ನವದೆಹಲಿ: ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಬಿಜೆಪಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ‘ಪ್ರಧಾನ ಮಂತ್ರಿ ಜನ್ ಧನ್ ಲೂಟಿ ಯೋಜನೆ’ ಎಂದು ಆರೋಪಿಸಿದ್ದಾರೆ.
ಇದನ್ನು ಓದಿ: ರಾಜ್ಯದ ಜನರಿಗೆ ಬೆಲೆ ಏರಿಕೆ ಬಿಸಿ: ವಿದ್ಯುತ್ ದರ ಮತ್ತಷ್ಟು ಹೆಚ್ಚಳ
ಟ್ವಿಟರ್ ನಲ್ಲಿ, ರಾಹುಲ್ ಗಾಂಧಿ ಬೈಕ್, ಕಾರು, ಟ್ರ್ಯಾಕ್ಟರ್ ಮತ್ತು ಟ್ರಕ್ ಗಳಿಗೆ ಯುಪಿಎ ಸರ್ಕಾರದ ಹಾಗೂ ಈಗಿನ ಬಿಜೆಪಿ ಸರ್ಕಾರದ ಆಡಳಿತದಲ್ಲಿ ಇಂಧನ ಬೆಲೆ ಹೋಲಿಕೆ ಮಾಡಿದ್ದಾರೆ. 2014 ರಲ್ಲಿದ್ದ ಇಂಧನದ ಟ್ಯಾಂಕ್‌ನ ಪ್ರಸ್ತುತ ವೆಚ್ಚವನ್ನು ಹೋಲಿಸುವ ಚಿತ್ರವನ್ನು ಹಂಚಿಕೊಂಡು, “ಪ್ರಧಾನ ಮಂತ್ರಿ ಜನ್ ಧನ್ ಲೂಟ್ ಯೋಜನೆʼʼ ಎಂದು ಟ್ವೀಟ್ ಮಾಡಿದ್ದಾರೆ.
ಈ ಮೂಲಕ ಇಂಧನ ಬೆಲೆಗೆ ಸಂಬಂಧಿಸಿದಂತೆ ಬಿಜೆಪಿ ಸರ್ಕಾರದ ಜನ ವಿರೋಧಿ ನೀತಿಯನ್ನು ರಾಹುಲ್ ಗಾಂಧಿ ಟೀಕಿಸಿದ್ದಾರೆ.
Pradhan Mantri Jan Dhan LOOT Yojana pic.twitter.com/OQPiV4wXTq
— Rahul Gandhi (@RahulGandhi) April 4, 2022
ಫುಲ್ ಟ್ಯಾಂಕ್ ಇಂಧನದ ವೆಚ್ಚ (ಮೇ 2014 vs ಈಗಿನ ಬೆಲೆ):
ಸ್ಕೂಟರ್/ಬೈಕ್:
2014: ₹714
ಈಗಿನ ಬೆಲೆ: ₹1038
ವ್ಯತ್ಯಾಸ: ₹324 ಏರಿಕೆ
ಕಾರು:
2014: ₹2856
ಈಗಿನ ಬೆಲೆ: ₹4152
ವ್ಯತ್ಯಾಸ: ₹1296 ಏರಿಕೆ
ಟ್ರ್ಯಾಕ್ಟರ್:
2014: ₹2749
ಈಗಿನ ಬೆಲೆ: ₹4563
ವ್ಯತ್ಯಾಸ: ₹1814 ಏರಿಕೆ
ಟ್ರಕ್:
2014: ₹11456
ಈಗಿನ ಬೆಲೆ: ₹19014
ವ್ಯತ್ಯಾಸ: ₹7558 ಏರಿಕೆ
ಕಚ್ಚಾ ತೈಲ ಬೆಲೆ:
ಮೇ 26, 2014: 108.05 ಅಮೆರಿಕನ್ ಡಾಲರ್
ಏಪ್ರಿಲ್ 04, 2022: 99.42 ಅಮೆರಿಕನ್ ಡಾಲರ್
ಸೋಮವಾರ ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ 40 ಪೈಸೆ ಏರಿಕೆಯೊಂದಿಗೆ ಕಳೆದ ಎರಡು ವಾರಗಳಲ್ಲಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಒಟ್ಟು ರೂ. 8.40 ಪೈಸೆಯಷ್ಟು ಹೆಚ್ಚಳವಾಗಿದೆ.
ಇದನ್ನು ಓದಿ: ಇಂದಿನಿಂದ ಎಲ್ಲವೂ ದುಬಾರಿ! ಆಹಾರ-ಆರೋಗ್ಯ-ದಿನಬಳಕೆಯ ಎಲ್ಲದರ ಬೆಲೆಗಳು ಏರಿಕೆ!!
ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲಾ ಟ್ವೀಟ್ ಮಾಡಿದ್ದು, ಮೋದಿ ಸರ್ಕಾರ ಪ್ರತಿದಿನ ಬೆಳಿಗ್ಗೆ ಉತ್ಸಾಹಕ್ಕಿಂತ ಹಣದುಬ್ಬರದ ದುಃಖವನ್ನು ತರುತ್ತದೆ. ಇಂದು ಹೊಸ ಕಂತಿನ ಇಂಧನ ಲೂಟಿ, ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಬೆಳಿಗ್ಗೆ 0.40/ಲೀ ಹೆಚ್ಚಿಸಲಾಗಿದೆ” ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.