ಬೆಂಗಳೂರು: ಸುಳ್ಳು ಆರೋಪದ ಮೂಲಕ ನಮ್ಮನ್ನು ರಾಜಕೀಯವಾಗಿ ಮಣಿಸುವಂತಹ ಪ್ರಕರಣಗಳು ಬಹಳಷ್ಟು ನಡೆದಿವೆ. ಆಗ ನಮಗೆ ನ್ಯಾಯಾಲಯದಿಂದ ನ್ಯಾಯ ಸಿಕ್ಕಿದೆ. ಈ ಸುಳ್ಳು ಆರೋಪದಿಂದ ತಂದೆ ಯಡಿಯೂರಪ್ಪ ಮುಕ್ತರಾಗುತ್ತಾರೆ ಬಿಎಸ್ವೈ ಪುತ್ರ ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ. ರಾಜಕೀಯ
ಬಿ.ವೈ.ರಾಘವೇಂದ್ರ, ದುರುದ್ದೇಶದಿಂದ ಆ ಮಹಿಳೆ ದೂರು ಕೊಟ್ಟು ಮುಜುಗರ ಉಂಟು ಮಾಡಿದ್ದಾರೆ ಇಡೀ ಕುಟುಂಬಕ್ಕೆ ಹಾಗೂ ಕಾರ್ಯಕರ್ತರಿಗೆ ಬಹಳ ನೋವುಂಟಾಗಿದೆ. ಆದರೆ ನ್ಯಾಯಾಲಯದ ಮೇಲೆ ನಮಗೆ ವಿಶ್ವಾಸ ಇದೆ. ಜಾಮೀನು ದೊರೆತಿದೆ. ಜೀವನ ಪೂರ್ತಿ ಹೋರಾಟದ ಮೂಲಕ ಈ ನಾಡಿಗೆ ನ್ಯಾಯ ಕೊಟ್ಟವರು. ದಕ್ಷಿಣ ಭಾರತದದಲ್ಲಿ ಬಿಜೆಪಿ ಭದ್ರಕೋಟೆಯಾಗಿ ಕರ್ನಾಟಕ ಇದೆ. ಹೀಗಾಗಿ ಬಿಎಸ್ ವೈ ವಿರುದ್ಧ ಕಾಣದ ಕೈಗಳು ಈ ರೀತಿ ಮಾಡುತ್ತವೆ. ರುವ ದಿನಗಳಲ್ಲಿ ಸತ್ಯಾಸತ್ಯತೆಯನ್ನು ನ್ಯಾಯಾಲಯಕ್ಕೆ ನಮ್ಮ ವಕೀಲರು ಮನವರಿಕೆ ಮಾಡಿಕೊಡುತ್ತಾರೆ ಎಂದು ಈಗಲೂ ವಿಶ್ವಾಸವಿದೆ ಎಂದರು.
ಇದನ್ನು ಓದಿ : ದಕ್ಷಿಣದ ರಾಜ್ಯಗಳಲ್ಲಿ ಬಿಜೆಪಿಗೆ ಸ್ವಲ್ಪ ಮುನ್ನಡೆ 2 : ಕರ್ನಾಟಕ, ತೆಲಂಗಾಣ, ಆಂಧ್ರ
ಶನಿವಾರ ಮಧ್ಯಾಹ್ನ ದೆಹಲಿಯಿಂದ ಹಿಂದಿರುಗತ್ತಿರುವ ಮಾಜಿ ಸಿಎಂ ಯಡಿಯೂರಪ್ಪರನ್ನು ತಮ್ಮೊಂದಿಗೆ ಕರೆತರಲು ವಿಮಾನ ನಿಲ್ದಾಣಕ್ಕೆ ಬಿ.ವೈ.ರಾಘವೇಂದ್ರ ತೆರಳುವ ಮಧ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜಕೀಯ
ಫೊಕ್ಸೋ ಕಾಯಿದೆ ಅಡಿಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ನಿನ್ನೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪಗೆ ಸದ್ಯಕ್ಕೆ ಬಂಧಿಸದಂತೆ ನ್ಯಾಯಾಲಯ ಮಧ್ಯಂತರ ಆದೇಶ ನೀಡಿದೆ. ಪೋಕ್ಸೋ ಪ್ರಕರಣ ಎಫ್‌ಐಆರ್ ದಾಖಲು ಬಳಿಕ ದೆಹಲಿಯಅಜ್ಞಾತ ಸ್ಥಳಕ್ಕೆ ಯಡಿಯೂರಪ್ಪ ತೆರಳಿದ್ದರು.
ಇದನ್ನು ನೋಡಿ : ಹಿಂದಿ ರಾಜ್ಯಗಳಲ್ಲಿ ಬಿಜೆಪಿಗೆ ಭಾರೀ ಹಿನ್ನಡೆ : ಸೀಟು ಮತಗಳಿಕೆ ಕುಸಿದ 5 ರಾಜ್ಯಗಳುJanashakthi Media