ಚುನಾವಣಾ ಬಾಂಡ್ : ಉದ್ದೇಶ ಒಳ್ಳೆಯದಾಗಿದೆ: ‘ಹಣವಿಲ್ಲದೆ ಯಾವುದೇ ರಾಜಕೀಯ ಪಕ್ಷ ನಡೆಸಲು ಸಾಧ್ಯವಿಲ್ಲ – ನಿತಿನ್ ಗಡ್ಕರಿ

ಅಹಮದಾಬಾದ್: ಚುನಾವಣಾ ಬಾಂಡ್ ಯೋಜನೆಯನ್ನು ಉತ್ತಮ ಉದ್ದೇಶದಿಂದ ಜಾರಿಗೆ ತರಲಾಗಿತ್ತು ಯಾಕೆಂದರೆ, ನಿಧಿ ಇಲ್ಲದೆ ರಾಜಕೀಯ ಪಕ್ಷವೊಂದನ್ನು ನಡೆಸಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಕೇಂದ್ರ ಸಚಿವ ನಿತಿನ್ ಗಡ್ಕರಿ ಚುನಾವಣಾ ಬಾಂಡ್‌ ಭ್ರಷ್ಟಾಚಾರವನ್ನು ಸಮರ್ಥಿಸಿಕೊಂಡಿದ್ದಾರೆ. ಚುನಾವಣಾ ಬಾಂಡ್

ಶುಕ್ರವಾರ ಗಾಂಧಿನಗರದಲ್ಲಿ ಮಾಧ್ಯಮ ಸಂಸ್ಥೆಯೊಂದು ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ಚುನಾವಣಾ ಬಾಂಡ್‌ ವಿಷಯದಲ್ಲಿ ಸುಪ್ರೀಂ ಕೋರ್ಟ್ ಏನಾದರೂ ಮತ್ತಷ್ಟು ನಿರ್ದೇಶನ ನೀಡಿದರೆ ಎಲ್ಲ ರಾಜಕೀಯ ಪಕ್ಷಗಳೂ ಒಟ್ಟುಗೂಡಿ ಈ ಕುರಿತು ಚಿಂತನೆ ನಡೆಸಬೇಕಿದೆ.  “ಅರುಣ್ ಜೇಟ್ಲಿ ಕೇಂದ್ರ ಹಣಕಾಸು ಸಚಿವರಾಗಿದ್ದಾಗ ಚುನಾವಣಾ ಬಾಂಡ್ ಕುರಿತ ಚರ್ಚೆಯಲ್ಲಿ ನಾನೂ ಭಾಗಿಯಾಗಿದ್ದೆ. ಸಂಪನ್ಮೂಲವಿಲ್ಲದೆ ಯಾವ ರಾಜಕೀಯ ಪಕ್ಷವೂ ಬದುಕುಳಿಯಲು ಸಾಧ್ಯವಿಲ್ಲ. ಕೆಲವು ದೇಶಗಳಲ್ಲಿ ಸರಕಾರಗಳೇ ರಾಜಕೀಯ ಪಕ್ಷಗಳಿಗೆ ನಿಧಿ ಒದಗಿಸುತ್ತವೆ. ಅಂತಹ ವ್ಯವಸ್ಥೆ ಭಾರತದಲ್ಲಿಲ್ಲ. ಹೀಗಾಗಿ, ನಾವು ರಾಜಕೀಯ ಪಕ್ಷಗಳಿಗೆ ನಿಧಿ ಒದಗಿಸುವ ವ್ಯವಸ್ಥೆಯನ್ನು ಆಯ್ದುಕೊಂಡಿದ್ದೇವೆ” ಎಂದರು.

ಇದನ್ನೂ ಓದಿಚುನಾವಣಾ ಬಾಂಡ್‌ ಬಹಿರಂಗ : ಮೋದಿ ಸರ್ಕಾರದ ದೊಡ್ಡಹಗರಣ ಬಯಲಿಗೆ

ಚುನಾವಣಾ ಬಾಂಡ್ ಗಳನ್ನು ಪರಿಚಯಿಸುವುದರ ಹಿಂದಿನ ಮುಖ್ಯ ಉದ್ದೇಶ ರಾಜಕೀಯ ಪಕ್ಷಗಳು ನೇರವಾಗಿ ದೇಣಿಗೆ ಪಡೆಯಲಿ ಎಂಬುದಾಗಿತ್ತು. ಆದರೆ, ಸರಕಾರಗಳು ಬದಲಾದಾಗ ದೇಣಿಗೆದಾರರಿಗೆ ತೊಂದರೆ ಆಗದಿರಲೆಂದು ಅವರ ಹೆಸರನ್ನು ಬಹಿರಂಗಗೊಳಿಸದಿರಲು ನಿರ್ಧರಿಸಲಾಗಿತ್ತು ಎಂದರು.

ಕಳೆದ ತಿಂಗಳು ಮಹತ್ವದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ , ಏಪ್ರಿಲ್ -ಮೇ ಲೋಕಸಭೆ ಚುನಾವಣೆಗೆ ಮುನ್ನ ಚುನಾವಣಾ ಬಾಂಡ್‌ಗಳ ಯೋಜನೆಯನ್ನು ರದ್ದುಗೊಳಿಸಿತು.ಈ ಯೋಜನೆಯು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಸಾಂವಿಧಾನಿಕ ಹಕ್ಕು ಮತ್ತು ಮಾಹಿತಿಯ ಹಕ್ಕನ್ನು ಉಲ್ಲಂಸುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ಯೋಜನೆಯನ್ನು ರದ್ದುಗೊಳಿಸುವಂತೆ, 2019 ರಲ್ಲಿ ಆಸೋಸಿಷಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ (ಎಡಿಆರ್) ಮತ್ತು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಅರ್ಜಿ ಸಲ್ಲಿಸಿದ್ದವು.

ವಿಡಿಯೋ ನೀಡಿಚುನಾವಣಾ (ಮೋದಿ)ಬಾಂಡ್ ಎನ್ನುವ ‘ಹಫ್ತಾ ವಸೂಲಿ’ಯ ಹಿಂದೆ, ಇಂದು, ಮುಂದು… Janashakthi Media

 

Donate Janashakthi Media

Leave a Reply

Your email address will not be published. Required fields are marked *