ಇವಿಎಂ ರಕ್ಷಣೆಗೆ ನಿಯೋಜಿಸಿದ್ದ ಪೊಲೀಸರು ಗೈರು; 8 ಜನರು ಅಮಾನತು

ಹಿಮಾಚಲ ಪ್ರದೇಶ: ಬಿಲಾಸ್ಪುರ್‌ನಲ್ಲಿರುವ ಸರ್ಕಾರಿ ಪದವಿ ಕಾಲೇಜಿನಲ್ಲಿ ಇವಿಎಂ ರಕ್ಷಣೆಗೆ ನಿಯೋಜಿಸಲಾಗಿದ್ದ ಪೊಲೀಸರು, ಅನಿರೀಕ್ಷಿತ ತಪಾಸಣೆಯ ವೇಳೆ ಗೈರಾಗಿದ್ದ ಕಾರಣ 8 ಜನರನ್ನು ಅಮಾನತು ಮಾಡಲಾಗಿದೆ ಎಂದು ಅಧಿಕಾರಿಗಳು ನವೆಂಬರ್‌ 14ರಂದು ತಿಳಿಸಿದ್ದಾರೆ.

ಇವಿಎಂ ಸ್ಟ್ರಾಂಗ್‌ ರೂಮ್‌ಗೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವ ಚೌಧರಿ ಅವರು ಅನಿರೀಕ್ಷಿತ ಭೇಟಿ ನೀಡಿದ ವೇಳೆ, ಪೊಲೀಸರು ಗೈರಾಗಿರುವುದು ಕಂಡು ಬಂದಿದೆ.

ಇದನ್ನೂ ಓದಿ: ಬಿಹಾರ ವಿಧಾನಸಭಾ ಚುನಾವಣೆ: ಎನ್‌ಡಿಎ 190 ಸ್ಥಾನ; ಮಹಾಘಟಬಂಧನ್ 49 ಸ್ಥಾನ ಮುನ್ನಡೆ

‘ಇವಿಎಂ ರಕ್ಷಣೆಯ ವೇಳೆ ಈ ರೀತಿಯ ಘಟನೆ ಜರುಗಿದ್ದು, ಇದು ಗಂಭೀರ ಸುರಕ್ಷತಾ ಲೋಪವಾಗಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ’ ಎಂದು ಶಿವ ಚೌಧರಿ ಹೇಳಿದ್ದಾರೆ.

ಘಟನೆಯಲ್ಲಿ ಇಬ್ಬರು ಹೆಡ್ ಕಾನ್‌ಸ್ಟೆಬಲ್‌ ಹಾಗೂ 6 ಕಾನ್‌ಸ್ಟೆಬಲ್‌ಗಳನ್ನು ಅಮಾನತು ಮಾಡಲಾಗಿದೆ. ಅವರ ವಿರುದ್ಧ ಶಿಸ್ತು ಕ್ರಮವನ್ನು ಜರುಗಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಇದನ್ನೂ ನೋಡಿ: ಬೆಳ್ತಂಗಡಿ| ಮಹಿಳೆಯ ಮನೆ ಮುಟ್ಟುಗೋಲು ಕ್ರಮ ವಾಪಸ್‌ ಪಡೆಯಲು ಮನವಿ Janashakthi Media

Donate Janashakthi Media

Leave a Reply

Your email address will not be published. Required fields are marked *