ಚೆನ್ನೈ : ತಮಿಳುನಾಡಿನ ವೈದ್ಯ ಉಕ್ರೇನ್‌ನಲ್ಲಿ ಅಧ್ಯಯನ ಮಾಡಿದ್ದ ಕಾರಣಕ್ಕೆ ರಷ್ಯಾಕ್ಕೆ ಪ್ರವಾಸ ತೆರಳಿದಾಗ ಆತನನ್ನು ಬಂಧಿಸಿದ ಅಲ್ಲಿನ ಅಧಿಕಾರಿಗಳು ಮೂರು ತಿಂಗಳ ಜೈಲು ಶಿಕ್ಷೆಯ ನಂತರ ಇದೀಗ ಬಿಡುಗಡೆ ಮಾಡಿದ್ದಾರೆ.
ಸೆಪ್ಟಂಬರ್ 15 ರಂದು ಸ್ನೇಹಿತನ ಜೊತೆ ರಷ್ಯಾಕ್ಕೆ ಪ್ರವಾಸಕ್ಕೆ ತೆರಳಿದ್ದರು. ಅಲ್ಲಿನ ವಿಮಾನ ನಿಲ್ದಾಣದಲ್ಲಿ ಪಾಸ್‌ಪೋರ್ಟ್ ಪರಿಶೀಲನೆಯ ವೇಳೆ ಉಕ್ರೇನ್‌ನಲ್ಲಿ ವೈದ್ಯಕೀಯ ಅಧ್ಯಯನ ಮಾಡಿದ್ದನ್ನು ಅಧಿಕಾರಿಗಳು ಗುರುತಿಸಿದ್ದಾರೆ. ತಿರುವಳ್ಳೂರು ಜಿಲ್ಲೆಯ ಮೂಲದ ಡಾ.ಜಗದೀಶ್ವರನ್ ಬಿಡುಗಡೆ ಹೊಂದಿದ ವೈದ್ಯ. ಈತ ಉಕ್ರೇನ್ ಮತ್ತು ರಷ್ಯಾದ ನಡುವೆ ಯುದ್ಧ ಆರಂಭಕ್ಕೂ ಮೊದಲು ಉಕ್ರೇನ್‌ನಲ್ಲಿ ವೈದ್ಯಕೀಯ ಅಧ್ಯಯನ ಮಾಡಿದ್ದರು.
ಇದನ್ನೂ ಓದಿ : ನವದೆಹಲಿ | ಡಿ. 31 ರಂದು ಮುಷ್ಕರಕ್ಕೆ ಕರೆ ನೀಡಿದ ಗಿಗ್ ಕೆಲಸಗಾರು
10 ದಿನಗಳ ವಿಚಾರಣೆಯ ನಂತರ ಸ್ನೇಹಿತನನ್ನು ಬಿಡುಗಡೆ ಮಾಡಲಾಗಿದ್ದರೂ, ಜಗದೀಶ್ವರನ್ ಅವರನ್ನು ರಷ್ಯಾದ ಪೊಲೀಸರು ವಿವಿಧ ಆರೋಪಗಳ ಮೇಲೆ ಜೈಲಿಗೆ ಹಾಕಿದ್ದರು. ಇಬ್ಬರನ್ನೂ ರಷ್ಯಾದ ಅಧಿಕಾರಿಗಳು ಪಾಸ್‌ಪೋರ್ಟ್ ಕುರಿತು ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ. ಆತನ ಬಿಡುಗಡೆಗೆ ವೈದ್ಯನ ಕುಟುಂಬವು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿತು. ಸ್ಥಳೀಯ ಬಿಜೆಪಿ ಕಚೇರಿಗೆ ಅರ್ಜಿಯನ್ನೂ ಸಲ್ಲಿಸಿದರು.
ವೈದ್ಯ ಜಗದೀಶ್ವರನ್ ಅವರಿಗೆ ಉಕ್ರೇನ್‌ನೊಂದಿಗೆ ಪ್ರಸ್ತುತ ಯಾವುದೇ ಸಂಬಂಧವಿಲ್ಲ. ತಮಿಳುನಾಡು ಬಿಜೆಪಿ ರಾಜ್ಯ ಅಧ್ಯಕ್ಷರಾದ ನೈನಾರ್ ನಾಗೇಂದ್ರನ್ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ವಿದೇಶಾಂಗ ಸಚಿವ ಡಾ.ಎಸ್. ಜೈಶಂಕರ್ ಅವರಿಗೆ ಈ ಮಾಹಿತಿ ನೀಡಿದ್ದರು. ಆತ ಯಾವುದೇ ತಪ್ಪು ಮಾಡಿಲ್ಲ ಎಂದು ಭಾರತೀಯ ವಿದೇಶಾಂಗ ಅಧಿಕಾರಿಗಳು ರಷ್ಯಾಕ್ಕೆ ಸ್ಪಷ್ಟನೆ ನೀಡಿದ್ದಾರೆ.
ವೈದ್ಯ ರಷ್ಯಾದಿಂದ ದೆಹಲಿಗೆ ಪ್ರಯಾಣ ಬೆಳೆಸಿ ಸೋಮವಾರ ರಾತ್ರಿ ಚೆನ್ನೈ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ತರುವಾಯ, ಜಗದೀಶ್ವರನ್ ನಿರಪರಾಧಿ ಎಂದು ರಷ್ಯಾದ ಅಧಿಕಾರಿಗಳು ದೃಢಪಡಿಸಿ, ಬಿಡುಗಡೆ ಮಾಡಿದರು. ಅವರನ್ನು ಕುಟುಂಬಸ್ಥರು ಮತ್ತು ತಮಿಳುನಾಡು ಬಿಜೆಪಿ ಸದಸ್ಯರು ಸ್ವಾಗತಿಸಿದರು.
ಘಟನೆಯ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಡಾ. ಜಗದೀಶ್ವರನ್, ನಾನು ಪ್ರವಾಸಿ ವೀಸಾದಡಿ ರಷ್ಯಾಕ್ಕೆ ಪ್ರವಾಸ ತೆರಳಿದ್ದೆ. ಅಲ್ಲಿನ ವಲಸೆ ಅಧಿಕಾರಿಗಳು ಅನುಮಾನದ ಮೇಲೆ ನನ್ನನ್ನು ಬಂಧಿಸಿದರು. ಅವರು ನನ್ನ ಮೊಬೈಲ್ ಮತ್ತು ಲ್ಯಾಪ್‌ಟಾಪ್ ಅನ್ನು ವಶಪಡಿಸಿಕೊಂಡರು. ಆದ್ದರಿಂದ ನಾನು 15 ದಿನಗಳವರೆಗೆ ಯಾರನ್ನೂ ಸಂಪರ್ಕಿಸಲು ಸಾಧ್ಯವಾಗಲಿಲ್ಲ. ನಂತರ, ಪತ್ನಿಗೆ ಮಾಹಿತಿ ನೀಡಲು ಅವಕಾಶ ನೀಡಿದರು. ಉಕ್ರೇನ್‌ನಲ್ಲಿ ಓದಿದ್ದೇನೆ ಎಂಬ ಕಾರಣಕ್ಕಾಗಿ ರಷ್ಯಾದ ಅಧಿಕಾರಿಗಳು ನನ್ನನ್ನು ಬಂಧನದಲ್ಲಿಟ್ಟರು ಎಂದು ತಿಳಿಸಿದ್ದೆ.
ನಾನು ಭಾರತಕ್ಕೆ ಜೀವಂತವಾಗಿ ಹಿಂತಿರುಗುತ್ತೇನೆ ಎಂದು ಭಾವಿಸಿರಲಿಲ್ಲ. ನನ್ನ ಸ್ನೇಹಿತ ಮಣಿವಣ್ಣನ್ ಪಾಸ್‌ಪೋರ್ಟ್ ವಿಚಾರಣೆಯ ವೇಳೆ ಸಹಾಯಕ್ಕೆ ತೆರಳಿದಾಗ ರಷ್ಯಾದ ಪೊಲೀಸರು ನನ್ನನ್ನು ಬಂಧಿಸಿದ್ದರು. ಅವರು ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ದಾಖಲಿಸಿದ್ದರು. ಸುಮಾರು ಮೂರು ತಿಂಗಳ ಕಾಲ ನನ್ನನ್ನು ಜೈಲಿನಲ್ಲಿಟ್ಟರು. ರಷ್ಯಾದ ಅಧಿಕಾರಿಗಳು ನನ್ನ ಬಂಧನದ ಬಗ್ಗೆ ರಷ್ಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಗೂ ತಿಳಿಸಿರಲಿಲ್ಲ ಎಂದರು.
ಆದಾಗ್ಯೂ, ನನ್ನನ್ನು ಬಿಡುಗಡೆ ಮಾಡಿಸಿ, ಭಾರತಕ್ಕೆ ಮರಳಿ ಕರೆತರಲು ಕ್ರಮ ಕೈಗೊಂಡ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳಿಗೆ, ಬಿಜೆಪಿ ರಾಜ್ಯ ಅಧ್ಯಕ್ಷರಾದ ನೈನಾರ್ ನಾಗೇಂದ್ರನ್ ಮತ್ತು ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಮತ್ತು ಜೈಶಂಕರ್ ಅವರಿಗೆ ಧನ್ಯವಾದಗಳು ಎಂದು ತಿಳಿಸಿದರು.
ಇದನ್ನೂ ನೋಡಿ : ಕುವೆಂಪು ಜನ್ಮ ದಿನ | ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ – ಓದು : ಎಚ್.ವಿ. ನಟರಾಜ Janashakthi Media
