ಗೋಕಾಕ್ ನಲ್ಲಿ ಮೊಳಗಿದ ಪ್ರಜಾಧ್ವನಿ ಸಮಾವೇಶ

ಗೋಕಾಕ್: ಹಿಂದುಳಿದ ಸಮುದಾಯದ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಪಕ್ಷ ಎರಡನೇ ಬಾರಿಗೆ ಮುಖ್ಯಮಂತ್ರಿಯನ್ನಾಗಿ ಮಾಡಿದೆ. ಪೂರ್ಣ ಬಹುಮತದ ಸಿದ್ದರಾಮಯ್ಯ ನೇತೃತ್ವದ ಸರ್ಕಾರವನ್ನು ಕೆಡಗುವುದು ಅಷ್ಟು ಸುಲಭ ಅಲ್ಲ ಗೋಕಾಕ್ ಶಾಸಕರೇ, ಪದೇ ಪದೇ ಲೋಕಸಭಾ ಚುನಾವಣೆ ನಂತರ ಸರಕಾರ ಬೀಳಿಸುವುದಾಗಿ ಹೇಳುತ್ತಿದ್ದೀರಿ. ಸರ್ಕಾರ ಕೆಡವಲು ನಿಮಗೇನು ನೈತಿಕತೆ ಇದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಪ್ರಶ್ನಿಸಿದರು. ಪ್ರಜಾಧ್ವನಿ

ಗೋಕಾಕ್ ನ ವಾಲ್ಮೀಕಿ ಮೈದಾನದಲ್ಲಿ ಮಂಗಳವಾರ ನಡೆದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಸರ್ಕಾರವನ್ನು ಕೆಡವಲು ಮುಂದಾದರೆ ಇಡೀ‌ ಹಿಂದುಳಿದ ವರ್ಗಗಳ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಪ್ರಜಾಧ್ವನಿ

ಕಾಂಗ್ರೆಸ್ ಪಕ್ಷ ಎಂದರೆ ಬದ್ದತೆ, ಎಲ್ಲಾ ಧರ್ಮ, ಜಾತಿ ಸಮುದಾಯದವರಿಗೆ ಮಣೆ ಹಾಕಿದೆ. ಭಾರತದ ಸಂಸ್ಕೃತಿಯನ್ನು ಉಳಿಸುತ್ತಿದ್ದರೆ ಅದು ಕಾಂಗ್ರೆಸ್ ಪಕ್ಷದಿಂದ ಮಾತ್ರ. ಎಲ್ಲಾ ವರ್ಗದವರಿಗೂ ಅಧಿಕಾರ ನೀಡುವ ಪಕ್ಷ ಎಂದು ಹೇಳಿದರು.

ಸಿದ್ದರಾಮಯ್ಯನವರ ನೇತೃತ್ವದಲ್ಲಿ ಐದು ಗ್ಯಾರಂಟಿಗಳನ್ನ ಬಡವರ ಮನೆಗೆ ತಲುಪಿಸುತ್ತಿದ್ದೇವೆ. ಹಿಂದುಳಿದ ವರ್ಗಕ್ಕೆ ಸಿದ್ದರಾಮಯ್ಯ ಕೊಡುಗೆ ಅಪಾರ. ದೇವರಾಜ ಅರಸು ಬಳಿಕ ಅತಿಹೆಚ್ಚು ಬಡವರ ಪರ ಕೆಲಸ ಮಾಡಿವರು ನಮ್ಮ ಸಿಎಂ ಸಿದ್ದರಾಮಯ್ಯನವರು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಇಡೀ‌ ದೇಶದ ಇತಿಹಾಸದಲ್ಲಿ ಕುರುಬ ಸಮುದಾಯದ‌ ವ್ಯಕ್ತಿ ಯನ್ನು ಎರಡನೇ ಬಾರಿಗೆ ಸಿಎಂ ಮಾಡಿದ್ದು ಕಾಂಗ್ರೆಸ್ ಪಕ್ಷ. ಅದರೆ, ಇದ್ದ ಒಬ್ಬ ಕುರುಬ ಸಮಾಜದ ನಾಯಕನನ್ನು ಬಿಜೆಪಿಯಿಂದ ಹೊರಹಾಕಲಾಗಿದೆ ಎಂದು ಟೀಕಿಸಿದರು. ಪ್ರಜಾಧ್ವನಿ

ಬಿಜೆಪಿ‌ ಅಭ್ಯರ್ಥಿ ಜಗದೀಶ್ ಶೆಟ್ಟರ್, ಬೆಳಗಾವಿ ಬಗ್ಗೆ ತಾತ್ಸರ ಮನೋಭಾವ ಹೊಂದಿರುವ ವ್ಯಕ್ತಿ. ಜಿಲ್ಲೆಯ ಜನರ ಕಷ್ಟ ಕಾಲದಲ್ಲಿ ಬರದ ಮೋದಿ ಚುನಾವಣೆ ವೇಳೆ ಮತ ಕೇಳಲು ಬರುತ್ತಾರೆ. ಜಿಲ್ಲೆಯ ಅಭಿವೃದ್ಧಿ ಬಗ್ಗೆ ಮಾತಾನಾಡುವ ನೈತಿಕ ಹಕ್ಕಿದೆಯೇ ಎಂದು ಸಚಿವೆ‌ ಪ್ರಶ್ನಿಸಿದರು.‌

ಇದನ್ನು ಓದಿ : ಉತ್ತರಾಖಂಡ ಬಿಜೆಪಿ ಸರ್ಕಾರದೀಂದ ಪತಂಜಲಿ ಉತ್ಪನ್ನಗಳ ಪರವಾನಿಗಿ ರದ್ದು

ಕಾಂಗ್ರೆಸ್ ಅಭ್ಯರ್ಥಿ ಇಂಜಿನಿಯರಿಂಗ್ ಪದವಿಧರ , ಸುಸಂಸ್ಕೃತ ವ್ಯಕ್ತಿ. ನಾನು ನನ್ನ ಕ್ಷೇತ್ರ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಹಗಲಿರುಳು ದುಡಿಯುತ್ತಿರುವೆ. ನನಗೆ ನನ್ನ ಮಗ ಮೃಣಾಲ್‌ ಹೆಬ್ಬಾಳಕರ್ ಬೆಂಬಲವಾಗಿ ನಿಂತಿದ್ದಾನೆ. ನನ್ನ ಮಗ ಗೆದ್ದರೆ ಬೆಳಗಾವಿ ಕ್ಷೇತ್ರದ ಅಭಿವೃದ್ಧಿಗೆ ಧಾರೆ ಎರೆದುಕೊಡುವೆ. ತಾಯಿಯಾಗಿ ಮಗನ ಪರ ಸೆರಗೊಡ್ಡಿ ಮತಕೇಳುವೆ ಎಂದರು.

ಬಿಜೆಪಿಯವರು ಅಧಿಕಾರಕ್ಕೆ ಬಂದರೆ ಮೀಸಲಾತಿಗೆ ಕಂಟಕ. ಒಂದು ಅವಕಾಶವನ್ನು ಕಾಂಗ್ರೆಸ್ ಪಕ್ಷಕ್ಕೆ ಕೊಡಿ. ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಹುಬ್ಬಳ್ಳಿ ಯಿಂದ ಬಂದಿದ್ದಾರೆ. ಹುಬ್ಬಳ್ಳಿ ಜನ ಅವ್ರನ್ನ ತಿರಸ್ಕಾರ ಮಾಡಿದ್ದಾರೆ, ನಾವೇಗೆ ಅವ್ರನ್ನ ಪುರಸ್ಕರಿಸೋದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಶೆಟ್ಟರ್ ಸೋತರೂ ಕಾಂಗ್ರೆಸ್ ಅವರನ್ನು ಎಂಎಲ್ಸಿ ಮಾಡಿತ್ತು. ಆದರೂ ಶೆಟ್ಟರ್ ನಿಷ್ಠೆ ಬದಲಿಸಿದರು. ಮೊನ್ನೆ ಹುಬ್ಬಳ್ಳಿಯಲ್ಲಿ ಒಂದು ಘಟನೆ ನಡೀತು. ಸರ್ಕಾರ ತನಿಖೆಗೆ ಆದೇಶಿಸಿದರೂ ಬಿಜೆಪಿಗರು ರಾಜಕೀಯವಾಗಿ ಬಳಸಿಕೊಂಡರು. ಆದರೆ, ಪ್ರಜ್ವಲ್ ರೇವಣ್ಣ ವಿಷಯದಲ್ಲಿ ಏನೂ ಮಾಡ್ತಿಲ್ಲ ಯಾಕೆ? ಪ್ರಜ್ವಲ್ ವಿಷಯದಲ್ಲಿ ನಿಮ್ಮ ಬದ್ಧತೆ ಎಲ್ಲಿ ಹೋಯ್ತು. ನಾಗರೀಕ ಸಮಾಜ ತಲೆ ತಗ್ಗಿಸುವಂಥ ಕೆಲಸ ಮಾಡಿರುವ ಪ್ರಜ್ವಲ್ ಬಗ್ಗೆ ಮೈತ್ರಿ ನಾಯಕರು ತುಟಿ ಬಿಚ್ಚುತ್ತಿಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕಿಡಿಕಾರಿದರು. ಪ್ರಜಾಧ್ವನಿ

ನಮ್ಮ ಜಿಲ್ಲೆಗೆ ನಿಮ್ಮ ಕೊಡುಗೆ ಏನು ಶೆಟ್ಟರ್ ಅವ್ರೆ, ಐಐಟಿ, ಹೈಕೋರ್ಟ್ ಅನ್ನು ಹುಬ್ಬಳ್ಳಿಗೆ ಕೊಂಡೊಯ್ದರು, ಕರೋನಾ ವೇಳೆ ಆಕ್ಸಿಜನ್ ಸಿಲಿಂಡರ್ ಗಳನ್ನು ಹುಬ್ಬಳ್ಳಿಗೆ ಸ್ಥಳಾಂತರಿಸಿದರು. ಕೇಂದ್ರ ಸಚಿವರೂ, ಶೆಟ್ಟರ್ ಅವರ ಬಿಗರೂ ಆದಂತಹ ಸುರೇಶ್ ಅಂಗಡಿ ಸತ್ತಾಗ ಅವ್ರ ಪಾರ್ಥಿವ ಶರೀರವನ್ನು ಶೆಟ್ಟರ್ ಅವರು ದೆಹಲಿಯಿಂದ ಬೆಳಗಾವಿಗೆ ತರೋಕೆ ಆಗಲಿಲ್ಲ. ಹೇಗೆ ಬೆಳಗಾವಿ ಉದ್ದಾರ ಮಾಡ್ತೀರಾ? ಎಂದು ಪ್ರಶ್ನಿಸಿದರು.

ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ, ಸಚಿವ ಡಾ.ಎಂ.ಸಿ.ಸುಧಾಕರ್, ಮಾಜಿ ಉಪ ಮುಖ್ಯಮಂತ್ರಿ ಹಾಗೂ ಶಾಸಕರಾದ ಲಕ್ಷ್ಮಣ್ ಸವದಿ, ಭದ್ರಾವತಿ ಶಾಸಕರಾದ ಬಿ.ಕೆ.ಸಂಗಮೇಶ್, ಪುಟ್ಟ ರಂಗಶೆಟ್ಟಿ, ರಾಜು ಸೇಠ್, ನಯನಾ ಮೋಟಮ್ಮ, ಕೇರಳ ಶಾಸಕ ರೋಜಿ ಜಾನ್, ವಿಧಾನ ಪರಿಷತ್ ಸದಸ್ಯರಾದ ನಾಗರಾಜ್ ಯಾದವ್, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಪಲ್ಲವಿ ಜಿ, ಭೋವಿ ನಿಗಮದ ಅಧ್ಯಕ್ಷರಾದ ಪ್ರವೀಣ್ ಕುಮಾರ್, ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ್ ನಾವಲಗಟ್ಟಿ, ಮುಖಂಡರಾದ ಡಾ.ಮಹಾಂತೇಶ್ ಕಡಾಡಿ, ಮೋಹನ್ ಲಿಂಬಿಕಾಯಿ, ಅಶೋಕ್ ಪೂಜಾರಿ, ಸಿದ್ದಲಿಂಗ ದಳವಾಯಿ, ಅರವಿಂದ ದಳವಾಯಿ, ಚಂದ್ರಶೇಖರ್ ಕೊಣ್ಣೂರ, ಲಕ್ಕಣ್ಣ ಸವಸುದ್ದಿ, ಪ್ರೇಮಾ ಚಿಕ್ಕೋಡಿ, ಬಸವನಗೌಡ ಹೊಳಿಯಾಚೆ, ಪ್ರಕಾಶ್ ಢಾಗೆ, ಜಾರಿಕ್ ನದಾಫ್, ಗಂಗಾಧರ ಬಡಕುಂದ್ರಿ, ಭೀಮಪ್ಪ ಹಂದಿಗುಂದ್, ರಮೇಶ್ ಉಟಗಿ, ಸುರೇಶ್ ಅರಳಿ, ಲಗಮಣ್ಣ ಕಳಸನ್ನವರ್ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು. ಪ್ರಜಾಧ್ವನಿ

ಇದನ್ನು ನೋಡಿ : ಏನಯ್ಯಾ ಏನೀ ದರ್ಬಾರು? ಆ ದಿಲ್ಲಿ ದೊರೆಯ ದೌಲತ್‌ನಲ್ಲಿ ಹೇಳಿದ್ದೇಳಲ್ಲ ಸುಳ್ಳುಗಳೆ ನೋಡು Janashakthi Media

Donate Janashakthi Media

Leave a Reply

Your email address will not be published. Required fields are marked *