ಗಜೇಂದ್ರಗಡ: ರೈತ ಕಾರ್ಮಿಕ ವಿರೋಧಿ ಭೂ ಸುಧಾರಣೆ ಕಾಯ್ದೆ ಸೇರಿದಂತೆ ರೈತ ವಿರೋಧಿ ನೀತಿ ಖಂಡಿಸಿ ನವೆಂಬರ್ 26-27 ರಂದು ಸಾಮೂಹಿಕ ಮುಷ್ಕರದ ಹಿನ್ನೆಲೆಯಲ್ಲಿ ಗಜೇಂದ್ರಗಡದ ಸಿಐಟಿಯು ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.
ಕರವೇ ಮುಖಂಡ ಎಚ್.ಎಸ್.ಸೊಂಪೂರ ಮಾತನಾಡಿ ಏಕಪಕ್ಷೀಯವಾಗಿ ರೈತರಿಗೆ ಮಾರಕವಾದ ಕಾಯ್ದೆಗಳನ್ನು ಈ ಸರ್ಕಾರ ಜಾರಿಗೆ ತರುತ್ತಿದೆ. ಉಳ್ಳವರ ಕೈಗೆ ರೈತರನ್ನು ಬಲಿಪಶು ಮಾಡುವುದಕ್ಕಾಗಿ ಎಪಿಎಮ್.ಸಿ ಕಾಯ್ದೆಯನ್ನು ತಿದ್ದುಪಡಿ ಮಾಡಿದ್ರು. ಯಾರ ಅಭಿಪ್ರಾಯ ಸಂಗ್ರಹವಿಲ್ಲದೆ ಇವರು ತರುವ
ಕಾಯ್ದೆಗಳಲ್ಲೆವೂ ರಾತ್ರೋರಾತ್ರಿ ಆಗುವಂತದ್ದು ಸರ್ಕಾರ ಪ್ರಜಾಪ್ರಭುತ್ವದ ಕಗ್ಗೊಲೆ ನಡಸಲು ಮುಂದಾಗಿದೆ. ರೈತ ವಿರೋಧಿ ಕಾಯ್ದೆಗಳನ್ನು ಕೂಡಲೇ ಕೈ ಬಿಡಬೇಕು ಎಂದು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಪುರಸಭೆ ಸದಸ್ಯ ಶಿವರಾಜ್ ಘೋರ್ಪಡೆ ಮಾತನಾಡಿ ಬಿಜೆಪಿ ಸರ್ಕಾರ ಅಭಿವೃದ್ಧಿ ಕೆಲಸಕ್ಕೆ ಅವಕಾಶ ನೀಡಿದೆಯೇ ವಿನಃಹ ಉಳ್ಳವರ ಪರವಾಗಿ ಕೆಲಸ ಮಾಡುವುದಕ್ಕೆ ಅಲ್ಲ. ದೇಶದ ಜನರ ಮೇಲೆ ಸುಗ್ರೀವಾಜ್ಞೆಯ ಮೂಲಕ ಕಾಯ್ದೆ ಹೇರಲು ಹೋರಟಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದರು. ನವೆಂಬರ್ ೨೬-೨೭ ರಂದು ನಡೆಯುವ ಜಂಟಿ ಸಮಾವೇಶದಲ್ಲಿ ಜನತೆ ಭಾಗವಹಿಸಿ ರೈತ ವಿರೋಧಿ ಕಾಯ್ದೆಗಳನ್ನು ಹಿಮ್ಮೆಟ್ಟಿಸಲು ಮುಂದಾಗಬೇಕು. ಇದಕ್ಕೆ ಕಾಂಗ್ರೇಸ್ ಪಕ್ಷ ಕೂಡಾ ಬೆಂಬಲಿಸಿದೆ ಎಂದರು.
ಸಿಐಟಿಯು ಮುಖಂಡ ಎಮ್.ಎಸ್.ಹಡಪದ ಮಾತನಾಡಿ ಹಿಂದೂ ಧರ್ಮದ ಹೆಸರನ್ನು ಉಚ್ಚರಿಸುತ್ತಾ ಸರ್ಕಾರ ಸಾಗುತ್ತಿದ್ದು ಅಭಿವೃದ್ಧಿ ವಿಚಾರದಲ್ಲಿ ಶೂನ್ಯ ಸಾಧನೆ ಮಾಡಿದೆ.ಪ್ರಜಾಪ್ರಭುತ್ವದ ವ್ಯವಸ್ಥೆಗೆ ಬೆದರಿಕೆ ಒಡ್ಡಿ ಆಡಳಿತ ನಡೆಸುತ್ತಿದೆ. ದೇಶ ಪ್ರೇಮ ಎನ್ನುವುದು ಒಂದು ವ್ಯಾಪರ ಪತ್ರಿಯೊಂದು ಕೂಡಾ ನಿಮಗೆ ವ್ಯಾಪರವಾಗಿದೆ ಎಂದರು. ಜನ ವಿರೋಧಿ ಕಾಯ್ದೆಗಳಾದ ವಿದ್ಯುತ್ ಕಾಯ್ದೆ, ಅಗತ್ಯ ಬೆಲೆ ಕಾಯ್ದೆ ತಿದ್ದುಪಡಿ, ಕಾರ್ಮಿಕ ಕಾನೂನು ತಿದ್ದುಪಡಿ, ಸೇರಿದಂತೆ ರೈತ ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಕೂಡಲೇ ಕೈ ಬಿಟ್ಟು ರೈತ ಪರವಾಗಿ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.
ಕಾರ್ಮಿಕ ಮುಖಂಡ ಶಾಂತಣ್ಣ ಸಜ್ಜನ, ಬಾಲು ರಾಠೋಡ ಮಾತನಾಡಿದರು. ಇದೇ ೨೦ ರಿಂದ ಹಳ್ಳಿಗಳಲ್ಲಿ ಪ್ರಚಾರಾಂದೋಲನ ನಡೆಸಲಾಗುತ್ತದೆ ಎಂದರು.
ರೈತ ಮುಖಂಡ ರವೀಂದ್ರ ಹೊನವಾಡ, ಪುರಸಭೆ ಸದಸ್ಯ ಮುರ್ತುಜಾ ಡಾಲಾಯತ್, ಗಣೇಶ ರಾಠೋಡ, ಶಾಖಾ ಕಾರ್ಯದರ್ಶಿ ಮೆಹಬೂಬ್ ಹವಾಲ್ದಾರ್, ಚಂದ್ರ ರಾಠೋಡ ಸೇರಿದಂತೆ ರೈತ ಕಾರ್ಮಿಕರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.