ಬೆಂಗಳೂರು: ಹಾಸನ ಕ್ಷೇತ್ರದ ಹಾಲಿ ಸಂಸದ, ಹೆಚ್.ಡಿ.ದೇವೇಗೌಡರ ಮೊಮ್ಮಗ, ಹೆಚ್.ಡಿ.ರೇವಣ್ಣರ ಸುಪುತ್ರ ಪ್ರಜ್ವಲ್ ರೇವಣ್ಣಗೆ ಈ ಬಾರಿಯೂ ಹಾಸನದಿಂದ ಟಿಕೆಟ್ ಸಿಗುವುದು ಬಹುತೇಕ ಖಚಿವಾಗಿದೆ. ಆದರೆ ಪ್ರಶ್ನೆಯಾಗಿ ಉಳಿದಿರುವುದು ಯಾವ ಪಕ್ಷದ ಚಿಹ್ನೆಯಿಂದ ಸ್ಪರ್ಧಿಸಬೇಕು ಎನ್ನುವುದು ಮಾತ್ರ?
ಹೇಳಿಕೇಳಿ, ಹಳೇ ಮೈಸೂರು ಭಾಗಕ್ಕೆ ಸೇರಿರುವ ಹಾಸನವನ್ನು ತಮ್ಮ ಮೊಮ್ಮಗನಿಗೆ ಬಿಟ್ಟು ಕೊಟ್ಟು ದೇವೇಗೌಡರು, ರಾಜ್ಯಸಭಾ ಸಂಸದರಾಗಿ ದೆಹಲಿಗೇನೋ ಹೋದರು. ಸ್ವತಂತ್ರವಿಲ್ಲದ ಎನ್‌ಡಿಎ ಒಕ್ಕೂಟಕ್ಕೆ ಸೇರಿರುವ ಜೆಡಿಎಸ್‌ನ ಈ ಅಭ್ಯರ್ಥಿಗೆ ಯಾವ ಚಿಹ್ನೆಯಡಿ ಸ್ಪರ್ಧಿಸಬೇಕು ಎನ್ನುವ ಚಿಂತೆ ಮೂಡಿದಂತಿದೆ. ಕಾರಣ, ಎನ್‌ಡಿಎ ಅಭ್ಯರ್ಥಿಯಾದರೂ ಕೂಡ ಬಿಜೆಪಿ ಅಭ್ಯರ್ಥಿ ಎಂದು ಕಮಲದ ಚಿಹ್ನೆಯಡಿ ಡಾ.ಸಿ.ಎನ್.ಮಂಜುನಾಥ್ ಸ್ಪರ್ಧಿಸುತ್ತಿದ್ದಾರೆ. ಹಾಸನದಲ್ಲಿ ತೆನೆ ಹೊತ್ತ ಮಹಿಳೆಯ ಚಿಹ್ನೆಗೆ ಒಕ್ಕಲಿಗ ಸಮುದಾಯಕ್ಕೆ ಬಹುತೇಕ ಮತವಿದೆ. ಹೀಗಾಗಿ ಕಮಲ ಬೇಡ ನಮಗೆ ನಮ್ಮ ಚಿಹ್ನೆಯೇ ಕೊಡಿ ಎಂದು ಪ್ರಜ್ವಲ್ ರೇವಣ್ಣ ಮತ್ತು ಹೆಚ್.ಡಿ.ರೇವಣ್ಣರ ಮನವಿಯಾಗಿದೆ. ಹೇಗಾದರೂ ಮಾಡಿ ಹಳೆ ಮೈಸೂರು ಭಾಗವನ್ನು ಸಂಪೂರ್ಣವಾಗಿ ಬೇರೆ ಯಾವುದೇ ಪಕ್ಷದ ನಾಮೀನೆಷನ್ ಇಲ್ಲದಂತೆ ತೆಕ್ಕೆಗೆ ಪಡೆಯಬೇಕೆಂಬುದು ಅಮಿತ್ ಷಾ ಅವರ ರಾಜಕೀಯ ಲೆಕ್ಕಾಚಾರವಾಗಿದೆ.
ಇದನ್ನು ಓದಿ : ಜೆಡಿಎಸ್ ಗೆ ‘ಬಿಗ್ ಶಾಕ್’ : ಇಂದು ‘ಪರಿಷತ್’ ಸದಸ್ಯತ್ವಕ್ಕೆ ಮರಿತೀಬ್ಬೆಗೌಡ ರಾಜೀನಾಮೆ
ಸಿ.ಎನ್.ಮಂಜುನಾಥ್, ಎನ್‌ಡಿಎ ಅಭ್ಯರ್ಥಿಯಾದರೂ ಕಮಲವನ್ನು ಹಿಡಿದಿರುವುದು ಒಂದು ಕಡೆ ದೇವೇಗೌಡರ ಲೆಕ್ಕಾಚಾರವನ್ನೇ ಉಲ್ಟಾ ಮಾಡಿದಂತಾಗಿದೆ. ಹೀಗಾಗಿ, ಹೇಗಾದರೂ ಮಾಡಿ ನಮ್ಮ ಚಿಹ್ನೆ ನಮಗೆ ಕೊಡಿ ಎಂದು ಹೆಚ್.ಡಿ.ರೇವಣ್ಣ ತನ್ನ ಪುತ್ರ ಪ್ರಜ್ವಲ್ ರೇವಣ್ಣನ ಜೊತೆ ಸೇರಿ ಇಂದು ಗುರುವಾರ ಮೊದಲ ಪಟ್ಟಿಯಲ್ಲೀ ತಮ್ಮ ಮೇಲುಗೈ ಬಹುತೇಕ ಸಾಧಿಸಿರುವ ಬಿ.ಎಸ್.ಯಡಿಯೂರಪ್ಪರ ಮನೆಯ ಕದವನ್ನು ಬಡಿದಿದ್ದಾರೆ. ಈ ಮನವಿ, ಆತಂಕ ಮತ್ತು ಪರಿಸ್ಥಿತಿಯನ್ನು ಮೇಲಿನವರಿಗೆ ತಿಳಿಸುವುದಾಗಿ ಯಡಿಯೂರಪ್ಪ, ಅಪ್ಪ-ಮಗನಿಗೆ ಹೇಳಿ ಕಳುಹಿಸಿದ್ದಾರೆ. ಇನ್ನು ಮುಖ್ಯವಾದ ವಿಷಯವೇನೆಂದರೆ, ಹಾಸನದಲ್ಲಿ ಬಿಜೆಪಿ ನಾಯಕ ಪ್ರೀತಂಗೌಡ, ಎನ್ಡಿಗೆ ಅಭ್ಯರ್ಥಿಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ಪ್ರಜ್ವಲ್ ರೇವಣ್ಣನಿಗೆ ಟಿಕೇಟ್ ನೀಡಬೇಡಿ ಎಂದು ಮೇಲಿನ ಬಿಜೆಪಿ ಮತ್ತು ರಾಜ್ಯದ ಬಿಜೆಪಿ ಹಿರಿಯರಿಗೆ ಒತ್ತಡ ಹೇರುತ್ತಿರುವುದು. ಪ್ರೀತಂ ಗೌಡ ಜೊತೆ ಅಂತ ಕಾಯ್ದುಕೊಂಡಿರುವ ಪ್ರಜ್ವಲ್ ರೇವಣ್ಣ, ಈಗಾಗಲೇ ಒಂದು ಸುತ್ತು ಐನೆಟ್ ವಿಜಯ್, ಬಿ.ವೈ.ವಿಜಯೇಂದ್ರ, ಸಂಘ ಪರಿವಾರದ ಹಲವರ ಮನೆಗೆ ಹೋಗಿ ಸಹಕಾರ ಕೋರಿದ್ದಾರೆ.
ಯಡಿಯೂರಪ್ಪ ಭೇಟಿ ಬಳಿಕ ಮಾತನಾಡಿದ ಪ್ರಜ್ವಲ್ ರೇವಣ್ಣ, ನನ್ನನ್ನು ಹಾಸನದ ಅಭ್ಯರ್ಥಿ ಎಂದು ದೇವೇಗೌಡರು ಹೇಳಿದ್ದಾರೆ. ಎರಡೆರಡು ಬಾರಿ ಬಂದು ಕೆಲಸ ಮಾಡುವುದಾಗಿ ಯಡಿಯೂರಪ್ಪ ತಮಗೆ ಭರವಸೆ ನೀಡಿರುವುದಾಗಿ ಪ್ರಜ್ವಲ್ ರೇವಣ್ಣ ಮಾಧ್ಯಮಗಳಿಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಪ್ರೀತಮ್ ಗೌಡ ಬಗ್ಗೆ ಪ್ರತಿಕ್ರಿಯಿಸಲು ನಕಾರ ವ್ಯಕ್ತಪಡಿಸಿರುವ ಹೆಚ್.ಡಿ.ರೇವಣ್ಣ, ಯಡಿಯೂರಪ್ಪ ನಮ್ಮ ಸಮಸ್ಯೆಗೆ ಪರಿಹಾರ ಕಂಡು ಹಿಡಿಯುತ್ತಾರೆ ಎಂದಿದ್ದಾರೆ.
ಅದೇನೇ ಇರಲಿ ಎನ್‌ಡಿಎ ತಿಕ್ಕಾಟ ಒಂದೆಡೆಯಾದರೆ, ಇನ್ನೊಂದೆಡೆ ಯಾವ ಚಿಹ್ನೆಗೆ ಯಾವ ಮುಖ, ಯಾವ ಮತ ಎನ್ನುವುದಂತೂ ಹಾಸನ ಕ್ಷೇತ್ರದಲ್ಲಿ ಜಿಜ್ಞಾಸೆ ಮೂಡಿಸಿದ್ದಂತೂ ಸತ್ಯ.
ಇದನ್ನು ನೋಡಿ : ದೇಶದ ವರ್ತಮಾನದ ಸ್ಥಿತಿ ಅಷ್ಟು ಚೆನ್ನಾಗಿಲ್ಲ : ಪರ್ಯಾಯ ಸರ್ಕಾರದತ್ತ ಚಿಂತನೆ ಅಗತ್ಯ – ಜಿ.ರಾಮಕೃಷ್ಣ