ಕಲಬುರಗಿ | ಬಹುತ್ವ ಭಾರತ ಉಳಿಸುವುದು ಅಗತ್ಯ : ದಾಕ್ಷಾಯಿಣಿ ಶರಣಬಸಪ್ಪ ಅಪ್ಪ

ಕಲಬುರ್ಗಿ : ಭವಿಷ್ಯಕ್ಕಾಗಿ ಬಹುತ್ವ ಭಾರತ ಉಳಿಸುವುದು ಅಗತ್ಯವಾಗಿದ್ದು, ಇದಕ್ಕೆ ಸಂಸ್ಥಾನ ಸಂಪೂರ್ಣ ಸಹಕಾರ ನೀಡುತ್ತದೆ ಎಂದು ದಾಕ್ಷಾಯಿಣಿ ಶರಣಬಸಪ್ಪ ಅಪ್ಪ ಹೇಳಿದರು.

ಬಹುತ್ವ ಸಂಸ್ಕೃತಿ ಭಾರತೋತ್ಸವ -2025ರ ಕಲಬುರಗಿ ಚಲೋ’ ಕಾರ್ಯಕ್ರಮಕ್ಕೆ ನಗರದ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಅಧಿಕೃತವಾಗಿ ಚಾಲನೆ ನೀಡಿ ಅವರು ಮಾತನಾಡಿದರು.ಈ ವೇಳೆ ಮುಖ್ಯ ಅತಿಥಿಗಳಾಗಿ ನಿವೃತ್ತ ಕುಲಪತಿ ಪ್ರೊ.ಸಬಿಹಾ ಭೂಮಿಗೌಡ ಮತ್ತಿತರರು ಉಪಸ್ಥಿತರಿದ್ದರು.

ಮುಖ್ಯ ಅತಿಥಿಗಳಾಗಿ ನಿವೃತ್ತ ಕುಲಪತಿಗಳಾದ ಪ್ರೊ. ಸಬೀಹಾ ಭೂಮಿಗೌಡ ಅವರು ಭಾಗವಹಿಸಿ ಮಾತನಾಡಿದರು. ಕೋಮುವಾದೀಕರಣ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಇಂತಹದೊಂದು ಕಾರ್ಯಕ್ರಮ ಸೌಹಾರ್ದತೆಯ ಉಳಿಸುವ ಜರೂರಿ ಇದೆ. ಕಲ್ಯಾಣ ಕರ್ನಾಟಕ ಸೌಹಾರ್ದ ತೆಯ ತಾಣ. ಸೌಹಾರ್ದತೆಯ ಉಳಿವಿಗಾಗಿ ಮಾಡುತ್ತಿರುವ ಈ ಸೌಹಾರ್ದ ಸಂಸ್ಕೃತಿ ಭಾರತೋತ್ಸವ ಇಡೀ ಕರ್ನಾಟಕಕ್ಕೇ ಮಾದರಿಯಾಗಿದೆ ಎಂದು ಮಾತನಾಡಿದರು.

ಶರಣಬಸವೇಶ್ವರ ದೇವಸ್ಥಾನದಿಂದ ಶುರುವಾದ ವಾಹನ ಜಾಥಾವನ್ನು ಸೆಂಟ್ ಮೇರಿ ಚರ್ಚ್ ನ ಫಾದರ್ ಅವರು ಶುಭಕೋರಿ ಮಾತನಾಡಿದರು. ಅಲ್ಲಿಂದ ಸರ್ದಾರ್ ವಲ್ಲಭಾಯಿ ಪಟೇಲ್ ವೃತ್ತದಿಂದ ಹಾಯ್ದು ಜಗತ್ ವೃತ್ತದಲ್ಲಿ ಬಾಬಾ ಸಾಬ ಅಂಬೇಡ್ಕರ್ ಮತ್ತು ಬಸವಣ್ಣನವರ ಪುತ್ತಳಿಗಳಿಗೆ ಮಾಲಾರ್ಪಣೆ ಮಾಡಿ ಕ್ವಾಜಾ ಬಂದೇನವಾಸಜ ದರ್ಗಾದಲ್ಲಿ ಮುಕ್ತಾಯಗೊಂಡಿತು.

ಖ್ವಾಜಾ ಬಂದೇ ನವಾಜ ದರ್ಗಾದಿಂದ ಸೈಯದ್ ಶಾ ತಖಿಅಲ್ ಹುಸೇನಿ ಅವರು ದರ್ಗಾದದಲ್ಲಿ ಜಾಥಾವನ್ನು ಸ್ವಾಗತಿಸಿದರು. ಮಳಖೇಡನ ಸಜ್ಜಾದೆ ಸೈಯದ್ ಶಹಾ ಮುಸ್ತಫಾ ಖಾದ್ರಿ ಯವರು ಜಾಥಾವನ್ನು ಶುಭಕೋರಿ ಮಾತನಾಡಿದರು. ನೂರಾರು ವಾಹನಗಳು ಜಾಥಾದಲ್ಲಿ ಪಾಲ್ಗೊಂಡಿದ್ದವು.

ವಾಹನ ಜಾಥಾದಲ್ಲಿ ಕಾರ್ಯಕ್ರಮದ ಸಂಚಾಲಕರಾದ ಡಾ. ಮೀನಾಕ್ಷಿ ಬಾಳಿ, ಕೆ.ನೀಲಾ, ಆರ್.ಕೆ ಹುಡಗಿ, ಸುರೇಶ್ ಹಾದಿಮನಿ, ಮಹಮ್ಮದ್ ಅಫಜಲ್, ಕಾಶಿನಾಥ್ ಅಂಬಲಗೆ, ಪ್ರಭು ಖಾನಾಪುರೆ, ಅಬ್ದುಲ್ ಖಾದರ, ಅಬ್ದುಲ್ ರಹೀಂ, ರಿಜ್ವಾನ್ ಸಿದ್ದಿಕಿ, ಶಾಹನಾಜ್ ಅಖ್ತರ್, ಮಬೀನ್ ಅಹ್ಮದ್, ಲವಿತ್ರ ವಸ್ತ್ರದ್, ಸಲ್ಮಾನ್ ಖಾನ್,ರಾಜೇಂದ್ರ ರಾಜವಾಳ, ಟಿ. ಧನರಾಜ, ಮಹಾಂತೇಶ ಕಲಬುರಗಿ, ಸಿದ್ರಾಮ ನಾಡಗೇರಿ, ಪದ್ಮಾವತಿ ಅಂಬೊರೆ, ಮಹೇಶ್ ರಾಠೋಡ್, ಮೌಲಾ ಮುಲ್ಲಾ, ಪದ್ಮಿನಿ ಕಿರಣಗಿ, ಶಾಂತಾ ಘಂಟೆ, ಶ್ರೀಮಂತ ಬಿರಾದಾರ, ರವಿ ಸಜ್ಜನ, ಸುಧಾಮ ಧನ್ನಿ, ಸುಜಾತಾ, ಪ್ರಮೋದ ಪಾಂಚಾಳ, ಸೇರಿದಂತೆ ಹಲವಾರು ಮುಖಂಡರು ಪಾಲ್ಗೊಂಡಿದ್ದರು.

 

Donate Janashakthi Media

Leave a Reply

Your email address will not be published. Required fields are marked *