ಪ್ರತಿಭಟನಾ ನಿರತ ರೈತರ ಮೇಲೆ ಪೊಲೀಸ್‌ ದೌರ್ಜನ್ಯ: ಬಳ್ಳಾರಿ-ಹಿರಿಯೂರಿನಲ್ಲಿ ಪ್ರತಿಭಟನೆ

ಹಿರಿಯೂರು: ರೈತರು ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕೆಂದು ಸತತವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಈ ನಡುವೆ ಮಂಡ್ಯದಲ್ಲಿ ಧರಣಿ ನಿರತ ಕಬ್ಬು ಬೆಳೆಗಾರರ ಮೇಲೆ ನಡೆದ ಪೋಲಿಸ್ ದೌರ್ಜನ್ಯ ಖಂಡಿಸಿರುವ ಕರ್ನಾಟಕ ರಾಜ್ಯ ರೈತ ಸಂಘ ಪ್ರತಿಭಟನೆ ನಡೆಸಿದೆ.

ಕಬ್ಬು ಮತ್ತು ಹಾಲಿಗೆ ಬೆಂಬಲ ಬೆಲೆ ಘೋಷಿಸುವಂತೆ ಕಳೆದ 52 ದಿನಗಳಿಂದ ಮಂಡ್ಯ ಜಿಲ್ಲೆಯ ರೈತರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ತಾವು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡುವಂತೆ ಆಗ್ರಹಿಸುತ್ತಿರುವ ರೈತರ ಮೇಲೆ ಜಿಲ್ಲೆಯ ಪೋಲಿಸರು ಧರಣಿ ನಿರತ ರೈತರ ಶಾಮಿಯಾನವನ್ನು ಎಳೆದು ಧ್ವಂಸ ನಡೆಸಿದ್ದಾರೆ. ರೈತರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳದಲ್ಲಿ ಹಾಕಿದ್ದ ಶಾಮಿಯಾನವನ್ನು ಕಿತ್ತುಹಾಕಿರುವ ಪೊಲೀಸರು ಅಡುಗೆಗೆ ಬಳಸುತ್ತಿದ್ದ ಪಾತ್ರೆ, ಗ್ಯಾಸ್, ದಿನಸಿ ಹಾಗೂ ರಾತ್ರಿ ತಂಗಲು ಬಳಸುತ್ತಿದ್ದ ಕಂಬಳಿ-ಹೊದಿಕೆ ಸೇರಿದಂತೆ ಮತ್ತಷ್ಟು ವಸ್ತುಗಳನ್ನು ನಾಶಪಡಿಸಿವೆ. ಈ ವಿಚಾರವಾಗಿ ಮುಖ್ಯಮಂತ್ರಿಗಳು ರೈತರ ಕ್ಷಮೆಯಾಚಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಇದನ್ನು ಓದಿ: ಚಳುವಳಿ ನಿರತ ರೈತರ ಮೇಲೆ ಪೋಲಿಸ್ ದೌರ್ಜನ್ಯ: ಕರ್ನಾಟಕ ಪ್ರಾಂತ ರೈತ ಸಂಘ ಆಕ್ರೋಶ

ಮಂಡ್ಯ ಜಿಲ್ಲೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಗಮನ ಹಿನ್ನೆಲೆಯಲ್ಲಿ ಪ್ರತಿಭಟನಾ ನಿರತರನ್ನು ಸ್ಥಳಾಂತರಿಸುವ ಹಿನ್ನೆಲೆಯಲ್ಲಿ ಹೋರಾಟಗಾರರ ಮೇಲೆ ದೌರ್ಜನ್ಯ ಎಸಗಿದ್ದಾರೆ. ಧರಣಿ ನಿರತರನ್ನು ಬಲವಂತವಾಗಿ ಎಬ್ಬಿಸಿ, 60 ರೈತರನ್ನು ಬಂಧಿಸಿದ್ದಾರೆ. ಗಾಂಧೀಜಿ, ಅಂಬೇಡ್ಕರ್, ಪ್ರೊ.ನಂಜುಂಡಸ್ವಾಮಿ, ಕೆ.ಎಸ್. ಪುಟ್ಟಣ್ಣಯ್ಯ ಅವರ ಭಾವಚಿತ್ರಗಳನ್ನು ಹಾಳು ಮಾಡಿದ್ದಾರೆ.

ರೈತರ ಮೇಲೆ ದೌರ್ಜ್ಯನ್ಯ ಎಸಗಿರುವ ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬಳ್ಳಾರಿ, ಹಿರಿಯೂರಿನಲ್ಲಿ ಪ್ರತಿಭಟನೆ ನಡೆದಿದ್ದು, ಕೊಡಗು ರೈತ ಸಂಘಟನೆಯ ಮುಖಂಡರು ದೌರ್ಜನ್ಯವನ್ನು ಖಂಡಿಸಿದ್ದಾರೆ.

ಹಿರಿಯೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಸಂಘದ ಕೆ.ಸಿ. ಹೊರಕೇರಪ್ಪ ಮಾತನಾಡಿ. ರೈತರು ಬೆಳೆದ ಫಸಲಿಗೆ ನ್ಯಾಯಯುತ ಬೆಲೆಯನ್ನು ಕೇಳುವುದು ರೈತರ ಹಕ್ಕಾಗಿದೆ. ಸರ್ಕಾರ ವೈಜ್ಞಾನಿಕ ಬೆಲೆಯನ್ನು ನಿಗದಿ ಮಾಡಿದ್ದರೆ ಧರಣಿ ನಡೆಸುವ ಪ್ರಸಂಗ ಬರುತ್ತಿರಲಿಲ್ಲ. ಸರ್ಕಾರವೇ ಪರೋಕ್ಷವಾಗಿ ರೈತರನ್ನು ಬೀದಿಗೆ ಇಳಿಯುವಂತೆ ಮಾಡಿದೆ ಎಂದು ಹೇಳಿದ್ದಾರೆ. ಪ್ರತಿಭಟನೆ ಬಳಿಕ ತಹಶೀಲ್ದಾರ್‌ ರವರಿಗೆ ಮನವಿ ಸಲ್ಲಿಸಿದ ಮುಖಂಡರು ಸರ್ಕಾರ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಇದನ್ನು ಓದಿ: ನಾಲ್ಕು ವರ್ಷದಲ್ಲಿ ಕಬ್ಬು ಖರೀದಿ ದರ ಕೆಜಿಗೆ ಇಪ್ಪತ್ತೈದು ಪೈಸೆ ಮಾತ್ರ ಹೆಚ್ಚಳ!

ಕೊಡಗು ರೈತ ಸಂಘದ ಜಿಲ್ಲಾದ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಹಾಗೂ ಜಿಲ್ಲಾ ಪದಾಧಿಕಾರಿಗಳು ಹೋರಾಟ ನಿರತ ರೈತರನ್ನು ಪೋಲಿಸರು ಬಂಧಿಸಿ, ವಶಕ್ಕೆ ಪಡೆದಿದ್ದಾರೆ. ಇದನ್ನು ಕೊಡಗು ಜಿಲ್ಲಾ ರೈತ ತೀವ್ರವಾಗಿ ಖಂಡಿಸಿತ್ತದೆ, ಅಲ್ಲದೇ ದೌರ್ಜನ್ಯ ಎಸಗಿದ ಪೋಲಿಸ್ ಅಧಿಕಾರಿ ಹಾಗೂ ಸಿಬ್ಬಂದಿಗಳು ಅಮಾನತ್ತು ಮಾಡಬೇಕೆಂದು ಆಗ್ರಹಿಸಿದ್ದಾರೆ.

ಬಳ್ಳಾರಿ ಜಿಲ್ಲೆ ರೈತ ಸಂಘದ ಜಿಲ್ಲಾಧ್ಯಕ್ಷ ಎಂ.ಎಲ್.ಕೆ ನಾಯ್ಡು ಅವರ ನೇತೃತ್ವದಲ್ಲಿ ರೈತ ಸಂಘದ ಮುಖಂಡರು ಸಂವಿಧಾನಬದ್ಧವಾಗಿ ಚಳುವಳಿ ನಡೆಸುತ್ತಿದ್ದ ರೈತರನ್ನು ತೆರವುಗೊಳಿಸಿರುವುದು ಖಂಡನೀಯ ಎಂದು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *