ಮಣಿಪುರಕ್ಕಿಂತ ಇಸ್ರೇಲ್‌ ಬಗ್ಗೆ ಪ್ರಧಾನಿ ಮೋದಿಗೆ ಹೆಚ್ಚು ಕಾಳಜಿ : ರಾಹುಲ್‌ ಗಾಂಧಿ

ಐಝ್ವಾಲ್:  ಜನಾಂಗೀಯ ಸಂಘರ್ಷದಿಂದ ನಲುಗಿರುವ ಮಣಿಪುರಕ್ಕಿಂತ ಇಸ್ರೇಲ್‌ ರಾಷ್ಟ್ರದ ಬಗ್ಗೆಯೇ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಹೆಚ್ಚು ಕಾಳಜಿ ಇದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸೋಮವಾರ ಕಿಡಿಕಾರಿದ್ದಾರೆ. ಪ್ರಧಾನಿ

ಮಿಜೋರಾಂನಲ್ಲಿ ವಿಧಾನಸಭಾ ಚುನಾವಣೆ ಹತ್ತಿರಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಐಝ್ವಾಲ್’ನಲ್ಲಿ ಪಾದಯಾತ್ರೆ ಕೈಗೊಂಡಿದ್ದಾರೆ. ಪಾದಯಾತ್ರೆ ವೇಳೆ ಇಲ್ಲಿನ ರಾಜಭವನದ ಬಳಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಆವರು, ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ನೆರೆಯ ಮಣಿಪುರ ಈಗ ಏಕೀಕೃತ ರಾಜ್ಯವಾಗಿ ಉಳಿದಿಲ್ಲ. ಜನಾಂಗೀಯ ರೇಖೆಗಳ ಎರಡು ರಾಜ್ಯಗಳಾಗಿ ವಿಂಗಡಿಸಲಾಗಿದೆ ಎಂದು ಹೇಳಿದರು.

ಮಣಿಪುರದ ಬದಲಾಗಿ ಪ್ರಧಾನಿ ಮೋದಿ ಹಾಗೂ ಕೇಂದ್ರ ಸರ್ಕಾರಕ್ಕೆ ಇಸ್ರೇಲ್ (ಇಸ್ರೇಲ್-ಹಮಾಸ್ ಸಂಘರ್ಷ)ನಲ್ಲಿ ನಡೆಯುತ್ತಿರುವ ಯುದ್ಧದ ಬಗ್ಗೆಯೇ ತುಂಬಾ ಆಸಕ್ತಿ ಹೊಂದಿದ್ದಾರೆ. ಆದರೆ ಮಣಿಪುರದ ಬಗ್ಗೆ ಇವರಿಗೆ ಆಸಕ್ತಿಯಿಲ್ಲ. ಮಣಿಪುರದಲ್ಲಿ ಜನರು ಹತ್ಯೆಗೀಡಾಗಿದ್ದರು. ಮಹಿಳೆಯರಿಗೆ ಕಿರುಕುಳ ನೀಡಲಾಗಿತ್ತು. ಮಕ್ಕಳನ್ನು ಹತ್ಯೆ ಮಾಡಲಾಗಿತ್ತು ಎಂದು ಹೇಳಿದರು.

ಇದನ್ನೂ ಓದಿ: ಬಿ‌ಜೆ‌ಪಿ-ಜೆ‌ಡಿ‌ಎಸ್ ಮೈತ್ರಿಗೆ ಟಕ್ಕರ್ ಕೊಡಲು ಮುಂದಾದ ಸಿ.ಎಂ. ಇಬ್ರಾಹಿಂ

ಪರಸ್ಪರ ಗೌರವಿಸುವುದು, ಇತರೆ ವಿಚಾರಗಳು, ಧರ್ಮಗಳು, ಭಾಷೆಗಳ ಕಲಿಯುವುದು, ತನ್ನನ್ನು ತಾನು ಪ್ರೀತಿಸುವುದು ನಮ್ಮ ಕಲ್ಪನೆಯಾಗಿದೆ. ಇವುಗಳ ಮೇಲೆ ಬಿಜೆಪಿಯ ದಾಳಿಯಾಗುತ್ತಿದೆ. ವಿವಿಧ ಸಮುದಾಯಗಳು, ಧರ್ಮಗಳು, ಭಾಷೆಗಳ ಮೇಲೆ ಅವರು ದಾಳಿ ಮಾಡುತ್ತಿದ್ದಾರೆ. ದ್ವೇಷ ಮತ್ತು ಹಿಂಸಾಚಾರವನ್ನು ಹರಡುತ್ತಿದ್ದಾರೆ. ಇದು ಭಾರತದ ಕಲ್ಪನೆಗೆ ಸಂಪೂರ್ಣವಾಗಿ ವಿರುದ್ಧವಾಗಿದೆ ಎಂದು ರಾಹುಲ್‌ ಆಕ್ರೋಶ ವ್ಯಕ್ತಪಡಿಸಿದರು.

ಮಿಜೋರಾಂ ವಿಧಾಸಭೆ ಚುನಾವಣೆಯು ನವೆಂಬರ್‌ 7ರಂದು ನಡೆಯಲಿದೆ.

ವಿಡಿಯೋ ನೋಡಿ: ಅಯ್ಯೋ ಹೊಟ್ಟೆನೋವು| ಹದಿಹರಯದ ಹುಡುಗಿಯರ ಮುಟ್ಟಿನ ಸಮಸ್ಯೆಗಳೇನು? ಡಾ ವೀಣಾ ಎನ್‌ ಸುಳ್ಯ ಹೇಳುವುದೇನು?

Donate Janashakthi Media

Leave a Reply

Your email address will not be published. Required fields are marked *