ಬೆಂಗಳೂರು : ಹಾಸನ ಪೆನ್‌ಡ್ರೈವ್ ಪ್ರಕರಣದ ಪ್ರಮುಕ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ ಎಸ್‌ಐಟಿ ಮುಂದೆ ವಿಚಾರಣೆಗೆ ಹಾಜರಾಗಲು ಏಳು ದಿನಗಳ ಕಾಲಾವಕಾಶ ಕೋರಿದ್ದು,ಈ ಸಂಬಂಧ ಪ್ರಜ್ವಲ್ ರೇವಣ್ಣ ಪರ ವಕೀಲ ಅರುಣ್ .ಜಿ ವಿಶೇಷ ತನಿಖಾ ದಳದ ಪೊಲೀಸ್ ಉಪಾಧೀಕ್ಷರು ಮತ್ತು ತನಿಖಾಧಿಗಳಿಗೆ ಪತ್ರ ಬರೆದಿದ್ದಾರೆ.
ಪ್ರಜ್ವಲ್ ರೇವಣ್ಣ ಮನೆಯ ಮೇಲೆ ಏಪ್ರಿಲ್ 30 ಎಸ್ಐಟಿಯಿಂದ ಕಳುಹಿಸಿರುವ ನೊಟೀಸ್ ಅಂಟಿಸಿರುವ ಬಗ್ಗೆ ಅವರ ಮನೆಯವರಿಂದ ಮಾಹಿತಿ ದೊರೆತಿದ್ದು, ನೊಟೀಸ್ ನಲ್ಲಿ ಮೇ1 ರಂದು ಎಸ್ಐಟಿ ಮುಂದೆ ಹಾಜರಾಗಲು ಹೇಳಲಾಗಿದೆ.
ಇದನ್ನು ಓದಿ : ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ರವರ ಬ್ಲಿಂಕ್ ಮಾಡಿದ ಆಕ್ಷೇಪಾರ್ಹ ಫೋಟೋ: ದೂರು ದಾಖಲು
ಆದರೆ ನನ್ನ ಕಕ್ಷಿದಾರ ಪ್ರಜ್ವಲ್ ರೇವಣ್ಣ ಬೆಂಗಳೂರಿನಿಂದ ಹೊರಗಡೆ ಪ್ರವಾಸದಲ್ಲಿದ್ದು ಅವರಿಗೆ ನೊಟೀಸ್‌ನ ಬಗ್ಗೆ ವಿಷಯ ತಿಳಿಸಿದ್ದು, ಬೆಂಗಳೂರಿಗೆ ಬಂದು ಪ್ರಜ್ವಲ್ ರೇವಣ್ಣ ತಮ್ಮ ಮುಂದೆ ನೋಟಿಸ್‌ನ ಸೂಚನೆಯಂತೆ ಹಾಜರಾಗಲು 7 ದಿನಗಳ ಕಾಲಾವಕಾಶ ಅಗತ್ಯವಿರುವುದಾಗಿ ಹೇಳಿದ್ದಾರೆ.
ಆದ್ದರಿಂದ ನನ್ನ ಕಕ್ಷಿದಾರ ಪ್ರಜ್ವಲ್ ರೇವಣ್ಣಗೆ 7 ದಿನಗಳ ಕಾಲಾವಕಾಶ ನೀಡಿ ಮತ್ತೊಂದು ದಿನಾಂಕದಂದು ತಮ್ಮ ಮುಂದೆ ವಿಚಾರಣೆಗಾಗಿ ಹಾಜರಾಗಲು ಅವಕಾಶ ನೀಡಬೇಕೆಂದು ಪ್ರಜ್ವಲ್ ಪರ ವಕೀಲರು ಮನವಿ ಮಾಡಿದ್ದಾರೆ.
ಇದನ್ನು ನೋಡಿ : ಪೆನ್‌ಡ್ರೈವ್ ಪ್ರಕರಣ : ವಿಡಿಯೋ ಲೀಕ್ ಹಿಂದಿನ ಉದ್ದೇಶ ಬಿಚ್ಚಿಟ್ಟ ಪ್ರಜ್ವಲ್ ಮಾಜಿ ಡ್ರೈವರ್ Janashakthi Media