ಮೈಸೂರು: ಪ್ರಧಾನಿ ನರೇಂದ್ರ ಮೋದಿ ಯಾವ ಭರವಸೆಗಳನ್ನು ಈಡೇರಿಸದೆ ಮೈಸೂರಿಗೆ ಭೇಟಿ ನೀಡುತ್ತಿರುವುದನ್ನು ಖಂಡಿಸಿ ಇಂದು(ಜೂನ್ 19) ಎಡಪಕ್ಷಗಳು, ದಲಿತ, ರೈತ, ಪ್ರಗತಿಪರ ಸಂಘಟನೆಗಳು ಜಂಟಿಯಾಗಿ ಪ್ರತಿಭಟನೆ ನಡೆಸಿದರು.
ಮೈಸೂರನ್ನು ಪ್ಯಾರಿಸ್ ಮಾಡುವುದಾಗಿ ಪ್ರಸ್ತಾಪಿಸಿದ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಏರೀ 8 ವರ್ಷಗಳಾಗಿವೆ. ಸಾಂಸ್ಕೃತಿಕ ನಗರಗೆ ಯಾವ ಕೊಡುಗೆಗಳನ್ನು ನೀಡದೇ ಮತ್ತೊಮ್ಮೆ ಎರಡು ದಿನಗಳ ಪ್ರವಾಸ ಕೈಗೊಂಡಿದ್ದಾರೆ. ಅವರು, ಸಾಂಸ್ಕೃತಿಕ ನಗರಿಯನ್ನು ಪ್ಯಾರಿಸ್ ಮಾದರಿಯ ನಗರ ಮಾಡುವ ನಿಟ್ಟಿನಲ್ಲಿ ಎಷ್ಟು ಹಣ ನೀಡಿದ್ದಾರೆ, ಯಾವ ಯೋಜನೆಗಳನ್ನು ರೂಪಿಸಿದರು ಎಂದು ಪ್ರಕಟಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಇದನ್ನು ಓದಿ: ಮೈಸೂರನ್ನು ಪ್ಯಾರಿಸ್ ಮಾಡುವೆ ಎಂದ ಮೋದಿ ಘೋಷಣೆ 8 ವರ್ಷವಾದರೂ ಈಡೇರಿಲ್ಲ
ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದವರನ್ನು ಪೊಲೀಸರು ಬಂಧಿಸಿದರು. ಪ್ರತಿಭಟನೆಯಲ್ಲಿ ಸಿಪಿಐ(ಎಂ), ಸಿಪಿಐ, ಎಸ್‌ಯುಸಿಐ(ಸಿ) ಪಕ್ಷ ಹಾಗೂ ದಲಿತ, ರೈತ, ಪ್ರಗತಿಪರ ಸಂಘಟನೆಗಳ ಕಾರ್ಯಕರ್ತುರ ಭಾಗವಹಿಸಿದ್ದರು.