ನ್ಯೂಸ್‌ಕ್ಲಿಕ್‌ ಸಂಸ್ಥಾಪಕ ಪ್ರಬೀರ್‌ ಪುರಕಾಯಸ್ಥರನ್ನು ತಕ್ಷಣ ಬಿಡುಗಡೆ ಮಾಡಿ – ಸುಪ್ರೀಂ ಕೋರ್ಟ್‌ ಆದೇಶ

ನವದೆಹಲಿ : ಯುಎಪಿಎ ಪ್ರಕರಣದಲ್ಲಿ ಬಂಧಿತರಾಗಿರುವ ನ್ಯೂಸ್‌ಕ್ಲಿಕ್‌ ಸ್ಥಾಪಕ ಪ್ರಬೀರ್‌ ಪುರ್ಕಾಯಸ್ಥ ಅವರನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಸುಪ್ರೀಂ ಕೋರ್ಟ್‌ ಇಂದು ಆದೇಶಿಸಿದೆ. ಪುರ್ಕಾಯಸ್ಥ ಅವರ ಬಂಧನ ಹಾಗೂ ಅವರ ರಿಮಾಂಡ್‌ ಅಮಾನ್ಯವಾಗಿದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ನ್ಯೂಸ್‌ಕ್ಲಿಕ್‌

ನ್ಯಾಯಮೂರ್ತಿಗಳಾದ ಬಿಆರ್‌ ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ಪೀಠವು ಪುರಕಾಯಸ್ಥ ಅವರನ್ನು ಶ್ಯೂರಿಟಿ ಮತ್ತು ಜಾಮೀನು ಬಾಂಡ್ ಒದಗಿಸುವ ಅಡಿಯಲ್ಲಿ ಬಿಡುಗಡೆ ಮಾಡುವಂತೆ ಆದೇಶಿಸಿತು.

ರಿಮಾಂಡ್ ಅರ್ಜಿಯ ಪ್ರತಿಯನ್ನು ಪುರ್ಕಾಯಸ್ಥ ಅವರಿಗೆ ನೀಡದಿರುವ ಮೂಲಕ ನೈಸರ್ಗಿಕ ನ್ಯಾಯದ ತತ್ವಗಳನ್ನು ಉಲ್ಲಂಘಿಸಿರುವುದನ್ನು ಗಮನಿಸಿದ ನ್ಯಾಯಾಲಯವು ಈ ಆದೇಶವನ್ನು ನೀಡಿದೆ.”ಅಪೀಲುದಾರರಿಗೆ ರಿಮಾಂಡ್ ಅರ್ಜಿಯ ಪ್ರತಿಯನ್ನು ನೀಡಲಾಗಿಲ್ಲ. ಇದು ಪಂಕಜ್ ಬನ್ಸಾಲ್ ಪ್ರಕರಣದ ನಂತರ ಮೇಲ್ಮನವಿದಾರನ ಬಂಧನವನ್ನು ದುರ್ಬಲಗೊಳಿಸುತ್ತದೆ” ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪ್ರಕರಣದಲ್ಲಿ ಆರೋಪಪಟ್ಟಿ ಸಲ್ಲಿಕೆಯಾಗಿರುವುದರಿಂದ ಶ್ಯೂರಿಟಿ ಮತ್ತು ಜಾಮೀನು ಬಾಂಡ್ ಸಲ್ಲಿಸಿದ ಮೇಲೆ ಮಾತ್ರ ಪುರ್ಕಾಯುಸ್ತನನ್ನು ಬಿಡುಗಡೆ ಮಾಡಬಹುದು ಎಂದು ಕೋರ್ಟ್ ಹೇಳಿದೆ. ಇಲ್ಲದಿದ್ದರೆ, ಶ್ಯೂರಿಟಿ ಇಲ್ಲದೆ ಬಿಡುಗಡೆ ಮಾಡಬಹುದಿತ್ತು ಎಂದು ನ್ಯಾಯಾಲಯ ಹೇಳಿದೆ. ನ್ಯೂಸ್‌ಕ್ಲಿಕ್‌

ಇದನ್ನೂ ಓದಿಆರೋಪಗಳು ಬೋಗಸ್: ಎಫ್‌ಐಆರ್ ಬಗ್ಗೆ ನ್ಯೂಸ್‌ಕ್ಲಿಕ್

ದಿಲ್ಲಿ ಪೊಲೀಸರ ವಿಶೇಷ ಸೆಲ್‌ ಪ್ರಬೀರ್‌ ಮತ್ತು ನ್ಯೂಸ್‌ಕ್ಲಿಕ್‌ ಎಚ್‌ಆರ್‌ ಮುಖ್ಯಸ್ಥ ಅಮಿತ್‌ ಚಕ್ರವರ್ತಿ ಅವರನ್ನು ಕಳೆದ ವರ್ಷದ ಅಕ್ಟೋಬರ್‌ 3ರಂದು ಬಂಧಿಸಿತ್ತು. ಸುದ್ದಿ ಸಂಸ್ಥೆಗೆ ಹೆಚ್ಚಿನ ಹಣ ಚೀನಾದಿಂದ ಬರುತ್ತಿದೆ ಎಂದು ಬೋಗಸ್‌ ಆರೋಪವನ್ನು ಮಾಡಲಾಗಿತ್ತು. ಪ್ರಮುಖವಾಗಿ ರೈತರ ಹೋರಾಟ ಹಾಗೂ ಕೋವಿಡ್‌ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ವಿರುದ್ದ ಹಾಗೂ ಅದರ ವೈಫಲ್ಯಗಳನ್ನು ಬಿತ್ತರಿಸಿತು. ಹಾಗಾಗಿ ನ್ಯೂಸ್‌ಕ್ಲಿಕ್‌ ಮೇಲೆ ದಾಳಿ ನಡೆದಿತ್ತು.

ಎಫ್ಐಆರ್ನಲ್ಲಿನ ಆರೋಪಗಳು, ಮೇಲ್ನೋಟಕ್ಕೆ ಅಸಮರ್ಥನೀಯ ಮತ್ತು ಬೋಗಸ್ ಮಾತ್ರವಲ್ಲ, ಈಗಾಗಲೇ ಮೂರು ಸರ್ಕಾರಿ ಏಜೆನ್ಸಿಗಳುಜಾರಿ ನಿರ್ದೇಶನಾಲಯ, ಆರ್ಥಿಕ ಅಪರಾಧ ವಿಭಾಗ, ದೆಹಲಿ ಪೊಲೀಸ್ ಮತ್ತು ಆದಾಯ ತೆರಿಗೆ ಇಲಾಖೆಗಳ ತನಿಖೆಯಲ್ಲಿ ಪದೇ ಪದೇ ಮಾಡಿರುವವುಗಳೇ ಆಗಿವೆ.

ಸಂಬಂಧ ದಿಲ್ಲಿಯ 88 ಕಡೆ ಹಾಗೂ ಇತರ ರಾಜ್ಯಗಳ ಏಳು ಕಡೆ ಅಕ್ಟೋಬರ್‌ 3ರಂದು ದಾಳಿಗಳು ನಡೆದಿತ್ತು, ಸುಮಾರು 300 ಎಲೆಕ್ಟ್ರಾನಿಕ್ಸಾಧನಗಳನ್ನು ನ್ಯೂಸ್ಕ್ಲಿಕ್ಕಚೇರಿಗಳಿಂದ ಹಾಗೂ ಪತ್ರಕರ್ತರ ನಿವಾಸಗಳಿಂದ ವಶಪಡಿಸಿಕೊಳ್ಳಲಾಗಿತ್ತು. ಪ್ರಕರಣ ಸಂಬಂಧ ಒಂಬತ್ತು ಪತ್ರಕರ್ತೆಯರ ಸಹಿತ 46 ಮಂದಿಯನ್ನು ಪ್ರಶ್ನಿಸಲಾಗಿತ್ತು. ನ್ಯೂಸ್‌ಕ್ಲಿಕ್‌

 

Donate Janashakthi Media

Leave a Reply

Your email address will not be published. Required fields are marked *