ಸಂವಿಧಾನದ ಉಳಿವಿಗಾಗಿ ರಾಜೀನಾಮೆ ನೀಡಿದ ಪೊಲೀಸ್ ಅಧಿಕಾರಿ

ಬೆಂಗಳೂರು: ಕರ್ನಾಟಕ ಪೊಲೀಸ್‌ನ ಇಂಡಸ್ಟ್ರಿಯಲ್‌ ಸೆಕ್ಯೂರಿಟಿ ವಿಂಗ್‌ನ ಅಸಿಸ್ಟೆಂಟ್ ಕಮಾಂಡಂಟ್ ಆಗಿದ್ದ ಸುಹೇಲ್ ರವರು ಸಂವಿಧಾನ ಉಳಿವಿಗಾಗಿ ಎಂದು ಹೇಳಿ (ನ.26) ಸಂವಿಧಾನ ದಿನದಂದೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಈ ಕುರಿತು ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರಿಗೆ (ಆಡಳತ ವಿಭಾಗ) ಪತ್ರ ಬರೆದಿದ್ದಾರೆ.

ಡಿವೈಎಸ್ಪಿ ರ್ಯಾಂಕಿನ ಅಧಿಕಾರಿಯಾದ ಸುಹೇಲ್ ಅಹಮದ್  ರವರು ಮೈಸೂರು ಜಿಲ್ಲೆಯ ಹುಣಸೂರಿನವರು. ಸದ್ಯ ರಿಸರ್ವ್ ಬ್ಯಾಂಕ್ ಆಫ಼್ ಇಂಡಿಯಾದ ಭದ್ರತಾ ವಿಭಾಗದ ಮುಖ್ಯಸ್ಥರಾಗಿದ್ದರು. ಆಂತರಿಕ ಭದ್ರತಾ ವಿಭಾಗದ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ 1ನೇ ಪಡೆಗೆ ಅಸಿಸ್ಟೆಂಟ್​ ಕಮಾಂಡೆಂಟ್​ ಆಗಿದ್ದರು. ಇದೀಗ ಆ ಹುದ್ದೆಗೆ ದೇಶದಲ್ಲಿ ದಮನಿತರು, ದಲಿತರು, ಅಲ್ಪಸಂಖ್ಯಾತರ ಮೇಲಾಗುತ್ತಿರುವ ದಬ್ಬಾಳಿಕೆ ವಿರೋಧಿಸಿ ರಾಜೀನಾಮೆ ನೀಡಿದ್ದಾರೆ.

ಇದನ್ನೂ ಓದಿ: ರೈಲ್ವೆಯ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯೊಳಕ್ಕೆ ಖಾಸಗಿ ವಲಯಕ್ಕೆ ಪ್ರವೇಶದ ಪ್ರಯತ್ನ- ಕೇಂದ್ರೀಯ  ಕಾರ್ಮಿಕ ಸಂಘಟನೆಗಳ ಬಲವಾದ ವಿರೋಧ

ತಮ್ಮ ಫೇಸ್​ಬುಕ್​ ಖಾತೆಯಲ್ಲಿ ರಾಜೀನಾಮೆ ಪತ್ರವನ್ನು ಪೋಸ್ಟ್​ ಮಾಡಿರುವ ಸುಹೇಲ್​ ಅಹಮದ್​​, “ದೇಶದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಸಂವಿಧಾನದ ತತ್ವ ಆಶಯಗಳು ಅಪಾಯದಲ್ಲಿರುವುದರಿಂದ ಸಂವಿಧಾನ ನನಗೆ ಕೊಡುಗೆಯಾಗಿ ನೀಡಿರುವ ಅಸಿಸ್ಟೆಂಟ್ ಕಮಾಂಡೆಂಟ್ ಹುದ್ದೆಗೆ, ದೇಶಕ್ಕೆ ಸಂವಿಧಾನ ಸಮರ್ಪಣೆಯಾದ ಮಹತ್ವದ ದಿನದಂದೇ ಸಂವಿಧಾನದ ಕಾಯಕಲ್ಪ ಸಂಕಲ್ಪದೊಂದಿಗೆ ರಾಜಿನಾಮೆ ಸಲ್ಲಿಸಿದ್ದೇನೆ” ಎಂದು ಬರೆದುಕೊಂಡಿದ್ದಾರೆ.

ರಾಜೀನಾಮೆ ಪತ್ರದಲ್ಲಿ ಏನಿದೆ?

ಸುಹೇಲ್​ ಅಹಮದ್​, ಅಸಿಸ್ಟೆಂಟ್​ ಕಮಾಂಡೆಂಟ್​ ಆದ ನಾನು ದೇಶದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಸಂವಿಧಾನದ ತತ್ವಗಳು ಅಪಾಯದಲ್ಲಿ ಇರುವುದರಿಂದ ಸಂವಿಧಾನ ನನಗೆ ಕೊಡುಗೆಯಾಗಿ ನೀಡಿರುವ ಅಸಿಸ್ಟೆಂಟ್​ ಕಮಾಂಡೆಂಟ್​ ಹುದ್ದೆಯನ್ನು ದೇಶಕ್ಕೆ ಸಂವಿಧಾನ ಸಮರ್ಪಣೆಯಾದ ಈ ಮಹತ್ವದ ದಿನದಂದು ಸಂವಿಧಾನ ಕಾಯಕಲ್ಪ ಸಂಕಲ್ಪದೊಂದಿಗೆ ನನ್ನ ಹುದ್ದೆಯನ್ನು ಸಮರ್ಪಿಸಿ, ನನ್ನ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ ಮತ್ತು ರಾಜೀನಾಮೆ ಪತ್ರವನ್ನು ಅಂಗೀಕರಿಸಬೇಕಾಗಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಪತ್ರದಲ್ಲಿ ಬರೆದಿದ್ದಾರೆ.

ವಿಡಿಯೋ ನೋಡಿ: ಮಹಾಧರಣಿ| ದುಡಿಯುವ ಜನರ ಜೊತೆ ಆಳುವವರ ಚೆಲ್ಲಾಟ Janashakthi Media

Donate Janashakthi Media

Leave a Reply

Your email address will not be published. Required fields are marked *