ತ್ರಿಶ್ಶೂರ್: ಕೇರಳದ ಕಾರ್ಯಕ್ರಮವೊಂದರಲ್ಲಿ ಮಾತನಾಡದ ನಟ ಪ್ರಕಾಶ್ ರೈ, ‘ಅವರು ಪಠಾಣ್ ಚಿತ್ರವನ್ನು ನಿಷೇಧಿಸಬೇಕೆಂದು ಅಂದುಕೊಂಡಿದ್ದರು. ಆದರೆ, ಅದೇ ಚಿತ್ರ 700 ಕೋಟಿ ರೂಪಾಯಿ ಸಂಗ್ರಹಮಾಡಿದೆ. ಮೂರ್ಖರು, ಮತಾಂಧರು ಪಠಾಣ್ ಚಿತ್ರ ನಿಷೇಧಕ್ಕೆ ಮುಂದಾಗಿದ್ದರು. ಆದರೆ ಅವರಿಗೆ ʻಪಿಎಂ ನರೇಂದ್ರ ಮೋದಿʼ ಸಿನಿಮಾಗೆ 30 ಕೋಟಿ ರೂಪಾಯಿ ಸಂಗ್ರಹಿಸಲು ಸಾಧ್ಯವಾಗಲಿಲ್ಲ. ಅವರು ಬೊಗಳುತ್ತಾರೆ, ಕಚ್ಚುವುದಿಲ್ಲ’ ಎಂದಿದ್ದಾರೆ.
ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಬಗ್ಗೆಯೂ ಮಾತನಾಡಿದ ಪ್ರಕಾಶ್ ರೈ, ‘ಕಾಶ್ಮೀರ್ ಫೈಲ್ಸ್ ನಾನ್ಸೆನ್ಸ್ ಸಿನಿಮಾ. ಅದನ್ನು ನಿರ್ಮಾಣ ಮಾಡಿದ್ದು ಯಾರು ಅನ್ನೋದು ನಿಮಗೆ ಗೊತ್ತಿದೆ. ಅಂತಾರಾಷ್ಟ್ರಿಯ ಜ್ಯೂರಿಗಳು ಚಿತ್ರವನ್ನು ತೆಗಳಿದರು. ಈ ಚಿತ್ರದ ನಿರ್ದೇಶಕ ನಮ್ಮ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಏಕೆ ಸಿಗುತ್ತಿಲ್ಲ ಎಂದು ಕೇಳುತ್ತಿದ್ದಾರೆ. ಇಲ್ಲಿ ನೀವು ಪ್ರೊಪೊಗಾಂಡ ಚಿತ್ರಗಳನ್ನು ಮಾಡಬಹುದು. ಈ ರೀತಿಯ ಸಿನಿಮಾಗಳನ್ನು ನಿರ್ಮಾಣ ಮಾಡಲು ಅವರು 2000 ಸಾವಿರ ಕೋಟಿ ಹೂಡಿಕೆ ಮಾಡಿದ್ದಾರೆ’ ಎಂದರು.
ಸೂಕ್ಷ್ಮವಾದ ಮಾಧ್ಯಮವೊಂದಿದೆ ಎನ್ನೋದನ್ನು ಮರೆಯಬೇಡಿ. ಆದರೆ ಇಲ್ಲಿ ಪ್ರೊಪಗಂಡ ಸಿನಿಮಾ ಮಾಡಲಾಗುತ್ತಿದೆ. ಎಲ್ಲ ಸಮಯದಲ್ಲಿ ನೀವು ಜನರನ್ನು ಮೂರ್ಖರನ್ನಾಗಿಸಲಾಗದು” ಎಂದು ಹೇಳಿದ್ದಾರೆ.
‘ಪಠಾಣ್’ ಸಿನಿಮಾ ಬಿಡುಗಡೆಗೊಂಡ 12 ದಿನಗಳಲ್ಲಿ 800 ಕೋಟಿ ರೂಪಾಯಿ ಸಂಗ್ರಹ ಮಾಡಿದೆ. ಈ ಮೂಲಕ ಬಾಲಿವುಡ್ ಇತಿಹಾಸದಲ್ಲೇ ವಿಶ್ವದಾದ್ಯಂತ ಅತಿ ಹೆಚ್ಚು ಸ್ವಭಾಷೆಯ ಚಿತ್ರವೊಂದು ಈ ಮಟ್ಟದಲ್ಲಿ ಹೆಗ್ಗಳಿಗೆ ಗಳಿಸಿರುವುದು ಪಠಾಣ್ ಚಿತ್ರ ಮಾತ್ರ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ