ಪ್ರವಾಹ ಭೀತಿ : ರಾಜ್ಯದ  ಬಗ್ಗೆ ಚಕಾರವೆತ್ತದ ಪ್ರಧಾನಿ ವಿರುದ್ದ ಆಕ್ರೋಶ

ಬೆಂಗಳೂರು : ನೆರೆ ಹಾವಳಿಯಿಂದ ರಾಜ್ಯಗಳು ತತ್ತಿರಿಸಿ ಹೋಗಿವೆ. ಪ್ರವಾಹದ ಭೀತಿಯಲ್ಲಿ ಜನರು ಆತಂಕದಲ್ಲಿರುವಾಗ ಒಂದು ಸಾಂತ್ವನವನ್ನು ತಿಳಿಸದ ಪ್ರಧಾನಿ ಮೋದಿ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತೆಲೆಂಗಾಣ ಮತ್ತು ಆಂಧ್ರ ಪ್ರದೇಶದ ಪ್ರವಾಹ ಸಂತ್ರಸ್ತರ ಕುರಿತು ನಾನಿದ್ದೇನೆ ಎಂದು ಟ್ವೀಟ್  ಮಾಡಿದ ಮೋದಿಯವರು, ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ಮತ್ತು ಆಂದ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್‍ ರೆಡ್ಡಿ ಅವರ ಜೊತೆ ಮಾತುಕತೆ ನಡೆಸಿದ್ದೇನೆ. ನೆರವು, ಬೆಂಬಲಕ್ಕೆ ಕೆಂದ್ರ ಸರ್ಕಾರ ಸಿದ್ದವಿದೆ ಎಂದು ತಿಳಿಸಿದ್ದಾರೆ.

ಆದರೆ ನಮ್ಮ ರಾಜ್ಯದಲ್ಲಿಯೂ ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಉತ್ತರ ಕರ್ನಾಟಕ ಪ್ರವಾಹಕ್ಕೆ ತತ್ತರಿಸಿ ಹೋಗಿದೆ. ಕಲಬುರಗಿ, ಬೀದರ್, ರಾಯಚೂರು, ಯಾದಗಿರಿ, ಬಾಗಲಕೋಟೆ, ವಿಜಯಪುರ ಸೇರಿದಂತೆ ಕಲ್ಯಾಣ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ವಿವಿಧ ಭಾಗದ ಜಿಲ್ಲೆಗಳ ಜನರ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಹಲವಾರು ಗ್ರಾಮಗಳ ಸಂಪರ್ಕ ಕಡಿತಗೊಂಡಿದ್ದು, ಅಕ್ಷರಶಃ ನಡುಗಡ್ಡೆಗಳಾಗಿ ಮಾರ್ಪಟ್ಟಿವೆ. ಈ ಮಳೆ ಮತ್ತು ಪ್ರವಾಹ ಪರಿಸ್ಥಿತಿ ಹಿನ್ನೆಲೆ ಅನೇಕ ಮನೆಗಳು ನೆಲಕಚ್ಚಿವೆ. ಜನ, ಜಾನುವಾರಗಳು ಮತ್ತು ವಾಹನಗಳು ನೀರುಪಾಲಾಗಿದ್ದು, ಅನೇಕ ಆಸ್ತಿ-ಪಾಸ್ತಿಗಳು ನಷ್ಟಕೊಳಗಾದರೂ ಪ್ರಧಾನಿಯವರು ಕನಿಷ್ಠ ಒಂದು ಸಾಂತ್ವನ ಮಾತನ್ನು ಆಡಲಿಲ್ಲ. ನೆರೆಯ ರಾಜ್ಯಗಳು ಮಾತ್ರ ಅವರಿಗೆ ಕಾಣುತ್ತಿವೇ ಕರ್ನಾಟಕವೆಂದರೆ ಬರೀ ತಾತ್ಸಾರ ಮನೂಭಾವದಿಂದ ನೋಡುವಂತಾಗಿದೆ ಎಂದು ಜನ ಮೋದಿಯ ವಿರುದ್ಧ ಆಕ್ರೊಶ ವ್ಯಕ್ತಪಡಿಸಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *