ಚಿತ್ರದುರ್ಗ: ನೇಣು ಬಿಗಿದ ಸ್ಥಿತಿಯಲ್ಲಿ ಗರ್ಭಿಣಿ ಶವ ಪತ್ತೆಯಾಗಿರುವ ಘಟನೆ ತಾಲೂಕಿನ ಕಾಟಿಹಳ್ಳಿ ಗ್ರಾಮದಲ್ಲಿ ನಡೆದಿದ್ದೂ, ಪತಿ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ. ಪುಷ್ಪಾ ಬೇರೆ ಜಾತಿಗೆ ಸೇರಿದವಳೆಂಬ ಕಾರಣಕ್ಕೆ ಚಿತ್ರಹಿಂಸೆ ನೀಡಿ ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಿದ್ದಾರೆ ಎಂದು ಪುಷ್ಪಾ ಪೋಷಕರು ಆರೋಪಿಸಿದ್ದಾರೆ.
25 ವರ್ಷದ ಪುಷ್ಪ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೊಲೆಯೋ..? ಆತ್ಮಹತ್ಯೆಯೋ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಪುಷ್ಪಾ ಕುಟುಂಬಸ್ಥರು ಪತಿ ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು | ಡಿಸೆಂಬರ್ 23ರಿಂದ 28ರವರೆಗೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನಲ್ಲಿ ವರ್ಣ ಚಿತ್ರಗಳ ಸ್ವರ ಮೇಳ
ಒಂದೂವರೆ ವರ್ಷದ ಮಗು ಬಿಟ್ಟು ಗರ್ಭಿಣಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. 2 ವರ್ಷದ ಹಿಂದೆ ಹರೀಶ್ ಎಂಬ ಯುವಕನಿಗೆ ಪುಷ್ಪಾರನ್ನ ಮದುವೆ ಮಾಡಿಕೊಡಲಾಗಿತ್ತು. ಆದರೆ ಪುಷ್ಪಾ ಇತರ ಜಾತಿಯವಳು ಎಂಬ ಕಾರಣಕ್ಕೆ ಆಕೆಗೆ ಚಿತ್ರಹಿಂಸೆ ನೀಡಲಾಗುತ್ತಿತ್ತು. ದನದ ಕೊಟ್ಟಿಗೆಯಲ್ಲಿ ಇರಿಸಿ ಹಿಂಸೆ ನೀಡಲಾಗುತ್ತಿತ್ತು ಎಂಬ ಆರೋಪಗಳು ಕೇಳಿಬಂದಿದೆ.
ಹರೀಶ್ ಬಂಜಾರ ಸಮುದಾಯದವರಾಗಿದ್ದು, ಪುಷ್ಪಾ ಮಾದಿಗ ಸಮಾಜಕ್ಕೆ ಸೇರಿದ್ದರು. ಪುಷ್ಪಾ ಬೇರೆ ಜಾತಿಗೆ ಸೇರಿದವಳೆಂಬ ಕಾರಣಕ್ಕೆ ಚಿತ್ರಹಿಂಸೆ ನೀಡಿ ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಿದ್ದಾರೆ ಎಂದು ಪುಷ್ಪಾ ಪೋಷಕರು ಆರೋಪಿಸಿದ್ದಾರೆ. ಅದೇನೆ ಇರಲಿ ಪೊಲೀಸ್ ತನಿಖೆಯಿಂದಷ್ಟೇ ಪುಷ್ಪಾ ಸಾವಿನ ಸತ್ಯ ಹೊರಬರಬೇಕಿದೆ.
ಇದನ್ನೂ ನೋಡಿ: ದೇವದಾಸಿ, ಒಂಟಿ ಮಹಿಳೆ, ಮಸಣ ಕಾರ್ಮಿಕರಿಗೆ 6000 ರೂ ಮಾಸಿಕ ಪಿಂಚಣಿ ನೀಡಿ Janashakthi Media
