ನವದೆಹಲಿ: ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಆಹಾರ ಧಾನ್ಯಗಳನ್ನು ವಿತರಿಸುವ ಪ್ರಧಾನಿ ನರೇಂದ್ರ ಮೋದಿ ಅವರ “ಲೋಗೋ” ಹೊಂದಿರುವ ಲ್ಯಾಮಿನೇಟ್ ಮಾಡಿದ ಚೀಲಗಳಿಗೆ ಟೆಂಡರ್ಗಳನ್ನು ಫ್ಲೋಟ್ ಮಾಡುವಂತೆ ಭಾರತೀಯ ಆಹಾರ ನಿಗಮವು ತನ್ನ ಪ್ರಾದೇಶಿಕ ಕಚೇರಿಗಳಿಗೆ ಪತ್ರ ಬರೆದಿದೆ ಎಂದು ದಿ ಹಿಂದೂ ವರದಿ ಮಾಡಿದೆ. ಇದಕ್ಕಾಗಿ ದೇಶದ ಹಲವು ರಾಜ್ಯಗಳು ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತಿದೆ ಎಂದು ವರದಿ ಹೇಳಿದೆ.ಪಡಿತರ
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (PMGKAY) ಅಡಿಯಲ್ಲಿ ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಕುಟುಂಬಗಳ ಯೋಜನೆಯ ಸುಮಾರು 81.35 ಕೋಟಿ ಫಲಾನುಭವಿಗಳಿಗೆ ಉಚಿತ ಆಹಾರ ಧಾನ್ಯಗಳನ್ನು ಒದಗಿಸಲಾಗುವುದು. ಲೋಕಸಭೆ ಚುನಾವಣೆಗೆ ಮುನ್ನ ಈ ಕ್ರಮ ಕೈಗೊಳ್ಳಲಾಗಿದ್ದು, ಈ ವರ್ಷ ಮೇ ವೇಳೆಗೆ ಚುನಾವಣೆ ನಡೆಯಲಿದೆ.
ಇದನ್ನೂ ಓದಿ:‘ಮಂಡ್ಯ ನೆಲಕ್ಕೆ ಕಿವಿಗೊಟ್ಟು ಆಲಿಸಿದಾಗ…’ – ಹಿರಿಯ ಸಾಹಿತಿ ದೇವನೂರ ಮಹಾದೇವ ಭಾಷಣ
ಸಾಮಾಜಿಕ ಕಾರ್ಯಕರ್ತ ಅಜಯ್ ಬೋಸ್ ಅವರು ಪಡೆದ ಮಾಹಿತಿ ಹಕ್ಕು ಉತ್ತರದ ಪ್ರಕಾರ, “ರಾಜಸ್ಥಾನವೊಂದರಲ್ಲೇ 13.29 ಕೋಟಿ ರೂಪಾಯಿಗಳ ಸಿಂಥೆಟಿಕ್ ಬ್ಯಾಗ್ಗಳನ್ನು ಆರ್ಡರ್ ಮಾಡಲಾಗಿದೆ” ಎಂದು ಹಿಂದೂ ವರದಿ ಹೇಳಿದೆ. ರಾಜಸ್ಥಾನದ ಪೂರೈಕೆಯ ಆರ್ಡರ್ 1.07 ಕೋಟಿ ಸಿಂಥೆಟಿಕ್ ಬ್ಯಾಗ್ಗಳಾಗಿದ್ದು, ಪ್ರತಿ ಚೀಲಕ್ಕೆ 12.375 ರೂ.ಗಳನ್ನು ಅಲ್ಲಿನ ಸರ್ಕಾರ ಖರ್ಚು ಮಾಡುತ್ತಿದೆ. ಇದಕ್ಕಾಗಿ ರಾಜ್ಯ ಸರ್ಕಾರವು ಐದು ಕಂಪನಿಗಳಿಗೆ ಬ್ಯಾಗ್ಗಳ ಟೆಂಡರ್ ನೀಡಿದೆ.
ನಾಗಾಲ್ಯಾಂಡ್ ಒಂದು ಚೀಲಕ್ಕೆ 9.30 ರೂ.ಗೆ ಗುತ್ತಿಗೆ ನೀಡಿದೆ. ಈ ಮಧ್ಯೆ ತಮಿಳುನಾಡು 1.14 ಕೋಟಿ ಚೀಲ ಪೂರೈಕೆಗೆ ಟೆಂಡರ್ ಕರೆದಿದೆ. ಮಹಾರಾಷ್ಟ್ರ ಇನ್ನೂ ಟೆಂಡರ್ ಅನ್ನು ಅಂತಿಮಗೊಳಿಸಿಲ್ಲ. ಈ ನಡುವೆ ಪಡಿತರ ವಿತರಿಸಲು ಬಳಸುವ ಬ್ಯಾಗ್ಗಳ ಮೇಲೆ ಪ್ರಧಾನಿಯವರ ಭಾವಚಿತ್ರವನ್ನು ಮುದ್ರಿಸಲು ನಿರಾಕರಿಸಿದ್ದಕ್ಕಾಗಿ ಮೋದಿ ಸರ್ಕಾರವು ಪಶ್ಚಿಮ ಬಂಗಾಳದಿಂದ ಹಣವನ್ನು ತಡೆಹಿಡಿದಿದೆ.
ಇದನ್ನೂ ಓದಿ:ಇಸ್ಲಾಂಗೆ ಮತಾಂತರಗೊಂಡವರಿಗೂ ಮೀಸಲಾತಿ ವಿಸ್ತರಣೆ ಬಗ್ಗೆ ಚಿಂತನೆ – ತಮಿಳುನಾಡು ಸಿಎಂ
ಅದಾಗ್ಯೂ, ಈ ತಿಂಗಳ ಆರಂಭದಲ್ಲಿ, ಕೇರಳ ಮುಖ್ಯಮಂತ್ರಿ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ) ನಾಯಕ ಪಿಣರಾಯಿ ವಿಜಯನ್ ಅವರು PMGKAY ಅಡಿಯಲ್ಲಿ ದೊಡ್ಡ ಪಡಿತರ ಅಂಗಡಿಗಳಲ್ಲಿ ಪ್ರಧಾನಿ ನರೇಂದ್ರ ಅವರ ಕಟ್ಔಟ್ಗಳನ್ನು ಒಳಗೊಂಡ ಸೆಲ್ಫಿ ಪಾಯಿಂಟ್ಗಳನ್ನು ಅಳವಡಿಸುವ ಕೇಂದ್ರ ಸರ್ಕಾರದ ನಿರ್ದೇಶನವನ್ನು ತಿರಸ್ಕರಿಸಿದ್ದರು.
22024ರ ಚುನಾವಣೆಗೆ ಮುಂಚಿತವಾಗಿ ಇಂತಹ ಬ್ರ್ಯಾಂಡಿಂಗ್ ಪ್ರಕ್ರಿಯೆ ಪ್ರಾರಂಭವಾಯಿತು ಎಂದು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ದಿ ಹಿಂದೂ ವರದಿ ಹೇಳಿದೆ. 2021 ರ ವೇಳೆಗೆ ಭಾರತದ ಕೊರನಾ ವ್ಯಾಕ್ಸಿನೇಷನ್ ಪ್ರಮಾಣಪತ್ರಗಳಲ್ಲಿ ಪ್ರಧಾನ ಮಂತ್ರಿಯವರ ಫೋಟೋ ಇದೆ ಎಂಬ ಸುದ್ದಿ ಜಾಗತಿಕವಾಗಿ ವ್ಯಾಪಕ ವ್ಯಂಗ್ಯಕ್ಕೆ ಈಡಾಗಿತ್ತು.
ವಿಡಿಯೊ ನೋಡಿ: ಕರ್ನಾಟಕದ 2024-25 ಬಜೆಟ್ ನ ಆಳ ಅಗಲವೇನು? Janashakthi Media