ಹೊಂದಿರುತ್ತದೆ. ರೈಲ್ವೆ ಮಂಡಳಿಯು ಐಸಿಎಫ್ ನ್ನು ಬಲಿಗೊಟ್ಟು ಖಾಸಗಿ ಕರ್ಪೊರೇಟ್ ಪೋಷಿಸುವ ಪರಿಯಿದು ಎಂದು ಜಂಟಿ ವೇದಿಕೆ ಟೀಕಿಸಿದೆ.
ಇದನ್ನೂ ಓದಿ: 6 ಜನರಿಗೆ ಅಂಗಾಂಗ ದಾನ; ಸಾವಿನಲ್ಲೂ ಸಾರ್ಥಕತೆ ಮೆರೆದ ಶೇಖರ್
1955ರಲ್ಲಿ ಸ್ಥಾಪನೆಯಾದ ICF, ಭಾರತೀಯ ರೈಲ್ವೇಯ ಅತಿದೊಡ್ಡ ಕೋಚ್ ಉತ್ಪಾದನಾ ಘಟಕವಾಗಿದೆ. ಅದರ ಉತ್ಪಾದನೆಯ ಸಾಮರ್ಥ್ಯ ದಕ್ಷತೆ ಮತ್ತು ಗುಣಮಟ್ಟವನ್ನು ಎಲ್ಲರೂ ಮೆಚ್ಚಿದ್ದಾರೆ. ಐಸಿಎಫ್ ಈಗಾಗಲೇ 40 ವಂದೇ ಭಾರತ್ ರೈಲುಗಳನ್ನು ತಯಾರಿಸಿದೆ. ಕಾರ್ಮಿಕ ಸಂಘಟನೆ
ಹೆಚ್ಚಿನ ಕೆಲಸದ ಆರ್ಡರುಗಳು ಬಂದಿರುವಾಗ, ಅದನ್ನು ನಿಭಾಯಿಸಲು ICF ಅನ್ನು ವಿಸ್ತರಿಸುವ ಮತ್ತು ಹೆಚ್ಚು ಸಿಬ್ಬಂದಿಯ ನೇಮಕಾತಿಯ ಮೂಲಕ, ಐಸಿಎಫ್‌ನಲ್ಲಿಯೇ ಇರುವ 1,400 ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ, ಅರ್ಹ ನಿರುದ್ಯೋಗಿ ಯುವಕರಿಗೆ, ವಿಶೇಷವಾಗಿ ST, SC ಮತ್ತು OBC ಗಳಂತಹ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ತುಳಿತಕ್ಕೊಳಗಾದ ವಿಭಾಗಗಳಿಗೆ ಮತ್ತು ಟ್ರೇಡ್ ಅಪ್ರೆಂಟಿಸ್‌ಗಳಾಗಿದ್ದವರಿಗೆ ಉದ್ಯೋಗಾವಕಾಶಗಳನ್ನು ಒದಗಿಸುವ ಬದಲು ರೈಲ್ವೆ ಸಚಿವಾಲಯವು ಖಾಸಗಿ ವಲಯದೊಂದಿಗೆ ಉತ್ಪಾದನೆ/ನಿರ್ವಹಣಾ ಒಪ್ಪಂದವನ್ನು ಮಾಡಿಕೊಳ್ಳಲು ನಿರ್ಧರಿಸಿದೆ ಎಂದು ಕಾರ್ಮಿಕ ಸಂಘಗಳ ಜಂಟಿ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.
ವಿಡಿಯೋ ನೋಡಿ: ದುಡಿಯುವ ಜನರ ಮಹಾಧರಣಿ| ಸಂವಿಧಾನ ಸಂಕಲ್ಪ | ಸಂವಿಧಾನ ಪೀಠೀಕೆ ಬೋಧನೆ