ಪಿಎಂ-ಕೇರ್ಸ್ ನಿಧಿ ಭಾರತ ಸರ್ಕಾರದಲ್ಲ: ದಿಲ್ಲಿ ಹೈಕೋರ್ಟ್‍ಗೆ ಕೇಂದ್ರ ಸರಕಾರ ಹೇಳಿಕೆ

ನವದೆಹಲಿ: ಪಿಎಂ-ಕೇರ್ಸ್ ನಿಧಿ ಭಾರತ ಸರ್ಕಾರದ ಸಂಸ್ಥೆಯಲ್ಲ ಹಾಗೂ ಈ ಟ್ರಸ್ಟ್‌ಗೆ ಹರಿದು ಬರುವ ಹಣ ಕನ್ಸಾಲಿಡೇಟೆಡ್ ಫಂಡ್ ಆಫ್ ಇಂಡಿಯಾಗೆ ಸೇರುವುದಿಲ್ಲ ಎಂದು ಪ್ರಧಾನಿ ಕಾರ್ಯಾಲಯದ ಅಧೀನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶ್ರೀವಾಸ್ತವ ಅವರು ದೆಹಲಿ ಹೈಕೋರ್ಟ್‍ಗೆ ತಿಳಿಸಿದ್ದಾರೆ.

ಭಾರತದ ಕಾನೂನಿನಡಿ ಚ್ಯಾರಿಟೇಬಲ್ ಟ್ರಸ್ಟ್ ಆಗಿರುವ ಪಿಎಂ-ಕೇರ್ಸ್‌ ನಿಧಿಯು ಟ್ರಸ್ಟ್ ಪಾರದರ್ಶಕತೆಯಿಂದ ಕಾರ್ಯನಿರ್ವಹಿಸುತ್ತದೆ ಮತ್ತು ಅದರ ಹಣವನ್ನು ಲೆಕ್ಕಪರಿಶೋಧಕರಿಂದ ಲೆಕ್ಕಪರಿಶೋಧಿಸಲಾಗುತ್ತದೆ ಎಂದಿದೆ.

ಮುಖ್ಯ ನ್ಯಾಯಮೂರ್ತಿ ಡಿ.ಎನ್.ಪಟೇಲ್ ಮತ್ತು ನ್ಯಾಯಮೂರ್ತಿ ಅಮಿತ್ ಬನ್ಸಾಲ್ ಅವರ ಪೀಠದ ಮುಂದೆ ವಿಚಾರಣೆ ನಡೆದಿದೆ.

ಇದನ್ನು ಓದಿ: ಕೋವಿಡ್ ಲಸಿಕೆ, ಆಮ್ಲಜನಕ ಸ್ಥಾವರಗಳಿಗಾಗಿ ಪಿಎಂ ಕೇರ್ಸ್ ನಿಧಿ ಬಳಸಲು ಸೂಚಿಸುವಂತೆ ಕೋರಿ ಸುಪ್ರೀಂಗೆ ಅರ್ಜಿ

ಪ್ರಧಾನಮಂತ್ರಿ ಮತ್ತು ಪ್ರಧಾನ ಮಂತ್ರಿಗಳು ಮತ್ತು ಗೃಹ, ರಕ್ಷಣಾ ಮತ್ತು ಹಣಕಾಸು ಮಂತ್ರಿಗಳ ಟ್ರಸ್ಟಿಗಳಿಂದ ಸ್ಥಾಪಿಸಲ್ಪಟ್ಟ ನಿಧಿಯನ್ನು ಸರ್ಕಾರದ ನಿಯಂತ್ರಣವಿಲ್ಲದ ನಿಧಿಯಾಗಿ ಘೋಷಿಸಲಾಗಿದೆ ಎಂದು ದೇಶದ ನಾಗರಿಕರು ಅಸಮಾಧಾನ ಹೊಂದಿದ್ದಾರೆ ಎಂದು ಮನವಿಯಲ್ಲಿ ಪ್ರತಿಪಾದಿಸಲಾಗಿದೆ.

ಸಂವಿಧಾನದ 12ನೇ ವಿಧಿಯನ್ವಯ ಈ ಪಿಎಂ-ಕೇರ್ಸ್ ಫಂಡ್ ಅನ್ನು ಸರಕಾರಿ ಫಂಡ್ ಎಂದು ಘೋಷಿಸಬೇಕೆಂದು ಕೋರಿ ಸಂಯಕ್ ಗಂಗ್ವಾಲ್ ಎಂಬವರು ಸಲ್ಲಿಸಿರುವ ಅರ್ಜಿಗೆ ಪ್ರತಿಕ್ರಿಯೆಯಾಗಿ ಸರ್ಕಾರ ಈ ಹೇಳಿಕೆಯನ್ನು ನ್ಯಾಯಾಲಯದ ಮುಂದಿಟ್ಟಿದೆ. ಪ್ರಧಾನಿಯಿಂದ ಸ್ಥಾಪಿಸಲ್ಪಟ್ಟ ಹಾಗೂ ಗೃಹ, ರಕ್ಷಣಾ, ವಿತ್ತ ಸಚಿವರು ಟ್ರಸ್ಟೀಗಳಾಗಿರುವ ಈ ಫಂಡ್ ಮೇಲೆ ಸರ್ಕಾರದ ನಿಯಂತ್ರಣವಿಲ್ಲವೆಂದು ತಿಳಿದು ನಾಗರಿಕರು ಕಳವಳಗೊಂಡಿದ್ದಾರೆಂದು ಅರ್ಜಿಯಲ್ಲಿ ದೂರಲಾಗಿತ್ತು.

ತಾವು ಟ್ರಸ್ಟ್ ನಲ್ಲಿ ಗೌರವ ಹುದ್ದೆಯಲ್ಲಿ ಕೆಲಸ ಮಾಡುತ್ತಿರುವುದಾಗಿ, ಅದು ಪಾರದರ್ಶಕವಾಗಿ ಕಾರ್ಯಾಚರಿಸುತ್ತಿದೆ ಹಾಗೂ ಲೆಕ್ಕಪತ್ರಗಳನ್ನು ಭಾರತದ ಸಿಎಜಿ  ರಚಿಸಿರುವ ಸಮಿತಿಯ ಲೆಕ್ಕಪರಿಶೋಧಕರೊಬ್ಬರು  ನೋಡಿಕೊಳ್ಳುತ್ತಿದ್ದಾರೆಂದೂ ನ್ಯಾಯಾಲಯಕ್ಕೆ ಅವರು ಹೇಳಿದರು.

“ಪಾರದರ್ಶಕತೆಗಾಗಿ ಆಡಿಟ್ ವರದಿಯನ್ನು ಟ್ರಸ್ಟ್ ನ ಅಧಿಕೃತ ವೆಬ್‍ಸೈಟ್‍ನಲ್ಲಿ ನೀಡಲಾಗಿದ್ದು ಟ್ರಸ್ಟ್ ಹಣ ವ್ಯಯಿಸಲಾದ ಕುರಿತು ಮಾಹಿತಿಯೂ ಅದರಲ್ಲಿದೆ” ಎಂದು ಅವರು ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *