ಪ್ರಯಾಣಿಕನನ್ನು ಕಾಲಲ್ಲಿ ಒದ್ದು ರಸ್ತೆಗೆ ತಳ್ಳಿದ ಕೆಎಸ್​ಆರ್​ಟಿಸಿ ಬಸ್ ನಿರ್ವಾಹಕ

ಮಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್‌ಆರ್‌ಟಿಸಿ) ನಿರ್ವಾಹಕರೊಬ್ಬರು ಬಸ್ಸಿನಿಂದ ಪಾನಮತ್ತ ಪ್ರಯಾಣಿಕನೊಬ್ಬನನ್ನು ಕಾಲಲ್ಲಿ ಒದ್ದು ರಸ್ತೆ ತಳ್ಳಿರುವ ಘಟನೆಯು ದಕ್ಷಿಣ ಕನ್ನಡ ಜಿಲ್ಲೆಯ ‌ಪುತ್ತೂರು ತಾಲೂಕಿ‌ನ ಈಶ್ವರಮಂಗಲದಲ್ಲಿ ನಡೆದಿದೆ.

ಈ ಬಗ್ಗೆ ಟಿವಿ9 ಕನ್ನಡ ಸುದ್ದಿ ಸಂಸ್ಥೆ ವರದಿಯ ಮಾಡಿದ್ದು, ನೆನ್ನೆ(ಸೆಪ್ಟಂಬರ್‌ 07) ಸಂಜೆ ಈ ಘಟನೆ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ಘಟನೆಯ ಕುರಿತ ವಿಡಿಯೋವೊಂದು ಸಾಕಷ್ಟು ಮಂದಿ ಹಂಚಿಕೊಂಡಿದ್ದು, ನಿರ್ವಾಹಕನ ವರ್ತೆಯನ್ನು ಖಂಡಿಸಿದ್ದಾರೆ ಎಂದು ವರದಿಯಾಗಿದೆ.

ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕ ಪ್ರಯಾಣಿಕ ಬಸ್ ಹತ್ತಿದಾಗಲೇ ತಡೆದಿದ್ದಾನೆ. ಪ್ರಯಾಣಿಕನ ಕೊಡೆ ಕಿತ್ತೆಸೆದು ಬಸ್ ಒಳಗಡೆಯೇ ಕೈಯಿಂದ ಹಲ್ಲೆ ನಡೆದಿರುವುದು ಕಂಡು ಬಂದಿದೆ. ಪ್ರಯಾಣಿಕ ಬಸ್ ಇಳಿಯಲು ಒಪ್ಪದೇ ಇದ್ದಾಗ ಕಾಲಿನಿಂದ ಒದ್ದಿದ್ದಾನೆ. ಪರಿಣಾಮ ಪ್ರಯಾಣಿಕ ರಸ್ತೆಗೆ ಬಿದಿದ್ದಾನೆ. ಬಳಿಕ ಆತನನ್ನ ಅಲ್ಲೇ ಬಿಟ್ಟು ಬಸ್ ಮುಂದಕ್ಕೆ ಚಲಿಸಿದೆ. ನಿರ್ವಾಹಕನ ದುರ್ವರ್ತನೆ ವಿರುದ್ದ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.

ಈಶ್ವರಮಂಗಲದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಪಡುವನ್ನೂರು ಗ್ರಾಮದ ಪದಡ್ಕದ ನಿವಾಸಿ ಕೃಷ್ಣಪ್ಪ ಎಂಬವರು ಪದಡ್ಕ ಹೋಗಲು ಬಸ್ಸನ್ನು ಹತ್ತಿದ್ದಾರೆ. ಈ ಸಂದರ್ಭದಲ್ಲಿ ಆತ ಮದ್ಯಪಾನ ಮಾಡಿರುವುದನ್ನು ಗಮನಿಸಿದ ನಿರ್ವಾಹಕ ಕೃಷ್ಣಪ್ಪ ಜೊತೆ ಅನುಚಿತ ವರ್ತನೆ ತೋರಿದೆ ಎನ್ನಲಾದ ಬಸ್‌ ಕೆಎ 21 ಎಫ್ 0002 ಸಂಖ್ಯೆಯನ್ನು ಎಂದು ಗುರುತಿಸಲಾಗಿದ್ದು, ನಿರ್ವಾಹಕ ಸುಬ್ಬರಾಜ್ ರೈ ಎಂದು ಎನ್ನಲಾಗಿದೆ. ಪ್ರಯಾಣಿಕ ಮೇಲ್ನೋಟಕ್ಕೆ ಪಾನಮತ್ತನಂತೆ ಕಂಡು ಬಂದಿದ್ದು, ಬಸ್ ಹತ್ತುವಾಗಲೇ ನಿರ್ವಾಹಕ ತಡೆದು ಆತನ ಕೊಡೆಯನ್ನು ರಸ್ತೆಗೆಸೆದಿದ್ದಾನೆ. ಬಳಿಕ ಬಸ್ಸಿನಿಂದ ಕೆಳಗಿಳಿಯುವಂತೆ ನಿರ್ವಾಹಕ ಪ್ರಯಾಣಿಕನಿಗೆ ಸೂಚಿಸಿದ್ದು, ಈ ವೇಳೆ ಕೈಯಿಂದ ಹಲ್ಲೆ ಮಾಡಿದ್ದಾನೆ. ಕೊನೆಗೆ ಪ್ರಯಾಣಿಕ ಕೇಳದಿದ್ದಾಗ ಕಾಲಿನಿಂದ ಒದ್ದು, ರಸ್ತೆಗೆ ತಳ್ಳಿದ್ದಾನೆ. ರಸ್ತೆಯಲ್ಲಿ ಬಿದ್ದ ಪ್ರಯಾಣಿಕನನ್ನು ಅಲ್ಲಿಯೇ ಬಿಟ್ಟು ಬಸ್ ಸಂಚರಿಸಿದೆ.

ನಿರ್ವಾಹಕನ ಅಮಾನತ್ತಿಗೆ ಶಿಫಾರಸ್ಸು:

ಬಸ್ಸಿನಲ್ಲಿರುವ ವ್ಯಕ್ತಿ ಯಾವುದೇ ಸ್ಥಿತಿಯಲ್ಲಿದ್ದರೂ ಕಾನೂನು ಕೈಗೆತ್ತಿಕೊಳ್ಳುವ ಯಾವುದೇ ಅಧಿಕಾರ ನಿರ್ವಾಹಕರಿಗಿರುವುದಿಲ್ಲ. ಇಲ್ಲಿ ನಿರ್ವಾಹಕ ಮಾಡಿರುವುದು ತಪ್ಪು ಎಂದು ಕಾಣುತ್ತಿದ್ದು, ಹೀಗಾಗಿ ಕೂಡಲೇ ಸೇವೆಯಿಂದ ಅಮಾನತು ಮಾಡಲಾಗುವುದು ಎಂದು ಪುತ್ತೂರು ಕೆಎಸ್​​ಆರ್​ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ ಮಾಧ್ಯಮ ಒಂದಕ್ಕೆ ತಿಳಿಸಿದ್ದಾರೆ.

Donate Janashakthi Media

One thought on “ಪ್ರಯಾಣಿಕನನ್ನು ಕಾಲಲ್ಲಿ ಒದ್ದು ರಸ್ತೆಗೆ ತಳ್ಳಿದ ಕೆಎಸ್​ಆರ್​ಟಿಸಿ ಬಸ್ ನಿರ್ವಾಹಕ

  1. Awanna kelsa dinda vaja madi immediately… Tale pettu agi sathidree enu madthane… Talege joragi pettu bedirbeku tale olagade blood polt agidre conduct full amount kodbeku….

Leave a Reply

Your email address will not be published. Required fields are marked *